Job Description: * ಭಾರತದಲ್ಲಿ ಈ ವರ್ಷ್ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಪ್ರಶಸ್ತಿಯನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರು ಏಕದಿನ ಕ್ರಿಕೆಟ್‌ಗೆ ಘೋಷಿಸಿದ್ದ ನಿವೃತ್ತಿಯಿಂದ ಹಿಂದೆ ಸರಿದಿದ್ದಾರೆ.* ಟೆಸ್ಟ್ ತಂಡದ ನಾಯಕನಾಗಿರುವ ಸ್ಟೋಕ್ಸ್ 13 ತಿಂಗಳ ಹಿಂದೆ 2022ರ ಜುಲೈನಲ್ಲಿ ಏಕದಿನ ಮಾದರಿ ಕ್ರಿಕೆಟ್ ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು. ತನ್ನ ಎಡ ಮೊಣಕಾಲಿನ ನೋವಿನ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದರು. * 2019ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಗೆಲುವಿನ ರೂವಾರಿ ಗಳಲ್ಲಿ ಸ್ಟೋಕ್ಸ್ ಒಬ್ಬರಾಗಿದ್ದರು.* ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮುಂದಿನ ಏಕದಿನ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡದಲ್ಲಿ ಸ್ಪೋಕ್ಸ್ ಸ್ಥಾನ ಪಡೆದಿದ್ದಾರೆ.