* ನೌಕಾಪಡೆಯು ದೇಶಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಭಾರತದಾದ್ಯಂತ ಪ್ರತಿವರ್ಷ ಡಿಸೆಂಬರ್ 4 ರಂದು ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ. ನೌಕಾಪಡೆಯ ಪಿತಾಮಹ ಛತ್ರಪತಿ ಶಿವಾಜಿ.* 2023ರ ನೌಕಾಪಡೆಯ ದಿನದ ಥೀಮ್ : ಕಡಲ ಪ್ರದೇಶದ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯ ದಕ್ಷತೆ, ಸಿದ್ಧತೆ ಹಾಗೂ ಮಿಷನ್ ಸಾಧನೆಯಾಗಿದೆ. * ಭಾರತ ಮತ್ತು ಪಾಕ್ ನಡುವಿನ 1971ರ ಯುದ್ಧದ ಸಂಧರ್ಭದಲ್ಲಿ ಡಿಸೇಂಬರ್ 4 ರಂದು ಭಾರತದ ನೌಕಾಪಡೆ ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ದಿಟ್ಟತನದ ದಾಳಿಯನ್ನು ನಡೆಸಿತ್ತು ಈ ಕಾರ್ಯವನ್ನು ಸ್ಮರಿಸುವುದಕ್ಕಾಗಿ ಪ್ರತಿ ವರ್ಷ ಡಿಸೆಂಬರ್ 4 ರಂದು ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ. * ಡಿಸೆಂಬರ್ 3 ರಂದು ಪಾಕಿಸ್ತಾನವು ಭಾರತದ ಜಲಗಡಿಗಳಲ್ಲಿ ಆಕ್ರಮಣ ಮಾಡಲು ಆರಂಭಿಸಿತ್ತು. ಆ ಸಮಯದಲ್ಲಿ ಭಾರತೀಯ ನೌಕಾಯೋಧರು ಧೈರ್ಯದಿಂದ ಹೋರಾಡಿ ಪಾಕಿಸ್ತಾನದ ನಾಲ್ಕು ಹಡುಗುಗಳನ್ನು ಹೊಡೆದುರುಳಿಸಿದರು. ಆಪರೇಷನ್ ಟ್ರೈಡೆಂಟ್ ಹೆಸರಿನ ಕಾರ್ಯಾಚರಣೆಯಲ್ಲಿ ಪಿಎನ್‌ಎಸ್ ಖೈಬರ್ ಸೇರಿದಂತೆ ನಾಲ್ಕು ಪಾಕಿಸ್ತಾನಿ ಹಡುಗುಗಳನ್ನು ಧೈರ್ಯದಿಂದ ಮುಳುಗಿಸಿತ್ತು ಭಾರತೀಯ ಸೇನೆ. ಈ ಸಂದರ್ಭದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದರು. ಆಪರೇಷನ್ ಟ್ರೈಡೆಂಟ್‌ಗಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ದೇಶ ರಕ್ಷಣೆಗಾಗಿ ಹೋರಾಡಿ ವೀರಮರಣ ಹೊಂದಿದ ವೀರಯೋಧರನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 4 ರಂದು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ. ದೇಶ ರಕ್ಷಣೆಯ ವಿಚಾರದಲ್ಲಿ ನೌಕಾಪಡೆಯ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
* ಭಾರತೀಯ ನೌಕಾಪಡೆ ದಿನದಂದು ಭಾರತದ ನೌಕಾಪಡೆಯ ಸಾಧನೆಗಳು ಮತ್ತು ಕೊಡುಗೆಗಳನ್ನು ಸ್ಮರಿಸುವ ಕೆಲಸ ಮಾಡಲಾಗುತ್ತದೆ. ಈ ದಿನದಂದು ವಿವಿಧೆಡೆ ಸರ್ಕಾರದಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.* ಭಾರತದ ನೌಕಾಪಡೆಯು 67,252 ಸಿಬ್ಬಂದಿ, 75,000 ಮೀಸಲು ಸಿಬ್ಬಂದಿ, 150 ಶಿಪ್‌ಗಳನ್ನೂ ಹೊಂದಿದೆ. ಜುಲೈ 2022ರ ಲೆಕ್ಕದ ಪ್ರಕಾರ ಭಾರತದ ನೌಕಾಪಡೆಯು 2 ವಿಮಾನ ವಾಹಕಗಳನ್ನು, 8 ಲ್ಯಾಂಡಿಂಗ್ ಶಿಪ್ ಟ್ಯಾಂಕ್‌ಗಳು, 11, ನಿರ್ದೇಶಿತ ವಿಧ್ವಂಸಕ ಕ್ಷಿಪಣಿಗಳು, 19 ಕಾರ್ವೆಟ್‌ಗಳು, 19 ಸಾಂಪ್ರದಾಯಿಕ ಜಲಾಂತರ್ಗಾಮಿಗಳು, 2 ಪರಮಾಣು ದಾಳಿಯ ಜಲಾಂತರ್ಗಾಮಿ, 30 ಗಸ್ತು ಹಡಗುಗಳು, 5 ಫ್ಲೀಟ್ ಟ್ಯಾಂಕರ್‌ಗಳು ಸೇರಿದಂತೆ ಹಲವು ಬಗೆಯ ಹಡಗುಗಳು, ಯುದ್ಧ ನೌಕೆಗಳು, ನೌಕಾ ವಾಹನಗಳನ್ನೂ ಹೊಂದಿದೆ.* ಭಾರತೀಯ ನೌಕಾಪಡೆಯು ಭಾರತೀಯ ಸಶಸ್ತ್ರಪಡೆಗಳ ನೌಕಾ ಶಾಖೆಯಾಗಿದೆ. ಭಾರತೀಯ ನೌಕಾಪಡೆಯ ಸುಪ್ರೀಂ ಕಮಾಂಡರ್ ಭಾರತದ ಅಧ್ಯಕ್ಷರಾಗಿದ್ದಾರೆ. ನೌಕಾಪಡೆಯು ನೌಕಾಪಡೆಯು ಮುಖ್ಯಸ್ಥ, ನಾಲ್ಕು ಸ್ಟಾರ್ ಅಡ್ಮಿರಲ್ ನೇತೃತ್ವದಲ್ಲಿದೆ.* ಮೊದಲು ರಾಯಲ್ ಇಂಡಿಯನ್ ನೇವಿ ಎಂದು ಕರೆಯಲಾಗುತ್ತಿತ್ತು. ಈಸ್ಟ್ ಇಂಡಿಯಾ ಕಂಪನಿಯು 1612ರಲ್ಲಿ ಭಾರತದ ಸಶಸ್ತ್ರ ಪಡೆಗಳ ಸರ್ವೋಚ್ಚ ನೌಕಾ ಶಾಖೆಯನ್ನು ಸ್ಥಾಪಿಸಿತು. ಸ್ವಾತಂತ್ರ್ಯ ನಂತರ 1950ರ ಜನವರಿ 26 ರಂದು ಭಾರತೀಯ ನೌಕಾಪಡೆ ಎಂದು ಮರುನಾಮಕರಣ ಮಾಡಲಾಯಿತು.