* ಈ ವರ್ಷದ ಮೊದಲ ತ್ರೈಮಾಸಿಕದಲ್ಲಿಯೇ "ಡಿಜಿಟಲ್ ಬಂಧನ" ವಂಚನೆಗಳಿಂದ ನಾಗರಿಕರು 120.30 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ವರದಿಯನ್ನು ಬಿಡುಗಡೆ ಮಾಡಿದೆ. * ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಭಾಷಣದಲ್ಲಿ ಈ ವಿಷಯವನ್ನು ಎತ್ತಿ ತೋರಿಸಿದರು, ಇಂತಹ ಸೈಬರ್ ಅಪರಾಧಗಳ ವಿರುದ್ಧ ಜಾಗೃತಿ ಮತ್ತು ಕ್ರಮದ ತುರ್ತು ಅಗತ್ಯವನ್ನು ಒತ್ತಿ ಹೇಳಿದರು.* ವ್ಯಾಪಾರ ಹಗರಣದಲ್ಲಿ 1,420.48 ಕೋಟಿ ರೂ., ಹೂಡಿಕೆ ಹಗರಣದಲ್ಲಿ ರೂ. 222.58 ಕೋಟಿ ಮತ್ತು ಪ್ರಣಯ/ಡೇಟಿಂಗ್ ಹಗರಣದಲ್ಲಿ ರೂ. 13.23 ಕೋಟಿ ಕಳೆದುಕೊಂಡಿದ್ದೇವೆ ಎಂದು ನಾವು ಕಂಡುಕೊಂಡಿದ್ದೇವೆ" ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಐ4ಸಿ) ರಾಜೇಶ್ ಕುಮಾರ್ ತಿಳಿಸಿದ್ದಾರೆ. * 2023 ರಲ್ಲಿ 15.56 ಲಕ್ಷ ದೂರುಗಳನ್ನು ಸ್ವೀಕರಿಸಿದ್ದರೆ. 2022 ರಲ್ಲಿ ಒಟ್ಟು 9.66 ಲಕ್ಷ ದೂರುಗಳು ಸ್ವೀಕರಿಸಲಾಗಿದೆ.* ಉದ್ಯೋಗಾಕಾಂಕ್ಷಿಗಳನ್ನು ಸೆಳೆಯಲು ನಕಲಿ ಉದ್ಯೋಗ ಪ್ಲಾಟ್ ಫಾರ್ಮಗಳನ್ನು ಸೃಷ್ಟಿಸಿ ಉದ್ಯೋಗದ ಆಮಿಷ ಒಡ್ಡುವ ಮೂಲಕವೂ ಹಣ ಪಡೆಯುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.