* ಬಾಂಗ್ಲಾದೇಶದಲ್ಲಿ ಜನವರಿ 7ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಮತ್ತು ಅವಾಮಿ ಲೀಗ್ ಮುಖ್ಯಸ್ಥ ಶೇಖ್ ಹಸೀನಾ ಅವರು ಐದನೇ ಅವಧಿಗೆ ಬಾಂಗ್ಲಾದೇಶದ ಪ್ರಧಾನ ಮಂತ್ರಿಯಾಗಿ ಮರು ಆಯ್ಕೆಯಾಗಿದ್ದಾರೆ. * ಫಲಿತಾಂಶ ಪ್ರಕಟವಾದ ನಂತರ ಯಾವುದೇ ಘರ್ಷಣೆ ಅಥವಾ ಹಿಂಸಾಚಾರದಲ್ಲಿ ಪಾಲ್ಗೊಳ್ಳದಂತೆ ಪ್ರಧಾನಿಯವರ ಉಪ ಕಚೇರಿ ಕಾರ್ಯದರ್ಶಿ ಜನರಿಗೆ ಮನವಿ ಮಾಡಿದ್ದಾರೆ.* ಶೇಖ್ ಹಸೀನಾ 2,49,965 ಮತಗಳನ್ನು ಪಡೆದಿದ್ದರೆ, ಅವರ ಪ್ರತಿಸ್ಪರ್ಧಿಮತ್ತು ಬಾಂಗ್ಲಾದೇಶ ಸುಪ್ರೀಂ ಪಾರ್ಟಿಯ ಎಂ.ನಿಜಾಮುದ್ದೀನ್ ಲಷ್ಕರ್ ಕೇವಲ 469 ಮತಗಳನ್ನು ಪಡೆದಿದ್ದಾರೆ. ಸಂಸತ್ತಿನ 300 ಸ್ಥಾನಗಳ ಪೈಕಿ ಹಸೀನಾ ಅವರ ಪಕ್ಷ 223 ಸ್ಥಾನಗಳನ್ನು ಗೆದ್ದಿದೆ.ಹಸೀನಾ ಅವರು ಗೋಪಾಲ್ ಗಂಜ್ -3 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ 8ನೇ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.* ಬಾಂಗ್ಲಾದೇಶದ ಸಂಸತ್ ಕ್ಷೇತ್ರದಲ್ಲಿ 2,90,300 ಮತದಾರರಿದ್ದಾರೆ. ಇವರಲ್ಲಿ 1,48,691 ಪುರುಷರು ಮತ್ತು 1,41,608 ಮಹಿಳೆಯರಿದ್ದಾರೆ. ಶೇಖ್ ಹಸೀನಾ ಒಟ್ಟು 2,49,965 ಮತಗಳನ್ನು ಪಡೆದಿದ್ದಾರೆ.* ಚುನಾವಣೆಯಲ್ಲಿ ಗೆಲುವು ಸಾಧಿಸಿದ 76 ವರ್ಷದ ಶೇಖ್ ಹಸೀನಾ ಅವರು ಸತತ ನಾಲ್ಕನೇ ಬಾರಿಗೆ ಮತ್ತು ಒಟ್ಟು ಐದನೇ ಬಾರಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿದ್ದಾರೆ. ವಿರೋಧ ಪಕ್ಷಗಳು ಚುನಾವಣೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗಳನ್ನು ಆಯೋಜಿಸಿದ್ದರಿಂದ ಬಾಂಗ್ಲಾದೇಶದಾದ್ಯಂತ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಹಾಗಾಗಿ ಚುನಾವಣೆಯಲ್ಲಿ ಕೇವಲ ಶೇ.40ರಷ್ಟು ಮತದಾನ ಮಾತ್ರ ದಾಖಲಾಗಿದೆ. ಆದರೆ ಸಂಪೂರ್ಣ ಫಲಿತಾಂಶ ಇನ್ನೂ ಲಭ್ಯವಾಗಿಲ್ಲ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.