* 2024 ನೇ ಸಾಲಿನ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿಯನ್ನು ʼಓಪನ್‌ಹೈಮರ್‌ʼ (Oppenheimer) ಹಾಗೂ ʼಪೂವರ್‌ ತಿಂಗ್ಸ್ʼ (Poor Things) ಎಂಬ ಎರಡು ಚಿತ್ರಗಳು ಹಂಚಿಕೊಂಡಿವೆ.* 81ನೇ ಸಾಲಿನ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ 2024 ನೇ ಸಾಲಿನ ಪ್ರಶಸ್ತಿಯನ್ನು 'ಓಪನ್ ಹೈಮಾರ್' ಚಿತ್ರ ಅತ್ಯತ್ತಮ ಸಿನಿಮಾ ಎನ್ನುವ ಶ್ರೇಯಾಗಿಟ್ಟಿಸಿಕೊಂಡು ಐದು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.* ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಈ ಅವಾರ್ಡ್ ಫಂಕ್ಷನ್ ನಡೆಯಿತು. ‘ಓಪನ್ಹೈಮರ್’ ಸಿನಿಮಾ 8 ವಿಭಾಗಗಳಲ್ಲಿ ಹಾಗೂ ‘ಬಾರ್ಬಿ’ (Barbie) ಸಿನಿಮಾ 9 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದವು. ಎರಡೂ ಸಿನಿಮಾಗಳು ಹಲವು ಪ್ರಶಸ್ತಿ ಗೆದ್ದಿವೆ. ಎರಡೂ ಚಿತ್ರಗಳು ಒಟ್ಟಿಗೆ ರಿಲೀಸ್ ಆಗಿ ಸದ್ದು ಮಾಡಿದ್ದವು.* ‘ಓಪನ್ಹೈಮರ್’ ಚಿತ್ರದ ನಿರ್ದೇಶನಕ್ಕಾಗಿ ಕ್ರಿಸ್ಟೋಫರ್ ನೋಲನ್ ಅವರಿಗೆ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಸಿಕ್ಕಿದೆ. ‘ಅತ್ಯುತ್ತಮ ಸಿನಿಮ್ಯಾಟಿಕ್ ಹಾಗೂ ಬಾಕ್ಸ್ ಆಫೀಸ್ ಅಚೀವ್ಮೆಂಟ್’ ಅವಾರ್ಡ್ ‘ಬಾರ್ಬಿ’ ಚಿತ್ರ ಪಡೆದಿದೆ. * ಅಣುಬಾಂಬ್ ಸೃಷ್ಟಿಕರ್ತನ ಜೀವನ ಚರಿತ್ರೆಯನ್ನು ಒಳಗೊಂಡ 'ಓಪನ್ ಹೈಮರ್' ಚಿತ್ರದ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರಿಗೆ 'ಅತ್ಯುತ್ತಮ ನಿರ್ದೇಶಕ' ಹಾಗೂ ಈ ಚಿತ್ರದ ನಾಯಕ ಕಿಲಿಯನ್ ಗೆ ಮರ್ಫಿ ಅವರಿಗೆ 'ಅತ್ಯುತ್ತಮ ನಟ' ಹಾಗೂ ರಾಬರ್ಟ್ ಡೌನಿ ಜೂನಿಯರ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ.* ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿಯ ಒಂಬತ್ತು ವಿಭಾಗಗಳಿಗೆ ನಾಮನಿರ್ದೇಶನಗೊಂಡಿದ್ದ 'ಬಾರ್ಬಿ' ಚಿತ್ರವನ್ನು ಹಿಂದಿಕ್ಕೆ 'ಪೂರ್ ಥಿಂಗ್ಸ್' ಅತ್ಯತ್ತಮ ಹಾಸ್ಯ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಈ ಚಿತ್ರದ ಅಭಿನಯಕ್ಕಾಗಿ ಅಮೇರಿಕಾದ ನಟಿ ಎಮ್ಮಾ ಸ್ಟೋನ್ ಅವರಿಗೆ 'ಅತ್ಯತ್ತಮ ನಟಿ' ಪ್ರಶಸ್ತಿ ದೊರಕಿದೆ.* ಈ ವರ್ಷದ ವಿಜೇತರ ಪಟ್ಟಿ ವಿವರ : - ಅತ್ಯುತ್ತಮ ಚಲನಚಿತ್ರ (ಡ್ರಾಮಾ) – ಓಪನ್‌ಹೈಮರ್- ಅತ್ಯುತ್ತಮ ಚಲನಚಿತ್ರ (ಸಂಗೀತ/ಹಾಸ್ಯ) – ಪೂವರ್‌ ತಿಂಗ್ಸ್- ಅತ್ಯುತ್ತಮ ನಿರ್ದೇಶಕ – ಕ್ರಿಸ್ಟೋಫರ್ ನೋಲನ್ (ಓಪನ್‌ಹೈಮರ್)- ಅತ್ಯುತ್ತಮ ನಟಿ (ಡ್ರಾಮಾ) – ಲಿಲಿ ಗ್ಲಾಡ್‌ಸ್ಟೋನ್ (ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್)- ಅತ್ಯುತ್ತಮ ನಟ (ಡ್ರಾಮಾ) – ಸಿಲಿಯನ್ ಮರ್ಫಿ (ಓಪನ್‌ಹೈಮರ್)- ಅತ್ಯುತ್ತಮ ನಟಿ (ಸಂಗೀತ/ಹಾಸ್ಯ) – ಎಮ್ಮಾ ಸ್ಟೋನ್ (ಪೂವರ್ ಥಿಂಗ್ಸ್)- ಅತ್ಯುತ್ತಮ ನಟ (ಸಂಗೀತ/ಹಾಸ್ಯ)- ಪಾಲ್ ಗಿಯಾಮಟ್ಟಿ (ದಿ ಹೋಲ್ಡವರ್ಸ್)- ಅತ್ಯುತ್ತಮ ಪೋಷಕ ನಟ- ರಾಬರ್ಟ್ ಡೌನಿ ಜೂನಿಯರ್ (ಓಪನ್‌ಹೈಮರ್)- ಅತ್ಯುತ್ತಮ ಪೋಷಕ ನಟಿ- ಡಾ’ವೈನ್ ಜಾಯ್ ರಾಂಡೋಲ್ಫ್ (ದಿ ಹೋಲ್ಡವರ್ಸ್)- ಅತ್ಯುತ್ತಮ ಅನಿಮೇಟೆಡ್ ಚಿತ್ರ – ದಿ ಬಾಯ್ ಅಂಡ್ ದಿ ಹೆರಾನ್- ಅತ್ಯುತ್ತಮ ಇಂಗ್ಲಿಷೇತರ ಭಾಷಾ ಚಲನಚಿತ್ರ – ಅನ್ಯಾಟಮಿ ಆಫ್ ಎ ಫಾಲ್ (ಫ್ರಾನ್ಸ್)- ಅತ್ಯುತ್ತಮ ಚಿತ್ರಕಥೆ – ಜಸ್ಟಿನ್ ಟ್ರೈಟ್ ಮತ್ತು ಆರ್ಥರ್ ಹರಾರಿ (ಅನ್ಯಾಟಮಿ ಆಫ್ ಎ ಫಾಲ್)- ಅತ್ಯುತ್ತಮ ಮೂಲ ಸ್ಕೋರ್- ಲುಡ್ವಿಗ್ ಗೊರಾನ್ಸನ್ (ಓಪನ್‌ಹೈಮರ್)- ಅತ್ಯುತ್ತಮ ಮೂಲ ಹಾಡು- ವಾಟ್‌ ವಾಸ್‌ ಐ ಮೇಡ್‌ ಫಾರ್‌ (ಬಾರ್ಬಿ)- ಸಿನಿಮೀಯ ಮತ್ತು ಬಾಕ್ಸ್ ಆಫೀಸ್ ಸಾಧನೆ – ಬಾರ್ಬಿ