* ಮೊಘಲ್ ಅರಸರಿಂದ ಗಲ್ಲಿಗೇರಿಸಲ್ಪಟ್ಟ 10ನೇ ಸಿಖ್‌ ಗುರು ಗೋವಿಂದ ಸಿಂಗ್ ಅವರ ನಾಲ್ವರು ಪುತ್ರರ ಸ್ಮರಣಾರ್ಥವಾಗಿ ಡಿಸೆಂಬರ್ 26ನ್ನು 'ವೀರ ಬಲ ದಿವಸ' ಎಂದು ಆಚರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 9 ರಂದು ಘೋಷಿಸಿದ್ದರು.* ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್.26 ರಂದು ದೆಹಲಿಯ ಭಾರತ್‌ ಮಂಟಪದಲ್ಲಿ “ವೀರ್ ಬಾಲ ದಿವಸ್" ಕಾರ್ಯಕ್ರಮದಲ್ಲಿ ಭಾಗವಹಿಸಿದರು. * ಗುರು ಗೋಬಿಂದ್ ಸಿಂಗ್ ಅವರ ಪುತ್ರರಾದ ಸಾಹಿಬ್‌ಜಾದಾಸ್‌ ಬಾಬಾ ಜೊರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಅವರ ಹುತಾತ್ಮರ ನೆನಪಿಗಾಗಿ ಡಿಸೆಂಬರ್ 26ನ್ನು 'ವೀರ್ ಬಾಲ್ ದಿವಸ್' ಎಂದು ಆಚರಿಸಲಾಗುತ್ತಿದೆ.* ಸಾಹಿಬ್ಜಾದಾ ಅಜಿತ್ ಸಿಂಗ್, ಶಾಹಿಬ್ಜಾದಾ ಜುಜಾರ್ ಸಿಂಗ್, ಸಾಹಿಬ್ಜಾದಾ ಜೋರಾವರ್ ಸಿಂಗ್ ಮತ್ತು ಸಾಹಿಬ್ಜಾದಾ ಫತೇಹ್ ಸಿಂಗ್ ಅವರು ಹತ್ತನೇ ಸಿಖ್ ಗುರು  ಗುರು ಗೋಬಿಂದ್ ಸಿಂಗ್ ಜಿ ಅವರ ನಾಲ್ವರು ಪುತ್ರರಿದ್ದಾರೆ.