* ಅನುವಂಶಿಕವಾಗಿ ಅಥವಾ ನರಗಳ ದೋಷದಿಂದ ಬರುವ ಆಟಿಸಂ ಕಾಯಿಲೆ ಕುರಿತು ಜಾಗೃತಿ ಮೂಡಿಸಲು ಹಾಗೂ ಆ ರೋಗದ ಕುರಿತು ಇರುವ ಪೂರ್ವಗ್ರಹಗಳನ್ನು ನಿವಾರಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು ಪ್ರತಿವರ್ಷ ಏಪ್ರಿಲ್ 2ರಂದು 'ವರ್ಲ್ಡ್ ಆಟಿಸಂ ಡೇ' ಅನ್ನು ಆಚರಿಸುತ್ತದೆ. * ನರಗಳ ಬೆಳವಣಿಗೆಯಲ್ಲಾಗುವ ಒಂದು ಸಂಕೀರ್ಣ ರೀತಿಯ ಅಸಹಜತೆಗೆ 'ಆಟಿಸಂ' ಅಥವಾ 'ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್' ಎಂದು ಕರೆಯಲಾಗುತ್ತದೆ. ಈ ಅಸಹಜತೆಯಲ್ಲಿ ಸಾಮಾಜಿಕ ವೈಕಲ್ಯಗಳು, ಮಾತನಾಡುವಾಗ ತೊಂದರೆ, ಒಂದೇ ತೆರನಾದ ವರ್ತನೆಗಳು ಕಂಡು ಬರುತ್ತವೆ. ತಜ್ಞರ ಅಭಿಪ್ರಾಯದ ಪ್ರಕಾರ 100 ಮಕ್ಕಳಲ್ಲಿ ಆರು ಮಕ್ಕಳು ಆಟಿಸಂ ಅಸಹಜತೆಯಿಂದ ಬಳಲುತ್ತಿರುತ್ತಾರೆ. ಮಹಿಳೆಯರಿಗಿಂತ ಪುರುಷರಲ್ಲಿ ಆಟಿಸಂ ಸಾಧ್ಯತೆ ನಾಲ್ಕು ಪಟ್ಟು ಹೆಚ್ಚಿರುತ್ತದೆ ಎಂದು ವರದಿಗಳು ತಿಳಿಸಿವೆ.* ಭಾವನಾತ್ಮಕ ಬೆಳವಣಿಗೆ: ಈ ಮಕ್ಕಳಿಗೆ ಮನೆಯವರನ್ನು ಗುರುತಿಸಲಾಗುವುದಿಲ್ಲ. ಪರಿಚಿತರು, ಅಪರಿಚಿತರು ಎಂಬ ವ್ಯತ್ಯಾಸ ಇರುವುದಿಲ್ಲ. ಆತ್ಮೀಯ ಭಾವನೆಯನ್ನಾಗಲೀ, ಆತಂಕವಾಗಲೀ ಎರಡನ್ನೂ ವ್ಯಕ್ತಪಡಿಸುವುದಿಲ್ಲ. ಈ ಮಕ್ಕಳು ಬೆಳೆದಂತೆ ತಮ್ಮ ಓರಗೆಯವರೊಂದಿಗೆ ಗೆಳೆತನ ಬೆಳೆಸಿಕೊಳ್ಳುವು ದಿಲ್ಲ. ಮಗು ಒಂಟಿಯಾಗಿಯೇ ಇರಬಯಸುತ್ತದೆ. ಆದರೆ ಕಡ್ಡಿ, ಕಾಗದ, ಕಸ ಮುಂತಾದವುಗಳೊಡನೆ ಆಡಿಕೊಳ್ಳುತ್ತದೆ. ಸಾಧ್ಯವಾದಷ್ಟು ಒಂಟಿಯಾಗಿಯೇ ಇದ್ದು, ಅದೇ ಜೀವನವನ್ನು ಇಷ್ಟಪಡುತ್ತದೆ.* ಈ ಆಟಿಸಂಗೆ ಪರಿಹಾರ ಎಂಬುದು ಇಲ್ಲ. ಆದರೆ ಆಟಿಸಂ ಇರುವ ಮಕ್ಕಳ ಕಲಿಕೆ ಹಾಗೂ ಬೆಳವಣಿಗೆಗೆ ಸಹಾಯಕವಾಗುವಂತಹ ಅನೇಕ ರೀತಿಯ ಪೂರಕ ವಿಧಾನಗಳು ಲಭ್ಯ ಇವೆ.