* ಭಾರತೀಯ ಕಾನೂನು ಪದ್ದತಿಯಲ್ಲಿ ವ್ಯಾಪಕ ಬದಲಾವಣೆ ತರುವ ಹೊಸ ಮೂರು ಕ್ರಿಮಿನಲ್ ಅಪರಾಧ ಕಾನೂನುಗಳು ಜಾರಿಗೆ ಬಂದಿದ್ದು, ಈ ಕಾನೂನಿನ ಪ್ರಕಾರ ದೆಹಲಿಯಲ್ಲಿ ಮೊದಲ ಎಫ್ಐಆರ್ ದಾಖಲಾಗಿದೆ. * ದಿಲ್ಲಿಯ ರೈಲು ನಿಲ್ದಾಣ ಸ್ಕೈವಾಕ್ ಬಳಿ ತಂಬಾಕು ಮತ್ತು ನೀರು ಮಾರುತ್ತಿದ್ದ ಬೀದಿ ಬದಿ ವ್ಯಾಪಾರಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (2023) ಸೆಕ್ಷನ್ 285 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.* ಭಾರತೀಯ ನ್ಯಾಯಾಂಗ ಸಂಹಿತೆ, ಭಾರತೀಯ ನಾಗರಿಕ ರಕ್ಷಣಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳು ಜುಲೈ 1 ರಿಂದ ದೇಶ್ಯಾದಂತ ಜಾರಿಗೆ ಬಂದಿದೆ. ಇವುಗಳನ್ನು ಮೂರು ಹೊಸ ಕ್ರಿಮಿನಲ್ ಕಾನೂನುಗಳು ಎಂದು ಕರೆಯಲಾಗುತ್ತಿದೆ.