* ಗ್ರಾಮೀಣ ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ನೋಯ್ಡಾ ಮತ್ತು ಹೈದರಾಬಾದ್‌ನಲ್ಲಿ ಡ್ರೋನ್ ದೀದಿ ಯೋಜನೆ ಅಡಿಯಲ್ಲಿ ಎರಡು ಪ್ರಾಯೋಗಿಕ ಯೋಜನೆಗಳನ್ನು ನಡೆಸಲು ಮಹೀಂದ್ರ ಮತ್ತು ಮಹೀಂದ್ರಾ ಲಿಮಿಟೆಡ್‌ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ .* ಮಹೀಂದ್ರಾ ಗ್ರೂಪ್ CEO ಮತ್ತು ಎಂಡಿ ಡಾ.ಅನೀಶ್ ಶಾ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಅವರ ಸಮ್ಮುಖದಲ್ಲಿ ಈ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. * ಕೃಷಿ ಉದ್ದೇಶಗಳಿಗಾಗಿ ಡ್ರೋನ್‌ಗಳನ್ನು ನಿರ್ವಹಿಸಲು ಮಹಿಳೆಯರಿಗೆ ತರಬೇತಿ ನೀಡುವ ಪ್ರಾಯೋಗಿಕ ಯೋಜನೆಗಳು ನೋಯ್ಡಾ ಮತ್ತು ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಯಲ್ಲಿ ನಡೆಯಲಿದೆ. * ಈ ಕಂಪನಿಯು 500 ಗ್ರಾಮೀಣ ಮಹಿಳಾ ರೈತರಿಗೆ ಕೃಷಿ ಉದ್ದೇಶಗಳಿಗಾಗಿ ಡ್ರೋನ್‌ಗಳನ್ನು ನಿರ್ವಹಿಸಲು ತರಬೇತಿ ನೀಡುತ್ತದೆ.* ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಶಕ್ತ್ ನಾರಿ-ವೀಕ್ಷಿತ್ ಭಾರತ್ ಕಾರ್ಯಕ್ರಮದ ಅಡಿಯಲ್ಲಿ ನಮೋ ಡ್ರೋನ್ ದೀದಿ ಯೋಜನೆಯನ್ನು 11 ಮಾರ್ಚ್ 2024 ರಂದು ನವದೆಹಲಿಯ ಪುಸಾದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಪ್ರಾರಂಭಿಸಿದರು.* ಡ್ರೋನ್ ದೀದಿ ಯೋಜನೆಗೆಯು ತಮ್ಮ ಬದ್ಧತೆಯ ಭಾಗವಾಗಿ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಎಂಬ ಕಂಪನಿಯು ಶೀಘ್ರದಲ್ಲೇ ಜಹೀರಾಬಾದ್, ತೆಲಂಗಾಣ ಮತ್ತು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ತಮ್ಮ ಕೌಶಲ್ಯ ಅಭಿರುದ್ದಿ ಕೇಂದ್ರಗಳಲ್ಲಿ ಮಹಿಳೆಯರಿಗೆ ಡ್ರೋನ್ ದೀದಿ ಯೋಜನೆಯ ತರಬೇತಿಯನ್ನು ಪರಿಚಯಿಸುತ್ತದೆ.