* ಏಕದಿನ ವಿಶ್ವಕಪ್ನಲ್ಲಿ ಮೂರನೇ ಬಾರಿ ವಿಶ್ವ ಚಾಂಪಿಯನ್ ಪಟ್ಟಕೇರಲು ಭಾರತ ತಂಡಕ್ಕೆ ಇನ್ನೊಂದೇ ಹೆಜ್ಜೆ ಬಾಕಿ. ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ. * 10 ಪಂದ್ಯಗಳನ್ನು ಗೆದ್ದು ಬೀಗಿರುವ ಭಾರತ 12 ವರ್ಷಗಳ ಬಳಿಕ ಮತ್ತೆ ತವರಿನಲ್ಲಿ ವಿಶ್ವಕಪ್ ಎತ್ತಿ ಇತಿಹಾಸ ನಿರ್ಮಿಸಲು ಕಾತರಗೊಂಡಿದೆ. ಟೀಮ್ ಇಂಡಿಯಾದ ಇದುವರೆಗಿನ 10 ಪಂದ್ಯಗಳ ವಿಜಯದುಂದುಭಿಯ ವರದಿ ಇಲ್ಲಿದೆ.* 2019ರಲ್ಲಿ ಭಾರತದ ವಿಶ್ವಕಪ್ ಫೈನಲ್ಗೆ ಅಡ್ಡಗಾಲಿಟ್ಟಿದ್ದ ನ್ಯೂಜಿಲ್ಯಾಂಡ್ ಈ ಬಾರಿಯೂ ಇಂತಹದ್ದೇ ಆಘಾತ ನೀಡದಿರಲಿ ಎಂದು ಶತಕ ಕೋಟಿ ಭಾರತೀಯರು ದೇವರಲ್ಲಿ ಪ್ರಾರ್ಥಿಸಿದ್ದರು. * ಭಾರತ ಈ ಪಂದ್ಯದಲ್ಲಿ 70 ರನ್ಗಳ ಗಲುವು ಸಾಧಿಸಿ ಫೈನಲ್ ಫೈನಲ್ ಪ್ರವೇಶಿಸಿತು. ಅಲ್ಲಿಗೆ ಎಲ್ಲರ ಪ್ರಾರ್ಥನೆಗೆ ಫಲ ಸಿಕ್ಕಿತು. * ವಿರಾಟ್ ಕೊಹ್ಲಿ ಅವರು ಶತಕ ಬಾರಿಸುವ ಮೂಲಕ ತಮ್ಮ ರೋಲ್ ಮಾಡಲ್ ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್ನ 49 ಶತಕದ ದಾಖಲೆಯನ್ನು ಮುರಿದು ಏಕದಿನ ಕ್ರಿಕೆಟ್ಗೆ ಹೊಸ ಸಾಮ್ರಾಟನಾದರು. ಅಯ್ಯರ್ ಕೂಡ ಶತಕ ಬಾರಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.