Job Description: * ಇತ್ತೀಚಿಗೆ ಮುಕ್ತಾಯಗೊಂಡ ಮೆಕ್ಸಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ರಫೆಲ್ ನಡಾಲ್ ಅವರು ಪ್ರಶಸ್ತಿ ಗೆದಿದ್ದಾರೆ. ಇದೀಗ ಇವರು ಈ ಪ್ರಶಸ್ತಿ ಪಡೆಯುವ ಮೂಲಕ 91 ನೇ ATP ಪ್ರಶಸ್ತಿಯನ್ನು ಗೆದ್ದಿರುವ ಸಾಧನೆ ಮಾಡಿದ್ದಾರೆ. * ಸ್ಪೇನ್ ನ ರಫೆಲ್ ನಡಾಲ್ ಅವರು ಫೈನಲ್ ಪಂದ್ಯದಲ್ಲಿ ಬ್ರಿಟನ್‌ ದೇಶದ ಕ್ಯಾಮರಾನ್ ನೋರಿ ಅವರ ವಿರುದ್ಧ 6-4, 6-4 ರ ಅಂತರದಲ್ಲಿ ಜಯ ಗಳಿಸಿದ್ದಾರೆ. ಇತ್ತೀಚಿಗೆ ಇವರು ಆಸ್ಟ್ರೇಲಿಯನ್ ಓಪನ್ ಟೂರ್ನಿ ಹಾಗೂ ಈ ವರ್ಷ ಅವರು ಜಯಿಸಿರುವ 3 ನೇ ಪ್ರಶಸ್ತಿ ಇದಾಗಿದೆ. * ಪ್ರಸ್ತುತ ರಫೆಲ್ ನಡಾಲ್ ಅವರು ಅತಿ ಹೆಚ್ಚು ಬಾರಿ ಚಾಂಪಿಯನ್ ಆದವರ ಪೈಕಿ 4 ನೇ ಸ್ಥಾನದಲ್ಲಿದ್ದಾರೆ. ಜಿಮ್ಮಿ ಕೇನರ್ಸ್‌ ಅವರು ಒಟ್ಟಾರೆಯಾಗಿ 109 ಪ್ರಶಸ್ತಿಗಳನ್ನೂ ಗೆದ್ದುಕೊಂಡು ಮೊದಲ ಸ್ಥಾನದಲ್ಲಿದ್ದಾರೆ, ನಂತರ ರೋಜರ್ ಫೆಡರರ್ ಅವರು ಒಟ್ಟಾರೆಯಾಗಿ 103 ಪ್ರಶಸ್ತಿಗಳನ್ನೂ ಗೆದ್ದುಕೊಂಡು 2ನೇ ಸ್ಥಾನದಲ್ಲಿದ್ದಾರೆ, ಹಾಗೂ ಇವಾನ್ ಲೆಂಡ್ಲ್‌ ಅವರು 94 ಪ್ರಶಸ್ತಿ ಗೆದ್ದು 3 ನೇ ಸ್ಥಾನದಲ್ಲಿದ್ದಾರೆ. * ರಫೆಲ್ ನಡಾಲ್ ಅವರು ಇಲ್ಲಿಯವರೆಗೆ ಮೆಕ್ಸಿಕನ್ ಓಪನ್‌ನಲ್ಲಿ 4 ನೇ ಪ್ರಶಸ್ತಿಯನ್ನು ಗೆದಿದ್ದಾರೆ. ಈ ಹಿಂದೆ 2005 ರಲ್ಲಿ, ಮತ್ತೇ 2013 ರಲ್ಲಿ, ಹಾಗೂ 2020 ರಲ್ಲಿ ಚಾಂಪಿಯನ್ ಆಗಿದ್ದಾರೆ. * ಈ ಹಿಂದೆ ರಫೆಲ್ ನಡಾಲ್ ಅವರು 18 ವರ್ಷವಯಸ್ಸಿನಲ್ಲಿದ್ದಾಗ ಮೆಕ್ಸಿಕನ್ ಓಪನ್‌ನಲ್ಲಿ ಮೊದಲ ಬಾರಿ ಪ್ರಶಸ್ತಿಯನ್ನು ಜಯಿಸಿ ಚಾಂಪಿಯನ್ ಆಗಿರುವ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ವರ್ಷದಲ್ಲಿಯೂ ಕೂಡ ಪ್ರಶಸ್ತಿ ಗೆಲ್ಲುವ ಮೂಲಕ ಅತ್ಯಂತ ಹಿರಿಯ ಆಟಗಾರ ಇವರಾಗಿದ್ದಾರೆ. * ರಾಫೆಲ್ ನಡಾಲ್ ಅವರೊಬ್ಬ ಸ್ಪ್ಯಾನಿಷ್ ವೃತ್ತಿಪರ ಟೆನಿಸ್ ಆಟಗಾರರಾಗಿದ್ದಾರೆ. ಇವರು 209 ವಾರಗಳವರೆಗೆ ಅಸೋಸಿಯೇಷನ್ ಆಫ್ ಟೆನ್ನಿಸ್ ಪ್ರೊಫೆಷನಲ್ಸ್ (ATP) ವತಿಯಿಂದ ವಿಶ್ವದ ನಂ. 1 ಶ್ರೇಯಾಂಕವನ್ನು ಪಡೆದಿದ್ದಾರೆ, ಅಷ್ಟೇ ಅಲ್ಲದೆ ಇವರು '5' ಬಾರಿ ವರ್ಷಾಂತ್ಯದ ನಂ. 1 ಆಗಿದ್ದರು. * ರಾಫೆಲ್ ನಡಾಲ್ ಅವರು 21 ಗ್ರ್ಯಾಂಡ್ ಸ್ಲಾಮ್ ಪುರುಷರ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಹಾಗೂ ಇತಿಹಾಸದಲ್ಲಿ ಅತಿ ಹೆಚ್ಚು ಅಂದರೆ 91 ATP ಸಿಂಗಲ್ಸ್ ಪ್ರಶಸ್ತಿಗಳನ್ನು ಜಯಿಸಿಕೊಂಡಿದ್ದಾರೆ, ಮತ್ತು 13 ಫ್ರೆಂಚ್ ಓಪನ್ ಪ್ರಶಸ್ತಿಗಳುನ್ನು ಗೆದಿದ್ದಾರೆ. * ನಡಾಲ್ ಅವರು ಸ್ಟೀಫನ್ ಎಡ್ಬರ್ಗ್ ಸ್ಪೋರ್ಟ್ಸ್‌ಮ್ಯಾನ್‌ಶಿಪ್ ಪ್ರಶಸ್ತಿಯನ್ನು '5' ಬಾರಿ ಜಯಿಸಿದ್ದಾರೆ. ಹಾಗೂ ಈ ಹಿಂದೆ 2011 ಮತ್ತು 2021 ರಲ್ಲಿ ವರ್ಷದ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್‌ಮನ್ ಆಗಿ ಹೊರಹೊಮ್ಮಿದ್ದರು.