* ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು 2023-24ರ ಸಿಯೆಟ್ ಕ್ರಿಕೆಟ್ ರೇಟಿಂಗ್ ಅವಾರ್ಡ್ಸ್‌ನಲ್ಲಿ ಪ್ರತಿಷ್ಠಿತ 'ವರ್ಷದ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟಿಗ' ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. * ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಕ್ರೀಡೆಗೆ ನೀಡಿದ ಗಮನಾರ್ಹ ಕೊಡುಗೆಗಳಿಗಾಗಿ 'ಜೀವಮಾನ ಸಾಧನೆ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.* ವಿರಾಟ್ ಕೊಹ್ಲಿಯನ್ನು 'ವರ್ಷದ ಪುರುಷರ ODI ಬ್ಯಾಟರ್' ಮತ್ತು ಮೊಹಮ್ಮದ್ ಶಮಿ 'ವರ್ಷದ ODI ಬೌಲರ್' ಎಂದು ಹೆಸರಿಸಲಾಯಿತು.* ಟೀಮ್ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಏಕದಿನ ಬೌಲರ್ ಪ್ರಶಸ್ತಿ ಪಡೆದರೆ, ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ 712 ರನ್ ಹೊಡೆದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರಿಗೆ ವರ್ಷದ ಟೆಸ್ಟ್ ಬ್ಯಾಟರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ವರ್ಷದ ಟೆಸ್ಟ್ ಬೌಲರ್ ಪ್ರಶಸ್ತಿಯು ಹಿರಿಯ ಕೇರಮ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ನೀಡಲಾಗಿದೆ.* ಶ್ರೇಷ್ಠ ಕ್ರೀಡಾ ಆಡಳಿತಕ್ಕಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೂ ವಿಶೇಷ ಪ್ರಶಸ್ತಿ ನೀಡಲಾಗಿದೆ. * ಸಿಯೆಟ್ ಪ್ರಶಸ್ತಿ ವಿಜೇತರ ಪಟ್ಟಿ:- ಜೀವಮಾನ ಸಾಧನೆ ಪ್ರಶಸ್ತಿ : ರಾಹುಲ್ ದ್ರಾವಿಡ್- ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ : ರೋಹಿತ್ ಶರ್ಮಾ- ವರ್ಷದ ಏಕದಿನ ಬ್ಯಾಟರ್ : ವಿರಾಟ್ ಕೊಹ್ಲಿ- ವರ್ಷದ ಏಕದಿನ ಬೌಲರ್ : ಮೊಹಮ್ಮದ್ ಶಮಿ- ವರ್ಷದ ಟೆಸ್ಟ್ ಬ್ಯಾಟರ್ : ಯಶಸ್ವಿ ಜೈಸ್ವಾಲ್- ವರ್ಷದ ಟೆಸ್ಟ್ ಬೌಲರ್ : ರವಿಚಂದ್ರನ್ ಅಶ್ವಿನ್- ವರ್ಷದ ಟಿ20 ಬ್ಯಾಟರ್ : ಫಿಲ್ ಸಾಲ್ಟ್- ವರ್ಷದ ಟಿ20 ಬೌಲರ್ : ಟಿಮ್ ಸೌಥಿ- ವರ್ಷದ ದೇಶೀಯ ಕ್ರಿಕೆಟಿಗ : ಸಾಯಿ ಕಿಶೋರ್- ವರ್ಷದ ಮಹಿಳಾ ಬ್ಯಾಟರ್ : ಸ್ಮೃತಿ ಮಂಧಾನ- ವರ್ಷದ ಮಹಿಳಾ ಬೌಲರ್ : ದೀಪ್ತಿ ಶರ್ಮಾ- ಹೆಚ್ಚು ಟಿ20 ಪಂದ್ಯಗಳನ್ನಾಡಿದ ನಾಯಕಿ : ಹರ್ಮನ್‌ಪ್ರೀತ್ ಕೌರ್- ಐಪಿಎಲ್ನ ಅತ್ಯುತ್ತಮ ನಾಯಕ : ಶ್ರೇಯಸ್ ಅಯ್ಯರ್- ಮಹಿಳಾ ಟೆಸ್ಟ್‌ನಲ್ಲಿ ವೇಗದ ದ್ವಿಶತಕ ಬಾರಿಸಿದ ಬ್ಯಾಟರ್ : ಶಫಾಲಿ ವರ್ಮಾ- ಶ್ರೇಷ್ಠ ಕ್ರೀಡಾ ಆಡಳಿತ : ಜಯ್ ಶಾ