* ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ದೇಶೀಯ ಲೇಸರ್ ಶಸ್ತ್ರಾಸ್ತ್ರ ವ್ಯವಸ್ಥೆಯಾದ ದುರ್ಗಾ -2 ಪರೀಕ್ಷಿಸಲು ಸಜ್ಜಾಗಿದೆ.     * ಅಮೇರಿಕ, ಚೀನಾ, ಟರ್ಕಿ, ಇರಾನ್ ಮತ್ತು ಪಾಕಿಸ್ತಾನ ಸೇರಿದಂತೆ ಪ್ರಮುಖ ಮಿಲಿಟರಿ ಶಕ್ತಿಗಳು ಲೇಸರ್ ಶಸ್ತ್ರಾಸ್ತ್ರ ಗಳ ಅಭಿವೃದ್ಧಿಯ ವ್ಯವಸ್ಥೆಯಲ್ಲಿ ನಿರಂತರವಾಗಿ ತೊಡಗಿವೆ .* DRDO ಕಳೆದ 2 ದಶಕಗಳಿಂದ ಕಾರ್ಯನಿರ್ವಹಿಸಿ ದುರ್ಗಾ -2 ಅಭಿವೃದ್ಧಿಪಡಿಸಿದೆ. ಈ ವರ್ಷ(2024)ದ ಜೂನ್ ತಿಂಗಳ ಒಳಗೆ DRDO ಪರೀಕ್ಷೆ ನಡೆಯುವ ನಿರೀಕ್ಷೆಯಿದೆ.* ಈ ಪರೀಕ್ಷೆಯು ಯಶ್ವಸಿಯಾದರೆ ಶತ್ರು ರಾಷ್ಟ್ರಗಳ ಕ್ಷಿಪಣಿಯನ್ನು ಅಥವಾ ವಾಯುದಾಳಿಯನ್ನು ತಡೆದು ಉಡಾಯಿಸುವ ಬ್ಯಾಲಿಸ್ಟಿಕ್ ಅಥವಾ ಕ್ರೂಸ್ ಕ್ಷಿಪಣಿಗಳ ವಿರುದ್ಧ ದುರ್ಗಾ ಲೇಸರ್ ಶಸ್ತ್ರಾಸ್ತ ವ್ಯವಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸಲಿದೆ.