* ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 23,251.66 ಕೋಟಿ ರೂ. ಗಳ ಮಹತ್ವಾಕಾಂಕ್ಷೆಯ ಮೊದಲ ಹಂತದ ಕುಡಿಯುವ ನೀರಿನ ಎತ್ತಿನಹೊಳೆ ಯೋಜನೆಗೆ ಸೆಪ್ಟೆಂಬರ್ 06 ರಂದು (ಶುಕ್ರವಾರ) ಚಾಲನೆ ನೀಡಿದರು. ಈ ಯೋಜನೆಯನ್ನು ಮಾರ್ಚ್ 31, 2027 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ.* ಎತ್ತಿನಹೊಳೆ ಯೋಜನೆ ಮೂಲಕ ಹಾಸನ, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಬರಪೀಡಿತ 29 ತಾಲೂಕು, 38 ಪಟ್ಟಣ ಪ್ರದೇಶ ಹಾಗೂ 6,657 ಗ್ರಾಮಗಳ 75.59 ಲಕ್ಷ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು.* ಪೂರ್ವಾಭಿಮುಖವಾಗಿ ಹರಿಯುವ ಎತ್ತಿನಹೊಳೆಯನ್ನು ಪಶ್ಚಿಮಾಭಿಮುಖವಾಗಿ ತಿರುಗಿಸುವುದು. ಜೊತೆಗೆ ಕಾಡುಮನೆಹೊಳೆ, ಕೇರಿಹೊಳೆ, ಎತ್ತಿನಹಳ್ಳ ಕೆಳಭಾಗ, ಹೊಂಗಡಹಳ್ಳಗಳಿಂದಲೂ ನೀರು ಬಳಸಿಕೊಳ್ಳಲಾಗುತ್ತದೆ. ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಯೋಜನೆಗೆ ಬಳಸಿಕೊಳ್ಳಲಾಗುತ್ತದೆ.* 2014ರಲ್ಲಿ ಈ ಯೋಜನೆಯ ಅಂದಾಜು ಮೊತ್ತ 12,912.36 ಕೋಟಿ ರೂ. ಪ್ರಸ್ತುತ ಯೋಜನೆಯ ಅಂದಾಜು : 23,251.66 ಕೋಟಿ ರೂ. ಈವರೆಗೆ ಆಗಿರುವ ವೆಚ್ಚ 16,152.05 ಕೋಟಿ ರೂ. ವೆಚ್ಚವಾಗಿದೆ.* ಬರಪೀಡಿತ ಪ್ರದೇಶಗಳಲ್ಲಿ ವಿಶೇಷವಾಗಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹಾಗು ಹಾಸನ, ಚಿಕ್ಕಮಗಳೂರು, ತುಮಕೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಇತರ ಅಗತ್ಯವಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ತಗ್ಗಿಸುವುದು ಯೋಜನೆಯ ಉದ್ದೇಶವಾಗಿದೆ.* ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿ ಹೊಳೆ ಮತ್ತು ಹೊಂಗಡ ಹಳ್ಳದಿಂದ ಮಳೆಗಾಲದಲ್ಲಿ ಲಭ್ಯವಿರುವ 24.01 ಟಿಎಂಸಿ ನೀರನ್ನು ಈ ಯೋಜನೆ ಬಳಸಿಕೊಳ್ಳಲಿದೆ.- ಈ ಯೋಜನೆಯ ಎರಡನೇ ಹಂತ: * ಗುರುತ್ವ ಮುಖ್ಯ ಕಾಲುವೆ: 8638.37 ಕೋಟಿ ರೂ.* ಫೀಡರ್ ಪೈಪ್‌ ಲೈನ್ ಕಾಮಗಾರಿ: 8858.25 ಕೋಟಿ ರೂ.* ಸಮತೋಲನ ಜಲಾಶಯ: 592.34 ಕೋಟಿ ರೂ.* ಒಟ್ಟು ಕಾಲುವೆ ಉದ್ದ : 252.61 ಕಿ.ಮೀ* ಪ್ರತಿವರ್ಷ ಜೂನ್ 15ರಿಂದ ಅಕ್ಟೋಬರ್ 31ರವರೆಗೂ 139 ದಿನ ಮಾತ್ರ ನೀರು ಎತ್ತಲಾಗುತ್ತದೆ.* 60 ದಿನಗಳ ಕಾಲ ನಿತ್ಯ 1,500 ಕ್ಯುಸೆಕ್ ನೀರನ್ನು ಗುರುತ್ವ ಕಾಲುವೆಯ 32.50 ಕಿ.ಮೀನಲ್ಲಿ ನಾಲಾ ಎಸ್ಕೆಪ್ ಮೂಲಕ 132.50 ಕಿಮೀ ದೂರದ ಚಿತ್ರದುರ್ಗ ಜಿಲ್ಲೆ ವಾಣಿವಿಲಾಸ ಸಾಗರಕ್ಕೆ ಹರಿಸಲಾಗುತ್ತದೆ.