* ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳಲ್ಲಿ ನಿರ್ದೇಶಕರು ಮತ್ತು ಸಿಇಒಗಳನ್ನು ಆಯ್ಕೆ ಮಾಡುವ ನೋಡಲ್ ಸಂಸ್ಥೆಯಾದ ಹಣಕಾಸು ಸೇವಾ ಸಂಸ್ಥೆಗಳ ಬ್ಯೂರೋ (FSBI) ರಾಣಾ ಅಶುತೋಷ್ ಕುಮಾರ್ ಸಿಂಗ್ ಅವರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ದಲ್ಲಿ ವಸ್ಥಾಪಕ ನಿರ್ದೇಶಕರಾಗಿ (ಎಂಡಿ) ವಹಿಸಿಕೊಳ್ಳುವಂತೆ ಶಿಫಾರಸು ಮಾಡಿದೆ.* ಎಸ್‌ಬಿಐನಲ್ಲಿ ಎಂಡಿ ಹುದ್ದೆಗಾಗಿ ಏಪ್ರಿಲ್ 23 ಮತ್ತು ಏಪ್ರಿಲ್ 24 ರಂದು 16 ಅಭ್ಯರ್ಥಿಗಳೊಂದಿಗೆ ಸಂದರ್ಶನಗಳನ್ನು ನಡೆಸಿದ ನಂತರ ಮತ್ತು ಅವರ ಕಾರ್ಯಕ್ಷಮತೆ, ಒಟ್ಟಾರೆ ಅನುಭವ ಮತ್ತು ಅಸ್ತಿತ್ವದಲ್ಲಿರುವ ಮಾನದಂಡಗಳನ್ನು ಪರಿಗಣಿಸಿದ ನಂತರ, ಹಣಕಾಸು ಸೇವಾ ಸಂಸ್ಥೆಗಳ ಬ್ಯೂರೋ ಎಂಡಿ ಪಾತ್ರಕ್ಕಾಗಿ ರಾಣಾ ಅಶುತೋಷ್ ಕುಮಾರ್ ಅವರ ಉಮೇದುವಾರಿಕೆಯನ್ನು ಅನುಮೋದಿಸಿದೆ".* ರಾಣಾ ಅಶುತೋಷ್ ಕುಮಾರ್ ಸಿಂಗ್ ಅವರು ಈ ಹಿಂದೆ ಎಸ್‌ಬಿಐನಲ್ಲಿ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. 32 ವರ್ಷಗಳ ಅವಧಿಯಲ್ಲಿ ಸಿಂಗ್ ಅವರು ಬ್ಯಾಂಕಿನ ವಿವಿಧ ಸ್ಥಳಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.* ಇದಲ್ಲದೆ, ಇಂಡಿಯನ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (MD ಮತ್ತು CEO) ಸ್ಥಾನಕ್ಕೆ FSIB ಆಶೀಶ್ ಪಾಂಡೆ ಅವರ ಹೆಸರನ್ನು ಮುಂದಿಟ್ಟಿದೆ. ಎಫ್‌ಎಸ್‌ಐಬಿಯಿಂದ ಈ ಶಿಫಾರಸುಗಳ ಕುರಿತು ಅಂತಿಮ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ತೆಗೆದುಕೊಳ್ಳುತ್ತದೆ.