Job Description: * ಕೇಂದ್ರ ಸಚಿವ ಸಂಪುಟವು ದೇಶಾದ್ಯಂತ ಆಯುಷ್ಮನ್ ಭಾರತ್ ಡಿಜಿಟಲ್ ಮಿಷನ್ ಅನುಷ್ಟಾನಕ್ಕೆ ಅನುಮೋದನೆ ನೀಡಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು '5' ವರ್ಷಗಳವರೆಗೆ 1.600 ಕೋಟಿ ರೂ. ಬಜೆಟ್ ನೊಂದಿಗೆ ಕೇಂದ್ರ ಸರ್ಕಾರದ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. * ಕೇಂದ್ರ ಸರ್ಕಾರದ ಈ ಯೋಜನೆಯಡಿಯಲ್ಲಿ ನಾಗರಿಕರು ತಮ್ಮ ಆಯುಷ್ಮನ್ ಭಾರತ್ ಆರೋಗ್ಯ ಅಕೌಂಟ್ ನಂಬರ್ ರಚಿಸಲು ಸಾಧ್ಯವಾಗಿದೆ. ಹಾಗೂ ಆರೋಗ್ಯ ದಾಖಲೆಗಳನ್ನು ಲಿಂಕ್ ಮಾಡಲು ಸಾಧ್ಯವಾಗಿದೆ ಎಂದು ಅಧಿಕೃತ ಹೇಳಿಕೆಯನ್ನು ನೀಡಿದೆ. * ಟೆಲಿಮೆಡಿಷನ್ ತಂತ್ರಜ್ಞಾನ ಬಳಕೆಗೆ ಪ್ರೋತ್ಸಾಹಿಸುವ ಮೂಲಕ ಉತ್ತಮ ಆರೋಗ್ಯ ಸೇವೆಗಳನ್ನೂ ಪಡೆಯಬಹುದಾಗಿದೆ. ಕೋವಿನ್, ಆರೋಗ್ಯ ಸೇತು ಹಾಗೂ ಇ- ಸಂಜೀವಿನಂತಹ ಜಲ ತಾಣಗಳ ಜೊತೆಗೆ ಒಂದು ವರ್ಷದ ಅವಧಿಯಲ್ಲಿ ಡಿಜಿಟಲ್ ಆರೋಗ್ಯ ಸೇವೆಗಳಿಂದ ತೀವ್ರಗತಿಯ ಪ್ರಯೋಜನ ಆಗುತ್ತಿರುವುದು ಸಾಬೀತು ಪಡಿಸಲಾಗಿದೆ. * ಪ್ರಸ್ತುತ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ನ '6' ಕೇಂದ್ರಾಡಳಿತ ಪ್ರದೇಶಗಳಾಗಿರುವ ಲಡಾಖ್, ಚಂಡೀಗಡ, ದಾದ್ರಾ ಹಾಗೂ ನಗರ್ ಹವೇಲಿ ಮತ್ತು ದಾಮನ್- ಡಿಯು, ಪುದುಚೇರಿ, ಅಂಡಮಾನ್, ಹಾಗೂ ನಿಕೋಬಾರ್ ದ್ವೀಪ, ಲಕ್ಷದೀಪಗಳಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಈ ವರ್ಷದ ಫೆಬ್ರುವರಿ. 24 ರವರೆಗೂ ಸುಮಾರು 17,33,69,087 ಆಯುಷ್ಮನ್ ಭಾರತ್ ಆರೋಗ್ಯ ಅಕೌಂಟ್ ರಚಿಸಲಾಗಿದೆ ಎಂದು ವರದಿ ಮಾಡಲಾಗಿದೆ. * ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ದೇಶದ ಸಮಗ್ರ ಡಿಜಿಟಲ್ ಆರೋಗ್ಯ ಮೂಲಸೌಕರ್ಯವನ್ನು ಬೆಂಬಲಿಸುವದ ಜೊತೆಗೆ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಹಾಗೂ ಡಿಜಿಟಲ್ ಹೆದ್ದಾರಿಗಳ ಮೂಲಕ ಹೆಲ್ತ್‌ಕೇರ್ ಪರಿಸರ ವ್ಯವಸ್ಥೆಯ ವಿವಿಧ ಮಧ್ಯಸ್ಥಗಾರರ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ.