Job Description: ➤ ಭಾರತದ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ. ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿರುವ ಸುಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ (BMD - Ballistic Missile Defence) ವ್ಯವಸ್ಥೆಯ ಮೂರು ಸರಣಿ ಉಡಾವಣಾ ಪರೀಕ್ಷೆಗಳು ಯಶಸ್ವಿಯಾಗಿವೆ. ಜೂನ್ 10 ಮತ್ತು 11 ರಂದು ನಡೆದ ಈ ಪರೀಕ್ಷೆಗಳು ವಾಯು ಹಾಗೂ ಸಮುದ್ರ ಮಾರ್ಗದಿಂದ ಬರುವ ಶತ್ರುಗಳ ಯಾವುದೇ ಪ್ರಬಲ ಬೆದರಿಕೆಗಳನ್ನು ಆಕಾಶದಲ್ಲೇ ಹೊಡೆದುರುಳಿಸುವ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಸಾರಿವೆ.➤ ಈ ಯಶಸ್ಸಿನೊಂದಿಗೆ, ಖಂಡಾಂತರ ಕ್ಷಿಪಣಿಗಳನ್ನು (ICBMs) ತಡೆಯಬಲ್ಲ ಅತ್ಯಾಧುನಿಕ ರಕ್ಷಣಾ ಕವಚ ಹೊಂದಿರುವ ವಿಶ್ವದ ಕೆಲವೇ ಕೆಲವು ಗಣ್ಯ (Elite) ರಾಷ್ಟ್ರಗಳ ಸಾಲಿಗೆ ಭಾರತ ಅಧಿಕೃತವಾಗಿ ಸೇರ್ಪಡೆಯಾಗಿದೆ. ಎರಡು ದಿನ, ಮೂರು ಪರೀಕ್ಷೆ: ಕೇವಲ 24 ಗಂಟೆಗಳ ಅವಧಿಯಲ್ಲಿ ಡಿಆರ್‌ಡಿಒ ಸರಣಿ ಮೂರು ಕ್ಷಿಪಣಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ಬಹುಪದರದ ರಕ್ಷಣೆ (Multi-layered Defence): ಈ ಇಂಟರ್‌ಸೆಪ್ಟರ್ ಕ್ಷಿಪಣಿಗಳು ಭೂಮಿಯ ವಾತಾವರಣದ ಒಳಗಿನ (Endo-atmospheric) ಮತ್ತು ಬಾಹ್ಯಾಕಾಶದ ವಾತಾವರಣದ ಹೊರಗಿನ (Exo-atmospheric) ಎರಡೂ ವಲಯಗಳಲ್ಲಿ ಶತ್ರು ಕ್ಷಿಪಣಿಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿ ನಾಶಪಡಿಸಿವೆ. ನೌಕಾ ನಿರೋಧಕ ಕ್ಷಿಪಣಿ (NASM-MR): ಇದೇ ವೇಳೆ ಮಧ್ಯಮ ಶ್ರೇಣಿಯ ನೌಕಾ ವಿರೋಧಿ ಕ್ಷಿಪಣಿಯ (Naval Anti-Ship Missile-Medium Range) ಚೊಚ್ಚಲ ಪರೀಕ್ಷೆಯೂ ಯಶಸ್ವಿಯಾಗಿದ್ದು, ಸಮುದ್ರದಲ್ಲಿನ ಶತ್ರುಗಳ ಯುದ್ಧನೌಕೆಗಳ ಬೆದರಿಕೆಗಳನ್ನು ಹತ್ತಿಕ್ಕಲು ಇದು ನೆರವಾಗಲಿದೆ. ➤ ಇಂಟರ್‌ಸೆಪ್ಟರ್ ಕ್ಷಿಪಣಿ: ಶತ್ರು ದೇಶಗಳು ಭಾರತದ ಮೇಲೆ ದಾಳಿ ಮಾಡಲು ದೂರಗಾಮಿ ಖಂಡಾಂತರ ಕ್ಷಿಪಣಿಗಳನ್ನು (Ballistic Missiles) ಉಡಾವಣೆ ಮಾಡಿದರೆ, ನಮ್ಮ ಅತ್ಯಾಧುನಿಕ ರೇಡಾರ್‌ಗಳು ಅದನ್ನು ತಕ್ಷಣವೇ ಪತ್ತೆಹಚ್ಚುತ್ತವೆ. ಆ ಶತ್ರು ಕ್ಷಿಪಣಿಗಳು ಭಾರತದ ಭೂಭಾಗವನ್ನು ತಲುಪುವ ಮೊದಲೇ, ಭಾರತದ ಕಡೆಯಿಂದ ಇಂಟರ್‌ಸೆಪ್ಟರ್ (ಪ್ರತಿಬಂಧಕ) ಕ್ಷಿಪಣಿ ಜಿಗಿದು ಹೋಗಿ, ಆಕಾಶದಲ್ಲೇ ಅಥವಾ ಬಾಹ್ಯಾಕಾಶದಲ್ಲೇ ಅದನ್ನು ಡಿಕ್ಕಿ ಹೊಡೆದು ಸಂಪೂರ್ಣವಾಗಿ ಧ್ವಂಸಗೊಳಿಸುತ್ತದೆ. ಇದನ್ನು "ಬುಲೆಟ್‌ನಿಂದ ಮತ್ತೊಂದು ಬುಲೆಟ್ ಅನ್ನು ಹೊಡೆಯುವ ತಂತ್ರಜ್ಞಾನ" ಎನ್ನಲಾಗುತ್ತದೆ. ➤ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪ್ರತಿಕ್ರಿಯೆ: ಕೇವಲ ಎರಡು ದಿನಗಳಲ್ಲಿ ಮೂರು ಕ್ಷಿಪಣಿಗಳ ಯಶಸ್ವಿ ಸಾಧನೆ ಮಾಡಿರುವುದು ದೇಶದ ರಕ್ಷಣಾ ಸನ್ನದ್ಧತೆಗೆ ಸಿಕ್ಕ ದೊಡ್ಡ ಉತ್ತೇಜನವಾಗಿದೆ. ಈ ಇಂಟರ್ ಸೆಪ್ಟರ್ ಕ್ಷಿಪಣಿಗಳು ನಿಗದಿತ ಗುರಿಗಳನ್ನು ಯಶಸ್ವಿಯಾಗಿ ತಲುಪುವ ಮೂಲಕ ದೇಶದ ರಕ್ಷಣಾ ಕೋಟೆಯನ್ನು ಮತ್ತಷ್ಟು ಭದ್ರಪಡಿಸಿವೆ.➤ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನವೇನು?ವಿಶ್ವದಲ್ಲೇ ಅತ್ಯಂತ ಕಠಿಣ ಎನ್ನಲಾಗುವ ಈ ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣೆ (BMD) ತಂತ್ರಜ್ಞಾನ ಕೇವಲ ಬೆರಳಣಿಕೆಯಷ್ಟು ದೇಶಗಳ ಬಳಿ ಮಾತ್ರ ಇದೆ. ಭಾರತದ ಸೇರ್ಪಡೆಯೊಂದಿಗೆ ಈಗ ಈ ಶಕ್ತಿ ಹೊಂದಿರುವ ಪ್ರಮುಖ ದೇಶಗಳು: ಅಮೆರಿಕ (USA) ರಷ್ಯಾ (Russia) ಚೀನಾ (China) ಇಸ್ರೇಲ್ (Israel) ಭಾರತ (India)ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ