* ಆಂಧ್ರಪ್ರದೇಶದ ಪಾಳಕೊಲ್ಲು (West Godavari) ವಾಸಿನ 23 ವರ್ಷ ವಯಸ್ಸಿನ ಜಾಹ್ನವಿ ಡಾಂಗೆಟಿ ಅವರು, ಅಮೇರಿಕಾದ ಖಾಸಗಿ ಬಾಹ್ಯಾಕಾಶ ಸಂಸ್ಥೆ Titan Space Industries ಅವರ 2029ನೇ ಸಾಲಿನ ಗಗನಯಾನ (orbital flight) ತಂಡದ Astronaut Candidate (ASCAN) ಆಗಿ ಆಯ್ಕೆಯಾಗಿದ್ದಾರೆ.* ನಾಸಾದ ಅಂತರರಾಷ್ಟ್ರೀಯ ವಾಯು ಮತ್ತು ಬಾಹ್ಯಾಕಾಶ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಭಾರತೀಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್‌ನಲ್ಲಿ ಪದವೀಧರರಾಗಿದ್ದಾರೆ.* ಜಾಹ್ನವಿಯನ್ನು ಅಮೆರಿಕದ ಟೈಟಾನ್ಸ್ ಆರ್ಬಿಟಲ್ ಪೋರ್ಟ್ ಬಾಹ್ಯಾಕಾಶ ನಿಲ್ದಾಣಕ್ಕೆ ಆಯ್ಕೆ ಮಾಡಲಾಗಿದೆ.* 2029ರ ಮಿಷನ್ ಒಂದು ದಿನದ, ಸುಮಾರು 5 ಗಂಟೆಗಳ ಗಗನಯಾನವಾಗಿದ್ದು, ಎರಡು ಬಾರಿ ಭೂಮಿಯಿಂದ ಸುತ್ತಿನಲ್ಲಿ ತಿರುಗುವುದು, ಮೂರು ಗಂಟೆಗಳ ಶೂನ್ಯ-ತೂಕತತ್ವ (zero gravity) ಅನುಭವ, ಮತ್ತು ಎರಡು ಸೂರ್ಯೋದಯ-ಸೂರ್ಯಾಸ್ತದ ವೀಕ್ಷಣೆಗಳು ಇರಲಿವೆ.* ಅವರು STEM ಶಿಕ್ಷಣ ಮತ್ತು ಬಾಹ್ಯಾಕಾಶ ಪ್ರಚಾರದಲ್ಲಿ ಸಕ್ರಿಯವಾಗಿದ್ದು, ಇಸ್ರೋ ಹಾಗೂ ಹಲವಾರು ಪ್ರಮುಖ ತಾಂತ್ರಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಭಾಷಣಗಳನ್ನು ನೀಡಿದ್ದಾರೆ.* ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಸಹಯೋಗದ ಭಾಗವಾಗಿ, ಪ್ಯಾನ್-ಸ್ಟಾರ್ಸ್ ಉಪಕರಣದ ದತ್ತಾಂಶದಿಂದ ತಾತ್ಕಾಲಿಕ ಕ್ಷುದ್ರಗ್ರಹ ಆವಿಷ್ಕಾರಕ್ಕೆ ಅವರು ಕೊಡುಗೆ ನೀಡಿದ್ದಾರೆ.* ಜಾಹ್ನವಿ ಅತ್ಯಂತ ಕಿರಿಯ ವಿದೇಶಿ ಅನಲಾಗ್ ಗಗನಯಾತ್ರಿ ಹಾಗೂ ಬಾಹ್ಯಾಕಾಶ ಐಸ್ಲ್ಯಾಂಡ್ ಭೂವಿಜ್ಞಾನ ತರಬೇತಿಗೆ ಆಯ್ಕೆಯಾದ ಮೊದಲ ಭಾರತೀಯೆ.* ಅವರು ನಾಸಾ ಸ್ಪೇಸ್ ಆಪ್ಸ್ ಚಾಲೆಂಜ್‌ನಲ್ಲಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿ ಮತ್ತು ಇಸ್ರೋ ವಿಶ್ವ ಬಾಹ್ಯಾಕಾಶ ವಾರದ ಯುವ ಸಾಧಕ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದಾರೆ. * ಜಾಹ್ನವಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಕನಸು ಸಾಕಾರಗೊಳ್ಳಲು ಪ್ರೇರಣೆಯಾಗಲು ಬಯಸುತ್ತಿದ್ದಾರೆ.