* ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (PMBJP) ಅಡಿಯಲ್ಲಿ 2024ರ ಸೆಪ್ಟೆಂಬರ್ 30 ರವರೆಗೆ ಸರ್ಕಾರವು ದೇಶಾದ್ಯಂತ 13,822 ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದೆ.* ಈ ಕೇಂದ್ರಗಳು ಸೆಪ್ಟೆಂಬರ್ ತಿಂಗಳಲ್ಲಿ 200 ಕೋಟಿ ರೂಪಾಯಿಗಳ ದಾಖಲೆಯ ಮಾರಾಟವನ್ನು ಸಾಧಿಸಿವೆ. ಜನೌಷಧಿ ಸ್ಥಾಪನೆ ಆದಾಗಿನಿಂದ ಇದು ಅತಿ ಹೆಚ್ಚು ಮಾಸಿಕ ಮಾರಾಟವಾಗಿದೆ. 2023 ರ ಸೆಪ್ಟೆಂಬರ್ ಅವಧಿಯಲ್ಲಿ 141 ಕೋಟಿ ವ್ಯಾಪಾರ ನಡೆದಿತ್ತು.  * ಕೇಂದ್ರಗಳು ಜನಸಾಮಾನ್ಯರಿಗೆ ಕೈಗೆಟುಕುವ ಔಷಧಗಳನ್ನು ಒದಗಿಸುತ್ತವೆ. ಇದು ವರ್ಷದಿಂದ ವರ್ಷಕ್ಕೆ ಗಮನಾರ್ಹ ಬೆಳವಣಿಗೆಯನ್ನು ತೋರಿಸುತ್ತದೆ.* ಕಳೆದ 10 ವರ್ಷಗಳಲ್ಲಿ ಜನೌಷಧಿ ಕೇಂದ್ರಗಳ ಮೂಲಕ ₹6,100 ಕೋಟಿ ಮೌಲ್ಯದ ಔಷಧಗಳನ್ನು ಮಾರಾಟ ಮಾಡಲಾಗಿದೆ. ಇದು ಬ್ರಾಂಡೆಡ್ ಔಷಧಿಗಳಿಗೆ ಹೋಲಿಸಿದರೆ ನಾಗರಿಕರಿಗೆ ಅಂದಾಜು ₹ 30,000 ಕೋಟಿಗಳಷ್ಟು ಉಳಿತಾಯವಾಗಿದೆ.* PMBJP ಅಡಿಯಲ್ಲಿ ಔಷಧಿಗಳು ಅಗ್ರ ಮೂರು ಬ್ರಾಂಡ್ ಔಷಧಿಗಳ ಸರಾಸರಿ ಬೆಲೆಯ ಗರಿಷ್ಠ 50% ರಷ್ಟು ಬೆಲೆಯನ್ನು ಹೊಂದಿವೆ.* ಇತರೆ ಔಷಧಿ ಕೇಂದ್ರಗಳಿಗೆ ಹೋಲಿಸಿದರೆ, ಜನೌಷಧಿ ಔಷಧಗಳು, ಶಸ್ತ್ರಚಿಕಿತ್ಸಾ ಸಾಧನಗಳು ಮತ್ತು ನ್ಯೂಟ್ರಾಸ್ಯುಟಿಕಲ್ ಉತ್ಪನ್ನಗಳು ಕನಿಷ್ಠ 50% ರಷ್ಟು ಅಗ್ಗವಾಗಿವೆ. ಕೆಲವು ಔಷಧಗಳ 80% ರಿಂದ 90% ರಷ್ಟು ಕಡಿಮೆಯಾಗಿದೆ.* ಸೆಪ್ಟೆಂಬರ್ 2024ರ ಹೊತ್ತಿಗೆ, ಒಟ್ಟು ವಾರ್ಷಿಕ ಮಾರಾಟದಲ್ಲಿ 31.20% ಬೆಳವಣಿಗೆ ಕಂಡುಬಂದಿದೆ.* ಜನೌಷಧಿ ಕೇಂದ್ರಗಳಿಂದ ದಿನಕ್ಕೆ ಸರಿಸುಮಾರು 10 ಲಕ್ಷ ಜನರು ಔಷಧಿಗಳನ್ನು ಖರೀದಿಸುತ್ತಾರೆ. ಕೇಂದ್ರ ಸರಕಾರವು ಭಾರತದಾದ್ಯಂತ 25,000 ಜನೌಷಧಿ ಕೇಂದ್ರಗಳ ಗುರಿ ಹೊಂದಿದೆ.* ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ಗುಣಮಟ್ಟದ ಔಷಧಗಳು, ಉಪಭೋಗ್ಯ ವಸ್ತುಗಳು ಮತ್ತು ಶಸ್ತ್ರಚಿಕಿತ್ಸಾ ವಸ್ತುಗಳನ್ನು ಲಭ್ಯವಾಗುವಂತೆ ಮಾಡಲು ಮತ್ತು ಗ್ರಾಹಕರು/ರೋಗಿಗಳ ಪಾಕೆಟ್ ವೆಚ್ಚವನ್ನು ಕಡಿಮೆ ಮಾಡುವುದು ಪಿಎಂಬಿಜೆಪಿಯ ಉದ್ದೇಶವಾಗಿದೆ.* PMBI ಅನ್ನು ಡಿಸೆಂಬರ್ 2008 ರಲ್ಲಿ ಭಾರತ ಸರ್ಕಾರದ ಫಾರ್ಮಾಸ್ಯುಟಿಕಲ್ಸ್ ಇಲಾಖೆ ಅಡಿಯಲ್ಲಿ  ಸ್ಥಾಪಿಸಲಾಯಿತು.