* ಎಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಸತತ 9ನೇ ದಿನವೂ ಪದಕ ಬೇಟೆ ಮುಂದುವರಿಸಿದ್ದು, ಒಂದು ರಜತ, ನಾಲ್ಕು ಕಂಚಿನ ಪದಕಕ್ಕೆ ಕೊರಳೊಡ್ತಿದ್ದಾರೆ. ಇದರೊಂದಿಗೆ ಭಾರತ ಗೆದ್ದ ಪದಕಗಳ ಸಂಖ್ಯೆ 58ಕ್ಕೇರಿದೆ, ಈ ಪೈಕಿ 13 ಚಿನ್ನ, 22 ಬೆಳ್ಳಿ, 23 ಕಂಚಿನ ಪದಕಗಳು  ಒಳಗೊಂಡಿವೆ.* ಸುತೀರ್ಥ ಮುಖರ್ಜಿ ಮತ್ತು ಐಹಿಕಾ ಮುಖರ್ಜಿ ಟೇಬಲ್ ಟೆನಿಸ್ ಸ್ಪರ್ಧೆಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕದೊಂದಿಗೆ ಅಭಿಯಾನ ಕೊನೆಗೊಳಿಸಿದೆ. * ಅಕ್ಟೋಬರ್ 2 ಸೋಮವಾರ ದಿನದಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಉತ್ತರ ಕೊರಿಯಾದ ಸುಯೊಂಗ್ ಚಾ-ಸುಗೋಂಗ್ ಪಕ್ ಜೋಡಿ ಎದುರು  11-7, 8-11, 11-7, 8-11, 9-11. 11-5, 2-11ರಿಂದ ಈ ಜೋಡಿ ವೀರೋಚಿತ ಸೋಲು ಅನುಭವಿಸಿತು,