Job Description: * ಪ್ರಸ್ತುತ ರಷ್ಯಾ ರಾಷ್ಟ್ರವು ಉಕ್ರೇನ್ ಮೇಲೆ ಯುದ್ಧ ಘೋಷಿಸಿರುವ ಹಿನ್ನಲೆಯಿಂದಾಗಿ ಅಮೆರಿಕ ಹಾಗೂ ಯುರೋಪ್ ಮಿತ್ರ ರಾಷ್ಟ್ರಗಳು ರಷ್ಯಾ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. * ಇದೀಗ ರಷ್ಯಾ ದೇಶದಿಂದ ಜರ್ಮನಿಗೆ ನೈಸರ್ಗಿಕ ಅನಿಲವನ್ನು ಪೂರೈಕೆ ಮಾಡುವ ಬಹುನಿರೀಕ್ಷಿತ "ನಾರ್ಡ್ ಸ್ಟ್ರೀಮ್ 2" ಗ್ಯಾಸ್ ಪೈಪ್‌ಲೈನ್ ಯೋಜನೆಯನ್ನು ರದ್ದುಪಡಿಸಲಾಗಿದೆ ಎಂದು ಅಮೆರಿಕ ಘೋಷಣೆ ಮಾಡಿದೆ. * ಪ್ರಸ್ತುತ ಜರ್ಮನಿ ದೇಶವು ನಾರ್ಡ್ ಸ್ಟ್ರೀಮ್ 2 ಎಜಿ ಹಾಗೂ ಅದರ ಕಾರ್ಪೋರೇಟ್ ಕಚೇರಿಗಳ ಮೇಲೆ ನಿರ್ಬಂಧವನ್ನು ಹೇರಿರುವ ಹಿನ್ನಲೆಯಿಂದಾಗಿ ಅಮೆರಿಕ ಈ ರೀತಿಯ ಘೋಷಣೆ ಮಾಡಿದೆ. ಈ ನಾರ್ಡ್ ಸ್ಟ್ರೀಮ್ 2' ಯೋಜನೆಯು ರಷ್ಯಾ ರಾಷ್ಟ್ರದ ಭೌಗೋಳಿಕ ರಾಜತಾಂತ್ರಿಕ ಯೋಜನೆಯಾಗಿತ್ತು. * ನಾರ್ಡ್ ಸ್ಟ್ರೀಮ್ ಇದೊಂದು ಯುರೋಪ್‌ನಲ್ಲಿ ಕಡಲಾಚೆಯ ನೈಸರ್ಗಿಕ ಅನಿಲ ಪೈಪ್‌ಲೈನ್‌ಗಳ ವ್ಯವಸ್ಥೆಯಾಗಿದೆ, ಈ ಅನಿಲ ಪೈಪ್‌ಲೈನ್‌ ಯೋಜನೆಯು ರಷ್ಯಾ ರಾಷ್ಟ್ರದಿಂದ ಜರ್ಮನಿಗೆ ಬಾಲ್ಟಿಕ್ ಸಮುದ್ರದ ಅಡಿಯಲ್ಲಿ ಹಾದು ಹೋಗುತ್ತದೆ. ಪ್ರಸ್ತುತ ವಾಯುವ್ಯ ರಷ್ಯಾದಲ್ಲಿ ಉಸ್ಟ್-ಲುಗಾದಿಂದ ಲುಬ್ಮಿನ್‌ಗೆ ಇರುವದನ್ನು ನಾರ್ಡ್ ಸ್ಟ್ರೀಮ್ 2 ಎಂದು ಕರೆಯಲಾಗುತ್ತದೆ. * ಪ್ರಸ್ತುತ ನಾರ್ಡ್ ಸ್ಟ್ರೀಮ್ 1 ನಾರ್ಡ್ ಸ್ಟ್ರೀಮ್ ಎಜಿ ಒಡೆತನದಲ್ಲಿದೆ, ಹಾಗೂ ಅದರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ನಾರ್ಡ್ ಸ್ಟ್ರೀಮ್ 2 ಎಜಿ ಮುಖಾಂತರವೇ ಕಾರ್ಯವನ್ನು ನಿರ್ವಹಿಸಲು ಯೋಜಿಸಲಾಗಿದೆ, ಇದೊಂದು ಗಾಜ್‌ಪ್ರೊಮ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. * ನಾರ್ಡ್ ಸ್ಟ್ರೀಮ್ 1 ನ್ನು 2011 ರ ನವೆಂಬರ್. 08 ರಂದು ಉದ್ಘಾಟಿಸಲಾಗಿದೆ. ಮತ್ತೇ ನಾರ್ಡ್ ಸ್ಟ್ರೀಮ್ 1 ರ 2 ನೇ ಮಾರ್ಗವನ್ನು 2012 ರ ಅಕ್ಟೋಬರ್. 08 ರಂದು ಉದ್ಘಾಟಿಸಲಾಗಿದೆ. ಈ ನಾರ್ಡ್ ಸ್ಟ್ರೀಮ್ 1 ವಿಶ್ವದ ಅತಿ ಉದ್ದದ ಉಪ-ಸಮುದ್ರ ಪೈಪ್‌ಲೈನ್ ಆಗಿದೆ, ಅಷ್ಟೇ ಅಲ್ಲದೇ ಈ ಪೈಪ್ ಲೈನ್ ನಾರ್ವೆ-UK ನ್ನು ಮೀರಿಸುತ್ತದೆ. * ನಾರ್ಡ್ ಸ್ಟ್ರೀಮ್ 2 ನ್ನು 2018-2021 ರಲ್ಲಿ ಆರಂಭಿಸಲಾಯಿತು, ಈ ನಾರ್ಡ್ ಸ್ಟ್ರೀಮ್ 2 ರ ಮೊದಲ ಸಾಲು 2021 ರ ಜೂನ್ ತಿಂಗಳಿನಲ್ಲಿ ಪೂರ್ಣಗೊಂಡಿತು ಹಾಗೂ 2 ನೇ ಸಾಲುನ್ನು 2021 ರ ಸೆಪ್ಟೆಂಬರ್ ನಲ್ಲಿ ಪೂರ್ಣಗೊಂಡಿದೆ.