➤ ಜಾಗತಿಕ ಮಾರುಕಟ್ಟೆಯ ಏರಿಳಿತಗಳ ನಡುವೆಯೂ ಭಾರತೀಯ ಉದ್ಯಮಿಗಳ ನಡುವಿನ 'ಶ್ರೀಮಂತ' ಪೈಪೋಟಿ ಮುಂದುವರಿದಿದೆ. ಲೇಟೆಸ್ಟ್ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (Bloomberg Billionaires Index) ವರದಿಯ ಪ್ರಕಾರ, ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಮತ್ತೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.- ಗೌತಮ್ ಅದಾನಿ: ವಿಶ್ವದ 19ನೇ ಶ್ರೀಮಂತ (ನಿವ್ವಳ ಆಸ್ತಿ: ಸುಮಾರು ₹8.60 ಲಕ್ಷ ಕೋಟಿ / $92.4 ಬಿಲಿಯನ್).- ಮುಕೇಶ್ ಅಂಬಾನಿ: ವಿಶ್ವದ 20ನೇ ಶ್ರೀಮಂತ (ನಿವ್ವಳ ಆಸ್ತಿ: ಸುಮಾರು ₹8.43 ಲಕ್ಷ ಕೋಟಿ / $90.8 ಬಿಲಿಯನ್).- ಜಾಗತಿಕ ನಂ.1: ಎಲನ್ ಮಸ್ಕ್ (ಟೆಸ್ಲಾ ಸಿಇಒ).➤ ಅದಾನಿ ಆಸ್ತಿ ಏರಿಕೆಗೆ ಕಾರಣ: ಕಳೆದ ಕೆಲವು ತಿಂಗಳುಗಳಿಂದ ಅದಾನಿ ಸಮೂಹದ ಷೇರು ಮೌಲ್ಯದಲ್ಲಿ ಸತತ ಏರಿಕೆ ಕಂಡುಬರುತ್ತಿದೆ. ವಿಶೇಷವಾಗಿ ಬಂದರುಗಳು (Ports), ನವೀಕರಿಸಬಹುದಾದ ಇಂಧನ (Renewable Energy), ಮತ್ತು ವಿಮಾನ ನಿಲ್ದಾಣಗಳ ನಿರ್ವಹಣಾ ಕ್ಷೇತ್ರದಲ್ಲಿ ಅದಾನಿ ಸಮೂಹದ ಪ್ರಾಬಲ್ಯ ಹೆಚ್ಚಾಗಿದೆ. ಹಿಂಡೆನ್‌ಬರ್ಗ್ ವರದಿಯ ಹೊಡೆತದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಅದಾನಿ, ಈಗ ರಕ್ಷಣೆ, ಏರೋಸ್ಪೇಸ್ ಮತ್ತು ಡೇಟಾ ಸೆಂಟರ್‌ನಂತಹ ಭವಿಷ್ಯದ ಕ್ಷೇತ್ರಗಳಲ್ಲೂ ತಮ್ಮ ಸಾಮ್ರಾಜ್ಯ ವಿಸ್ತರಿಸಿದ್ದಾರೆ.➤ ಅಂಬಾನಿ-ಅದಾನಿ: ಇಬ್ಬರು ದಿಗ್ಗಜರ ನಡುವೆ ಕಳೆದ ಎರಡು ವರ್ಷಗಳಿಂದ ನಂ.1 ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ:- 2022 ಫೆಬ್ರವರಿ: ಮೊದಲ ಬಾರಿಗೆ ಅಂಬಾನಿಯನ್ನು ಅದಾನಿ ಹಿಂದಿಕ್ಕಿದ್ದರು.- 2023: ಹಿಂಡೆನ್‌ಬರ್ಗ್ ವರದಿಯಿಂದಾಗಿ ಅದಾನಿ ಆಸ್ತಿ ಕುಸಿದಾಗ ಅಂಬಾನಿ ಮತ್ತೆ ಮೊದಲ ಸ್ಥಾನಕ್ಕೇರಿದರು.- 2024-25: ಇಬ್ಬರ ನಡುವೆ ಸ್ಥಾನ ಬದಲಾವಣೆಗಳು ನಡೆಯುತ್ತಲೇ ಇದ್ದು, ಪ್ರಸ್ತುತ ಏಪ್ರಿಲ್ 2026ರ ಹೊತ್ತಿಗೆ ಅದಾನಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.➤ ಜಾಗತಿಕ ಶ್ರೀಮಂತರ ಪಟ್ಟಿ:1. ಎಲನ್ ಮಸ್ಕ್: ಟೆಸ್ಲಾ / ಸ್ಪಾಸ್ಸ್:$656 ಬಿಲಿಯನ್2. ಲ್ಯಾರಿ ಪೇಜ್: ಆಲ್ಫಾಬೆಟ್ (ಗೂಗಲ್): $286 ಬಿಲಿಯನ್3. ಜೆಫ್ ಬೆಜೋಸ್: ಅಮೆಜಾನ್: $269 ಬಿಲಿಯನ್19.  ಗೌತಮ್ ಅದಾನಿ: ಅದಾನಿ ಸಮೂಹ :  $92.4 ಬಿಲಿಯನ್20 . ಮುಕೇಶ್ ಅಂಬಾನಿ: ರಿಲಯನ್ಸ್ : $90.8 ಬಿಲಿಯನ್➤ ಪಟ್ಟಿಯಲ್ಲಿರುವ ಇತರ ಪ್ರಮುಖ ಭಾರತೀಯರು:  ವಿಶ್ವದ ಟಾಪ್ 500 ಶ್ರೀಮಂತರ ಪಟ್ಟಿಯಲ್ಲಿ ಭಾರತದ ಇತರ ಪ್ರಮುಖ ಉದ್ಯಮಿಗಳು ಕೂಡ ಸ್ಥಾನ ಪಡೆದಿದ್ದಾರೆ:1. ಲಕ್ಷ್ಮಿ ಮಿತ್ತಲ್: 62ನೇ ಸ್ಥಾನ ($36.9 ಬಿಲಿಯನ್)2. ಶಿವ ನಾಡಾರ್: 70ನೇ ಸ್ಥಾನ ($33.5 ಬಿಲಿಯನ್)3. ಶಪೂರ್ ಮಿಸ್ತ್ರಿ: 71ನೇ ಸ್ಥಾನ ($33.2 ಬಿಲಿಯನ್)4. ಸಾವಿತ್ರಿ ಜಿಂದಾಲ್: 73ನೇ ಸ್ಥಾನ ($32.7 ಬಿಲಿಯನ್)➤ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್: ಇದು ವಿಶ್ವದ ಶ್ರೀಮಂತ ವ್ಯಕ್ತಿಗಳ ದೈನಂದಿನ ಆಸ್ತಿ ಮೌಲ್ಯವನ್ನು ಆಧರಿಸಿ ನೀಡುವ ಶ್ರೇಣಿಯಾಗಿದೆ.