Job Description: * ಡಾ.ಬಿ.ಆರ್.ಅಂಬೇಡ್ಕರ್ ಅವರ 125 ಅಡಿ ಎತ್ತರದ ಪ್ರತಿಮೆಯನ್ನು ಅವರ ಜನ್ಮದಿನವಾದ ಏಪ್ರಿಲ್ 14ರಂದು ಹೈದರಾಬಾದ್ ನಲ್ಲಿ ಅನಾವರಣಗೊಳಿಸಲಾಗುವುದು.* ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಹುಸೇನ್ ಸಾಗ‌ ಸರೋವರದ ಬಳಿ ಅಂಬೇಡ್ಕರ್ ಅವರ ಅತಿ ಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ಸರ್ಕಾರ ಆಹ್ವಾನಿಸಿದೆ.* ಭಾರತೀಯ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಲು ಅನಾವರಣದ ಸಮಯದಲ್ಲಿ ಪ್ರತಿಮೆಯ ಮೇಲೆ ವಿಶೇಷ ಹೆಲಿಕಾಪ್ಟರ್ ನಿಂದ ಹೂವುಗಳನ್ನು ಸುರಿಸಲಾಗುವುದು. ಸಮಾರಂಭಕ್ಕೆ ಬೌದ್ಧ ಸನ್ಯಾಸಿಗಳನ್ನು ಮಾತ್ರ ಆಹ್ವಾನಿಸಲಾಗುವುದು.