Job Description: * ಇತ್ತೀಚಿಗೆ ಕರ್ನಾಟಕ ಹೈಕೋರ್ಟ್ ಆನ್‌ಲೈನ್ ಆಟಗಳನ್ನು ನಿಷೇಧಿಸಿದ ಕರ್ನಾಟಕ ಪೊಲೀಸ್ ಕಾಯಿದೆ, 2021 ರ ನಿಬಂಧನೆಗಳನ್ನು ರದ್ದುಗೊಳಿಸಿದೆ. ಇದನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸಿದೆ. * ಈ ತೀರ್ಪನ್ನು ಸಂವಿಧಾನದ ನಿಬಂಧನೆಗಳಿಗೆ ಅನುಗುಣವಾಗಿ ಬೆಟ್ಟಿಂಗ್ ಹಾಗೂ ಜೂಜಾಟಗಳಂತಹ ವಿಷಯಕ್ಕೆ ಸಂಬಂಧಪಟ್ಟಂತೆ ಸೂಕ್ತವಾದ ಶಾಸನವನ್ನು ತಡೆಗಟ್ಟಲು ಇದನ್ನು ವ್ಯಾಖ್ಯಾನಿಸಲಾಗಿದೆ. ಪ್ರಸ್ತುತ ಅರ್ಜಿದಾರರ ಆನ್‌ಲೈನ್ ಗೇಮಿಂಗ್ ವ್ಯವಹಾರ ಹಾಗೂ ಅದಕ್ಕೆ ಸಂಧಪಟ್ಟಿರುವ ಚಟುವಟಿಕೆಗಳಲ್ಲಿ ಮಧ್ಯಪ್ರವೇಶವನ್ನು ಪಡೆಯದಂತೆ ಪ್ರತಿವಾದಿಗಳನ್ನು ನಿರ್ಬಂಧಿಸಲು ರಿಟ್ ಆಫ್ ಮ್ಯಾಂಡಮಸ್'ನ್ನು ಹೊರಡಿಸಿದೆ. * ಪ್ರಸ್ತುತ ಕರ್ನಾಟಕ ಪೊಲೀಸ್ ಮಸೂದೆ, 2021ರ ಪ್ರಕಾರ ಕುದುರೆ ರೇಸಿಂಗ್ ಬಿಟ್ಟು ಯಾವುದೇ ಆಟಕ್ಕೆ ಸಂಬಂಧಿಸಿರುವ ಎಲ್ಲಾ ರೀತಿಯ ಬೆಟ್ಟಿಂಗ್ ನ್ನು ಕಾನೂನು ಒಳಗೊಂಡಿದೆ. ಆದರೆ ಈ ಕಾನೂನನ್ನು ಆನ್‌ಲೈನ್ ಗೇಮಿಂಗ್ ಕಂಪನಿಗಳು ವಿರೋಧಿಸಿದ್ದವು, ಆದರೆ ಈ ನೀತಿಯು ಆನ್‌ಲೈನ್ ಗೇಮಿಂಗ್ ಕಂಪನಿಗಳ ಕೇಂದ್ರವಾಗಿ ಹೊರಹೊಮ್ಮುತ್ತಿರುವ ಕರ್ನಾಟಕದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಲಾಗಿದೆ. * ಪ್ರಸ್ತುತ ಈ ಕಾಯಿದೆಯು ರಾಜ್ಯದಲ್ಲಿ ಎಲ್ಲಾ ರೀತಿಯ ಬೆಟ್ಟಿಂಗ್ ಹಾಗೂ ಜೂಜಾಟದ ಆನ್‌ಲೈನ್ ಆಟಗಳ ಎಲ್ಲಾ ಸ್ವರೂಪಗಳನ್ನು ನಿಷೇಧಿಸಿದೆ. ಇದೀಗ ಅದರ ಅಡಿಯಲ್ಲಿ ಆನ್‌ಲೈನ್ ಗೇಮಿಂಗ್'ನ್ನು ಜಾಮೀನು ರಹಿತ ಅಪರಾಧವೆಂದು ಗುರುತಿಸಲಾಗಿದೆ. ಅಷ್ಟೇ ಅಲ್ಲದೇ 1 ಲಕ್ಷ ದಂಡದ ಜೊತೆಗೆ '3' ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. * ಪ್ರಸ್ತುತ ಕರ್ನಾಟಕದಲ್ಲಿ ಮೊಬೈಲ್ ಪ್ರೀಮಿಯರ್ ಲೀಗ್ (MPL) ತನ್ನ ಕಾರ್ಯಾವನ್ನು ತಡೆಹಿಡಿದಿರುವ ಮೊದಲ ಕಂಪನಿಯಾಗಿದೆ. ಹಾಗೂ ಹೊಸ ಕಾನೂನನ್ನು ಪ್ರಶ್ನಿಸಿ ಆನ್‌ಲೈನ್ ಗೇಮಿಂಗ್ ಕಂಪನಿಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಈ ಹಿಂದೆ ತಮಿಳುನಾಡು ರಾಜ್ಯದಲ್ಲಿ ಇದೇ ರೀತಿಯ ಕಾನೂನನ್ನು ಪ್ರಶ್ನಿಸಲಾಗಿತ್ತು.