* ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿರುವ ಅಭಿಲಾಷ್ ಟೋಮಿ ಅವರು ಗೋಲ್ಡನ್ ಗ್ಲೊಬ್ ರೇಸ್(ವಿಶ್ವ ಸೇಲಿಂಗ್ ಚಾಂಪಿಯನ್ ಷಿಪ್)ಪೂರ್ಣಗೊಳಿಸಿದ ಭಾರತದ ಮೊದಲ ಸೇಲಿಂಗ್ ಸ್ಪರ್ಧಿ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.* ವಿಶ್ವ ಪರ್ಯಟನೆ ನಡೆಸುವ ಗೋಲ್ಡನ್ ಗ್ಲೊಬ್ ರೇಸ್ ನಲ್ಲಿ ಪಾಲ್ಗೊಂಡಿದ್ದ ಅಭಿಲಾಷ್ ಅವರು 236 ದಿನಗಳ ಕಾಲ ಸಮುದ್ರಯಾನದ ನಂತರ ಪ್ರೆಂಚ್ ಕರಾವಳಿ ತಲುಪಿ ದ್ವಿತೀಯ ಸ್ಥಾನ ಪಡೆದರು.* ಗೋಲ್ಡನ್ ಗ್ಲೊಬ್ ರೇಸ್ ನಲ್ಲಿ ದಕ್ಷಿಣ ಆಫ್ರಿಕಾದ ಕಿರ್ಸ್ಟನ್ ನ್ಯೂಶಫರ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.* ಏಕಾಂಗಿಯಾಗಿ ಸಮುದ್ರಯಾನ ಮಾಡುವ ಈ ಸ್ಪರ್ಧೆ 2022ರ ಸೆ. 4ರಂದು ಫ್ರಾನ್ಸ್ ನ ಲೆಸ್ ಸಬ್ಲ್ ದೋಲೋನ್ ಎಂಬಲ್ಲಿ ಪ್ರಾರಂಭವಾಗಿತ್ತು. ಅಭಿಲಾಷ್ ಅವರು ಬಯಾನತ್ ಹೆಸರಿನ ದೋಣಿಯಲ್ಲಿ ವಿಶ್ವ ಪರ್ಯಟನೆ ಮಾಡಿ ಶನಿವಾರ (ಎ.29) ಅದೇ ತನಕ್ಕ ತಲುಪಿ ದ್ವಿತೀಯ ಸ್ತಾನವನ್ನು ಪಡೆದುಕೊಂಡಿದ್ದಾರೆ.