➤ 2026ರ ಗಣರಾಜ್ಯೋತ್ಸವದ ಅದ್ಧೂರಿ ಪರೇಡ್‌ನಲ್ಲಿ ಭಾಗವಹಿಸಿದ ಅತ್ಯುತ್ತಮ ಸ್ತಬ್ಧಚಿತ್ರಗಳು ಮತ್ತು ಪಥಸಂಚಲನ ತಂಡಗಳ ಫಲಿತಾಂಶವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಬಾರಿ ತೀರ್ಪುಗಾರರ ಆಯ್ಕೆ (Judges' Choice) ಮತ್ತು ಸಾರ್ವಜನಿಕರ ಆಯ್ಕೆ (Popular Choice) ಎಂದು ಎರಡು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ.
➤ ತೀರ್ಪುಗಾರರ ಆಯ್ಕೆ (Judges' Choice Selection):ತಜ್ಞರ ಸಮಿತಿಯು ನೀಡಿದ ಅಂಕಗಳ ಆಧಾರದ ಮೇಲೆ ಘೋಷಿಸಲಾದ ಅಧಿಕೃತ ಪ್ರಶಸ್ತಿಗಳು ಇಲ್ಲಿವೆ:
=> ಅತ್ಯುತ್ತಮ ಸ್ತಬ್ಧಚಿತ್ರಗಳು (ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ):
1. ಪ್ರಥಮ ಸ್ಥಾನ: ಮಹಾರಾಷ್ಟ್ರ: ವಸ್ತು ವಿಷಯ: "ಗಣೇಶೋತ್ಸವ: ಆತ್ಮನಿರ್ಭರತೆಯ ಸಂಕೇತ". ಇಲ್ಲಿ ಸಾಂಪ್ರದಾಯಿಕ ಕಲೆ ಮತ್ತು ಆಧುನಿಕತೆಯ ಸಮ್ಮಿಲನವನ್ನು ಪ್ರದರ್ಶಿಸಲಾಯಿತು.
2. ದ್ವಿತೀಯ ಸ್ಥಾನ: ಜಮ್ಮು ಮತ್ತು ಕಾಶ್ಮೀರ : ವಸ್ತು ವಿಷಯ: "ಹಸ್ತಕಲೆ ಮತ್ತು ಜಾನಪದ ನೃತ್ಯಗಳು". ಕೇಂದ್ರಾಡಳಿತ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಇದು ಬಿಂಬಿಸಿತು.
3. ತೃತೀಯ ಸ್ಥಾನ: ಕೇರಳ: ವಸ್ತು ವಿಷಯ: "ವಾಟರ್ ಮೆಟ್ರೋ ಮತ್ತು 100% ಡಿಜಿಟಲ್ ಸಾಕ್ಷರತೆ". ನವ ಭಾರತದ ತಾಂತ್ರಿಕ ಪ್ರಗತಿಯನ್ನು ಕೇರಳ ಸುಂದರವಾಗಿ ಪ್ರದರ್ಶಿಸಿತು.
=> ಅತ್ಯುತ್ತಮ ಪಥಸಂಚಲನ ತಂಡಗಳು:
- ಮೂರು ಸೇನಾ ಪಡೆಗಳಲ್ಲಿ:ಭಾರತೀಯ ನೌಕಾಪಡೆ (Indian Navy) ತನ್ನ ಅಪ್ರತಿಮ ಶಿಸ್ತು ಮತ್ತು ಸಮನ್ವಯಕ್ಕಾಗಿ ಅಗ್ರಸ್ಥಾನ ಪಡೆದಿದೆ.
- ಅರೆಸೇನಾ ಪಡೆಗಳಲ್ಲಿ: ದೆಹಲಿ ಪೊಲೀಸ್ ಅತ್ಯುತ್ತಮ ಪಥಸಂಚಲನ ನೀಡಿದ ತಂಡವಾಗಿ ಹೊರಹೊಮ್ಮಿದೆ.
=> ಸಚಿವಾಲಯಗಳ ವಿಭಾಗ:
- ಸಂಸ್ಕೃತಿ ಸಚಿವಾಲಯ: "ವಂದೇ ಮಾತರಂ - ರಾಷ್ಟ್ರದ ಆತ್ಮದ ಕೂಗು" ಎಂಬ ವಿಷಯದಡಿ ಸ್ತಬ್ಧಚಿತ್ರ ಪ್ರದರ್ಶಿಸಿ ಮೊದಲ ಬಹುಮಾನ ಪಡೆದಿದೆ. ಇದು ವಂದೇ ಮಾತರಂ ಗೀತೆಯ 150 ವರ್ಷಗಳ ಇತಿಹಾಸವನ್ನು ಸಾರಿತು.
- ವಿಶೇಷ ಪ್ರಶಸ್ತಿ: ಕೇಂದ್ರ ಸಾರ್ವಜನಿಕ ಕಾಮಗಾರಿ ಇಲಾಖೆ (CPWD) ಮತ್ತು ‘ವಂದೇ ಮಾತರಂ’ ನೃತ್ಯ ತಂಡಕ್ಕೆ ವಿಶೇಷ ಗೌರವ ನೀಡಲಾಗಿದೆ.
➤ ಸಾರ್ವಜನಿಕರ ಆಯ್ಕೆ (Popular Choice - MyGov Poll): ಸಾರ್ವಜನಿಕರು MyGov ಪೋರ್ಟಲ್ ಮೂಲಕ ಮತ ಚಲಾಯಿಸಿ ಆಯ್ಕೆ ಮಾಡಿದ ವಿಜೇತರು:
=> ಅತ್ಯುತ್ತಮ ಸ್ತಬ್ಧಚಿತ್ರ (ರಾಜ್ಯಗಳು):
1. ಗುಜರಾತ್: (ವಿಷಯ: ವಂದೇ ಮಾತರಂ - ಸ್ವದೇಶಿ ಮಂತ್ರ)
2. ಉತ್ತರ ಪ್ರದೇಶ: (ವಿಷಯ: ಬುಂದೇಲ್‌ಖಂಡ್ ಸಂಸ್ಕೃತಿ)
3. ರಾಜಸ್ಥಾನ: (ವಿಷಯ: ಬಿಕಾನೆರ್ ಗೋಲ್ಡ್ ಆರ್ಟ್ - ಉಸ್ತಾ ಕಲೆ)
=> ಅತ್ಯುತ್ತಮ ಪಥಸಂಚಲನ (ಸೇನಾ ಪಡೆ): ಅಸ್ಸಾಂ ರೆಜಿಮೆಂಟ್
=> ಅತ್ಯುತ್ತಮ ಪಥಸಂಚಲನ (ಅರೆಸೇನಾ ಪಡೆ): CRPF
ಶುಕ್ರವಾರ, 30 ಜನವರಿ 2026
11:39 ಪೂರ್ವಾಹ್ನ
Daily PDF
ಗಣರಾಜ್ಯೋತ್ಸವ ಪರೇಡ್ 2026 : ಸ್ತಬ್ಧಚಿತ್ರ ವಿಭಾಗದಲ್ಲಿ ಮಹಾರಾಷ್ಟ್ರಕ್ಕೆ ಅಗ್ರಸ್ಥಾನ
Authored by:
Yallamma G