* ವಂತಾರ (Vantara) ವನ್ಯಜೀವಿ ಸಂರಕ್ಷಣಾ ಕೇಂದ್ರದ ಸಂಸ್ಥಾಪಕ ಹಾಗೂ ಯುವ ಉದ್ಯಮಿ ಅನಂತ್ ಅಂಬಾನಿ ಅವರಿಗೆ, ಗ್ಲೋಬಲ್ ಹ್ಯೂಮನ್ ಸೊಸೈಟಿ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಗ್ಲೋಬಲ್ ಹ್ಯೂಮ್ಯಾನಿಟೇರಿಯನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನು ಪಡೆದ ಏಷ್ಯಾದ ಅತ್ಯಂತ ಕಿರಿಯ ಮತ್ತು ಮೊದಲ ವ್ಯಕ್ತಿ ಎಂಬ ಮಹತ್ವದ ಗೌರವ ಅನಂತ್ ಅಂಬಾನಿಯವರ ಪಾಲಾಗಿದೆ.* ಅಮೆರಿಕದ ಅತ್ಯಂತ ಹಳೆಯ ಮತ್ತು ವಿಶ್ವಾಸಾರ್ಹ ಮಾನವೀಯ ಹಾಗೂ ಪ್ರಾಣಿ ಕಲ್ಯಾಣ ಸಂಸ್ಥೆಯಾಗಿರುವ ಅಮೆರಿಕನ್ ಹ್ಯೂಮನ್ ಸೊಸೈಟಿಯ ಅಂತರರಾಷ್ಟ್ರೀಯ ಬ್ರ್ಯಾಂಡ್ ಆಗಿರುವ ಗ್ಲೋಬಲ್ ಹ್ಯೂಮನ್ ಸೊಸೈಟಿ, ಪ್ರಾಣಿ ಕಲ್ಯಾಣ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಅಪಾರ ಸೇವೆ ಸಲ್ಲಿಸಿದವರಿಗೆ ಈ ಗೌರವವನ್ನು ನೀಡುತ್ತದೆ.* ಅನಂತ್ ಅಂಬಾನಿಯವರು ಸ್ಥಾಪಿಸಿದ ವಂತರಾ ವನ್ಯಜೀವಿ ಸಂರಕ್ಷಣಾ ಕೇಂದ್ರವು ಅಪಾಯದಲ್ಲಿರುವ ಪ್ರಾಣಿಗಳ ರಕ್ಷಣೆ, ಚಿಕಿತ್ಸಾ ಸೇವೆಗಳು, ಪುನರ್ವಸತಿ ಹಾಗೂ ಸಂರಕ್ಷಣಾ ಸಂಶೋಧನೆಯ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಪ್ರಾಣಿಗಳ ಕಲ್ಯಾಣಕ್ಕಾಗಿ ತೋರಿಸಿರುವ ಅವರ ನಿಸ್ವಾರ್ಥ ಸೇವೆ, ದೃಢ ಸಂಕಲ್ಪ ಮತ್ತು ನಾಯಕತ್ವವನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ.* ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಜಗತ್ತಿನ ಹಲವು ದೇಶಗಳ ವನ್ಯಜೀವಿ ತಜ್ಞರು ಮತ್ತು ಪ್ರಾಣಿ ಕಲ್ಯಾಣ ನಾಯಕರ ಸಮ್ಮುಖದಲ್ಲಿ ಈ ಗೌರವ ಅನಂತ್ ಅಂಬಾನಿಯವರಿಗೆ ಲಭಿಸಿದೆ. ಯುವ ವಯಸ್ಸಿನಲ್ಲೇ ಮಾನವೀಯತೆ, ಪ್ರಕೃತಿ ಸಂರಕ್ಷಣೆ ಹಾಗೂ ಪ್ರಾಣಿ ಹಕ್ಕುಗಳಿಗಾಗಿ ಅವರು ಕೈಗೊಂಡಿರುವ ಈ ಪ್ರಯತ್ನಗಳು ಅನೇಕ ಯುವಜನರಿಗೆ ಪ್ರೇರಣೆಯಾಗಿದೆ.