Job Description: * 1980 ರ ದಶಕದ ಉತ್ತರಾರ್ಧದಲ್ಲಿ ಹಾಗೂ 1990 ರ ದಶಕದ ಪ್ರಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿಗಳ ಅಟ್ಟಹಾಸದಿಂದಾಗಿ ಅಲ್ಲಿನ ಮನೆಗಳನ್ನು ಬಿಟ್ಟು ಹೋಗಿದ್ದ 610 ಕಾಶ್ಮೀರಿ ಪಂಡಿತರಿಗೆ ಅವರ ಆಸ್ತಿಯನ್ನು ಮರಳಿ ನೀಡಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. * ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೇಜ್-2015 ರ ಅಡಿಯಲ್ಲಿ ಕಾಶ್ಮೀರಿ ವಲಸಿಗರಿಗೆ 1,080 ಕೋಟಿ ರೂ. ಹಾಗೂ 3,000 ಜನರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳನ್ನು ನೀಡಲಾಗಿದೆ. ಜಮ್ಮು ಹಾಗೂ ಕಾಶ್ಮೀರ ಸರ್ಕಾರವು PMDP-2015 ರ ಅಡಿಯಲ್ಲಿ 1,739 ವಲಸಿಗರನ್ನು ನೇಮಕ ಮಾಡಿದೆ. ಇದರ ಜೊತೆಗೆ ಹೆಚ್ಚುವರಿ 1,098 ವಲಸಿಗರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. * ಜಮ್ಮು ಮತ್ತು ಕಾಶ್ಮೀರ ಸರ್ಕಾರವು ನೀಡಿರುವ ಮಾಹಿತಿಯ ಪ್ರಕಾರ, ಕಳೆದ '5' ವರ್ಷಗಳಲ್ಲಿ 610 ಕಾಶ್ಮೀರಿ ಪಂಡಿತರ ಆಸ್ತಿ ಅರ್ಜಿದಾರರ ಭೂಮಿಯನ್ನು ಮರು ಸ್ಥಾಪಿಸಲಾಗಿದೆ ಎಂದು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. * ಜಮ್ಮು ಮತ್ತು ಕಾಶ್ಮೀರ ವಲಸಿಗರ ಸ್ಥಿರಾಸ್ತಿ ಕಾಯಿದೆ, 1997 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ವಲಸಿಗರ ಸ್ಥಿರ ಆಸ್ತಿಗಳ ಕಾನೂನು ಪಾಲಕರು ಎಂದು ಸಚಿವರು ತಿಳಿಸಿದ್ದಾರೆ. ಅಂತಹ ಆಸ್ತಿಗಳ ಸಂರಕ್ಷಣೆ ಹಾಗೂ ರಕ್ಷಣೆಗಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಡಿಎಂಗಳಿಗೆ ಅಧಿಕಾರವಿದೆ ಎಂದು ತಿಳಿಸಿದ್ದಾರೆ. * ಇದೀಗ ಸರ್ಕಾರವು ಕಾಶ್ಮೀರಿ ವಲಸಿಗರನ್ನು ಮರಳಿ ಪುನರ್ವಸತಿ ಮರು ಸ್ಥಾಪಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ, ಇದೀಗ ಕಾಶ್ಮೀರಿ ಕಣಿವೆಯಲ್ಲಿ 6,000 ಸಾರಿಗೆ ಸೌಕರ್ಯಗಳನ್ನು ನಿರ್ಮಾಣ ಮಾಡಲು ಸರಿ ಸುಮಾರು 920 ಕೋಟಿ ರೂ. ವೆಚ್ಚದಲ್ಲಿ ಉದ್ಯೋಗಿ ಕಾಶ್ಮೀರಿ ವಲಸಿಗರಿಗೆ ವಸತಿಯನ್ನು ಕಲ್ಪಿಸಲು ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.