Job Description: ➤ ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಮೂಲದ ಜಾಗತಿಕ ಮಟ್ಟದ ಪ್ರಮುಖ ಸಂಶೋಧಕರು ಹಾಗೂ ತಂತ್ರಜ್ಞರನ್ನು ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆಕರ್ಷಿಸುವ ಮುಖ್ಯ ಉದ್ದೇಶದೊಂದಿಗೆ ಭಾರತ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರ (Principal Scientific Advisor) ನೇತೃತ್ವದ ಸಮಿತಿಯ ಅಡಿಯಲ್ಲಿ ಅನುಷ್ಠಾನಗೊಳ್ಳಲಿರುವ ಅತ್ಯಂತ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ರಿಸರ್ಚ್ ಚೇರ್’ (PMRC Scheme 2026) ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿ ಅರ್ಜಿಗಳನ್ನು ಆಹ್ವಾನಿಸಿದೆ. ➤ PMRC ಯೋಜನೆಯ ಮುಖ್ಯ ಉದ್ದೇಶಗಳು: - ಪ್ರತಿಭಾ ವಲಸೆ ತಡೆಗಟ್ಟುವುದು (Brain Gain): ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಮೂಲದ ಅತ್ಯುತ್ತಮ ವಿಜ್ಞಾನಿಗಳು, ಸಂಶೋಧಕರು ಮತ್ತು ನಾವೀನ್ಯತೆ (Innovation) ತಜ್ಞರನ್ನು ಭಾರತದ ಪ್ರಮುಖ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ರಾಷ್ಟ್ರೀಯ ಪ್ರಯೋಗಾಲಯಗಳೊಂದಿಗೆ ಜೋಡಿಸುವುದು ಇದರ ಪ್ರಮುಖ ಆಶಯವಾಗಿದೆ. - ಸಂಶೋಧನೆಗೆ ಉತ್ತೇಜನ: ಭಾರತದಲ್ಲಿ ಜಾಗತಿಕ ಗುಣಮಟ್ಟದ ಸಂಶೋಧನಾ ಪರಿಸರ ವ್ಯವಸ್ಥೆಯನ್ನು (Research Ecosystem) ನಿರ್ಮಿಸುವುದು. ➤ ಅರ್ಹತೆ ಹೊಂದಿರುವ ಸಂಶೋಧಕರು: - ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನಾಗರಿಕರು - ಒಸಿಐ ಕಾರ್ಡ್ ಹೊಂದಿರುವವರು - ಭಾರತೀಯ ಮೂಲದ ವ್ಯಕ್ತಿಗಳು ➤ ಯೋಜನೆಯ 13 ಆದ್ಯತಾ ವಲಯಗಳು: ಕೃತಕ ಬುದ್ಧಿಮತ್ತೆ ಕ್ವಾಂಟಮ್ ಕಂಪ್ಯೂಟಿಂಗ್ ಸೆಮಿಕಂಡಕ್ಟರ್‌ಗಳು ಇಂಧನ ಮತ್ತು ಹವಾಮಾನ ಬದಲಾವಣೆ ಸೈಬರ್ ಭದ್ರತೆ ಆರೋಗ್ಯ ಮತ್ತು ವೈದ್ಯಕೀಯ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಸುಧಾರಿತ ವಸ್ತುಗಳು ಬಾಹ್ಯಾಕಾಶ ಮತ್ತು ರಕ್ಷಣೆ ಮುಂದಿನ ಪೀಳಿಗೆಯ ಸಂವಹನ ತಂತ್ರಜ್ಞಾನ ಸುಧಾರಿತ ಉತ್ಪಾದನೆ ಕೃಷಿ ಮತ್ತು ಆಹಾರ ತಂತ್ರಜ್ಞಾನ ನೀಲಿ ಆರ್ಥಿಕತೆ ಮತ್ತು ಪರಮಾಣು ಶಕ್ತಿ ➤ ಯೋಜನೆಯ ಮೂರು ಪ್ರಮುಖ ಸ್ತಂಭಗಳು: 1.ಲೀಡ್ ಸಂಸ್ಥೆಗಳು : ಐಐಟಿ ದೆಹಲಿ, ಐಐಟಿ ಬಾಂಬೆ, ಐಐಟಿ ಮದ್ರಾಸ್, ಐಐಟಿ ಕಾನ್ಪುರ್, ಐಐಟಿ ಹೈದರಾಬಾದ್, ಐಐಟಿ ಧನ್‌ಬಾದ್ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (IISc) ಬೆಂಗಳೂರು ದೇಶದ ಪ್ರಮುಖ ಲೀಡ್ ಸಂಸ್ಥೆಗಳಾಗಿವೆ. 2.ಹೋಸ್ಟ್ ಸಂಸ್ಥೆಗಳು: ಎನ್‌ಐಆರ್‌ಎಫ್ (NIRF) ಒಟ್ಟಾರೆ ಅಥವಾ ಇಂಜಿನಿಯರಿಂಗ್ ವಿಭಾಗದಲ್ಲಿ ಟಾಪ್ 100 ರೊಳಗೆ ಇರುವ ಸಂಸ್ಥೆಗಳು ಅಥವಾ ರಿಸರ್ಚ್ ವಿಭಾಗದಲ್ಲಿ ಟಾಪ್ 50 ರೊಳಗೆ ಇರುವ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ರಾಷ್ಟ್ರೀಯ ಪ್ರಯೋಗಾಲಯಗಳು (DST, DBT, ICMR, CSIR ಅಡಿಯಲ್ಲಿ ಬರುವ ಸಂಸ್ಥೆಗಳು). 3.PMRC ಫೆಲೋಗಳು: ಆಯ್ಕೆಯಾಗುವ ಸಂಶೋಧಕರಿಗೆ ಈ ಕೆಳಗಿನ ಮೂರು ವಿಭಾಗಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ: - ಯಂಗ್ ರಿಸರ್ಚ್ ಫೆಲೋಗಳು (Young Research Fellows): ಆರಂಭಿಕ ಹಂತದ ಸಂಶೋಧಕರಿಗೆ. - ಸೀನಿಯರ್ ರಿಸರ್ಚ್ ಫೆಲೋಗಳು (Senior Research Fellows): ಅನುಭವಿ ಸಂಶೋಧಕರಿಗೆ. - ರಿಸರ್ಚ್ ಚೇರ್ಸ್ (Research Chairs): ಜಾಗತಿಕ ಮಟ್ಟದ ಪ್ರಮುಖ ಸಂಶೋಧನಾ ನಾಯಕರಿಗೆ.