* ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿದ ಫೈಮ್ ಸಿಟಿ ಇಂಡೆಕ್ಸ್ ವರದಿಯ ಪ್ರಕಾರ ದೇಶದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಹೈದರಾಬಾದ್‌ ಪಡೆದುಕೊಂಡಿದೆ. * ಆಡಳಿತ, ಸಾಮಾಜಿಕ- ಆರ್ಥಿಕ ಚಿತ್ರಣ, ಮೂಲಸೌಕರ್ಯ ಅಭಿವೃದ್ಧಿ ಮತ್ತು ರಿಯಲ್ ಎಸ್ಟೇಟ್ ಬೆಳವಣಿಗೆ ಆಧರಿಸಿ ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ಈ ರ‍್ಯಾಂಕಿಂಗ್‌ ವರದಿಯನ್ನು ನೀಡಿದೆ.* ಫೈಮ್ ಸಿಟಿ ಇಂಡೆಕ್ಸ್ ವರದಿಯನ್ನು ಮಂಗಳವಾರ (ನವೆಂಬರ್ 19) ಬಿಡುಗಡೆ ಮಾಡಿದ್ದು, ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಮೂರನೇ ಸ್ಥಾನವನ್ನು ಮುಂಬೈ, ನಾಲ್ಕನೇ ಸ್ಥಾನವನ್ನು ದೆಹಲಿ ಪಡೆದುಕೊಂಡಿವೆ.