Job Description: * ಇತ್ತೀಚಿಗೆ ಜಮ್ಮು & ಕಾಶ್ಮೀರವು ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯ ಜೊತೆಗೆ ಸಂಯೋಜಿಸಲ್ಪಟ್ಟ ಮೊಟ್ಟ ಮೊದಲ ಕೇಂದ್ರಾಡಳಿತ ಪ್ರದೇಶವಾಗಿದೆ. ಹಾಗೂ ಇದರಲ್ಲಿ ಸುಮಾರು 130 ಕ್ಕೂ ಅಧಿಕ ಕೈಗಾರಿಕಾ ಸೇವೆಗಳನ್ನು ಆನ್‌ಲೈನ್ ಮಾಡಲಾಗಿದೆ. ಜೊತೆಗೆ ಸರಿ ಸುಮಾರು 160 ಸೇವೆಗಳು ಸೇರ್ಪಡೆಯಾಗಬೇಕಿದೆ ಎಂದು ತಿಳಿಸಿದ್ದಾರೆ. * ಈ ಜಮ್ಮು & ಕಾಶ್ಮೀರ ಪ್ರದೇಶದಲ್ಲಿ ಹೂಡಿಕೆಗೆ ಸಹಾಯಕಾರಿಯಾಗುವ ರೀತಿಯಲ್ಲಿ ಈ ಕೇಂದ್ರಾಡಳಿತ ಪ್ರದೇಶವನ್ನು ಏಕೀಕರಿಸಲಾಗಿದೆ. ಹಾಗೂ ಜಾಗತಿಕ ಹೂಡಿಕೆದಾರರು ತಮ್ಮ ವ್ಯಾಪಾರದ ಅನುಮೋದನೆಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲದೇ ಈ ಕೇಂದ್ರಾಡಳಿತ ಪ್ರದೇಶವನ್ನು ದೊಡ್ಡ ಪಾಲುದಾರಿಕೆಯ ಜಾಲಕ್ಕೆ ಲಿಂಕ್ ಮಾಡಲಾಗುತ್ತದೆ. ಇದೀಗ ಈ ಪಾಲುದಾರಿಕೆಯಲ್ಲಿ ದೇಶೀಯ ಹಾಗೂ ವಿದೇಶಿ ಕಂಪನಿಗಳು ಸೇರ್ಪಡೆಯಾಗಿವೆ. * ಸದ್ಯ ಕಾಶ್ಮೀರದಲ್ಲಿ ತರಲಾಗುತ್ತಿರುವ ಸುಧಾರಣೆಗಳು ಅಧಿಕ ಹೂಡಿಕೆಗಳನ್ನು ತರುತ್ತಿವೆ. ಈ ಹಿಂದೆ 2021ರಲ್ಲಿ ಕಾಶ್ಮೀರಕ್ಕೆ ಸುಮಾರು 70,000 ಕೋಟಿ ರೂ. ಹೂಡಿಕೆ ಬಂದಿದೆ. ಈ ಅಭಿವೃದ್ಧಿ ಯೋಜನೆಯನ್ನು 2021 ಜನವರಿಯಲ್ಲಿ ಘೋಷಣೆ ಮಾಡಲಾಗಿದೆ. * ಪ್ರಸ್ತುತ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗಾಗಿ ತೋಟಗಾರಿಕೆ, ರಿಯಲ್ ಎಸ್ಟೇಟ್ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಕಲ್ಪಿಸುತ್ತಿದೆ. ಹೆಚ್ಚಾಗಿ ಉದ್ಯೋಗಾವಕಾಶಗಳಿಗೆ ಗಮನ ಹರಿಸಲಾಗುತ್ತಿದೆ. ಇದರಿಂದಾಗಿ ಆ ಪ್ರದೇಶದ ಯುವಕರ ಶಕ್ತಿಯನ್ನು ಉತ್ಪಾದಕ ಕೆಲಸಗಳತ್ತ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ. * ಜಮ್ಮು ಮತ್ತು ಕಾಶ್ಮೀರ ಆಡಳಿತವು ವ್ಯಾಪಾರ ಸುಧಾರಣಾ ಕ್ರಿಯಾ ಯೋಜನೆ, 2022 ಹಾಗೂ ನಿಯಂತ್ರಕ ಅನುಸರಣೆ ಹೊರೆ 2022 ನ್ನು ಅನುಸರಿಸುತ್ತಿದೆ ಎಂದು ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ ತಿಳಿಸಿದೆ. * * ರಾಷ್ಟ್ರೀಯ ಏಕ ಕಿಟಕಿ ವ್ಯವಸ್ಥೆ ಎಂದರೆ : ಇದೊಂದು ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದೆ, ಇದರಲ್ಲಿ ಹೂಡಿಕೆದಾರರು ಅನುಮೋದನೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಸಲಹಾ ಸೇವೆಗಳನ್ನು ನೀಡುತ್ತದೆ, ಈ ಜಾಲತಾಣ ಅನುಮೋದನೆಗಳ ವಿಷಯಗಳ ಬಗ್ಗೆ ನವೀಕರಿಸಿದ ಮಾಹಿತಿಯನ್ನು ಕಲ್ಪಿಸುತ್ತದೆ.