* ವಾತಾವರಣದಲ್ಲಿನ ಹಸಿರುಮನೆ ಅನಿಲದ ವಾಸಾರಣೆಯು 2022ರಮ್ಮ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಹಸಿರುಮನೆ ಅನಿಲ ಕಡಿಮೆಯಾಗುವ ಯಾವುದೇ ಲಕ್ಷಣಗಳಿಲ್ಲ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. * ವಿಶ್ವಸಂಸ್ಥೆಯ 'ವಿಶ್ವ ಹವಾಮಾನ ಸಂಸ್ಥೆ' (ಡಬ್ಲ್ಯೂಎಂಒ) ಪ್ರಕಾರ, ಹವಾಮಾನ ತಾಪಮಾನ ಏರಿಕೆಗೆ ಇಂಗಾಲದ ಡೈ ಆಕ್ಸೆಡ್, ಮಿಥೇನ್, ನೈಟ್ರಸ್‌ ಆಡ್ Ne ಹೆಚ್ಚಳವೇ ಕಾರಣವಾಗಿದೆ. ಇವೆಲ್ಲವುಗಳಿಂದ ಸಮುದ್ರ ಮಟ್ಟ ಕೂಡ ಹೆಚ್ಚುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.* 'ಕಳೆದ ಹತ್ತು ವರ್ಷಗಳಿಂದ ನೀಡಲಾಗುತ್ತಿರುವ ವೈಜ್ಞಾನಿಕ ಎಚ್ಚರಿಕೆಗಳು, ವ್ಯಾಪಕವಾದ ವರದಿಗಳು, ಹಲವಾರು ಹವಾಮಾನ ಸಮ್ಮೇಳನಗಳ ಹೊರತಾಗಿಯೂ ಜಗತ್ತು ಎಚ್ಚೆತ್ತುಕೊಳ್ಳದಿರುವುದು ದುರದೃಷ್ಟಕರ' ಎಂದು ಡಬ್ಲ್ಯೂಎಂಒ ಮುಖ್ಯಸ್ಥ ಪೆಟ್ಟೆರಿ ತಾಲಾಸ್‌ ಹೇಳಿದ್ದಾರೆ. * ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರಗಳು ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ಗೆ ಇಳಿಸಲು ಪಣತೊಟ್ಟಿವೆ.