Job Description: * ಪ್ರಸ್ತುತ ಭಾರತೀಯ ಸಂಸ್ಕೃತಿ ಸಚಿವಾಲಯವು ಭಾರತದಲ್ಲಿರುವಂತಹ ವಸ್ತು ಸಂಗ್ರಹಾಲಯಗಳನ್ನು ಮರುರೂಪಿಸುವ ಬಗ್ಗೆ ಜಾಗತಿಕ ಶೃಂಗಸಭೆಯನ್ನು ಆಯೋಜಿಸಲಿದೆ. ಹಾಗೂ ಇದು ಮೊದಲನೆ ಶೃಂಗಸಭೆಯಾಗಲಿದೆ, ಇದನ್ನು ಕೇಂದ್ರ ಸಂಸ್ಕೃತಿ ಸಚಿವ ಶ್ರೀ ಕಿಶನ್ ರೆಡ್ಡಿ ಅವರು ಉದ್ಘಾಟಣೆ ಮಾಡಲಿದ್ದಾರೆ. * ಈ ಶೃಂಗಸಭೆಯು ಭಾರತದಲ್ಲಿ ವಸ್ತುಸಂಗ್ರಹಾಲಯಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಗಮನವನ್ನು ನೀಡುತ್ತದೆ. ಹಾಗೂ ಇದು ಹೊಸ ಅಭ್ಯಾಸಗಳ ಜೊತೆಗೆ ತಂತ್ರಗಳನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ. ಸಂಸ್ಕೃತಿ ಸಚಿವಾಲಯವು ಈ ಶೃಂಗಸಭೆಯನ್ನು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದೆ. ಅಷ್ಟೇ ಅಲ್ಲದೇ ಈ ಸಭೆಯು 75 ನೇ ವಾರ್ಷಿಕೋತ್ಸವವನ್ನು ಗುರುತಿಸುವ ಕಾರ್ಯಕ್ರಮವಾಗಲಿದೆ ಎಂದಿದ್ದಾರೆ. * ಈ ಶೃಂಗಸಭೆಯು ವಿಶ್ವದಾದ್ಯಂತದ ವಸ್ತುಸಂಗ್ರಾಲಯ ನಿರ್ವಹಣೆಯ ಕ್ಷೇತ್ರದಲ್ಲಿ ತಜ್ಞರು ಹಾಗೂ ಅದರ ಅಭ್ಯಾಸಕಾರರನ್ನು ಸೇರಿಸಲಿದೆ ಎಂದಿದ್ದಾರೆ. * ಶೃಂಗಸಭೆಯ ಪ್ರಮುಖ ಕಾರ್ಯಸೂಚಿಗಳು : - ವಸ್ತುಸಂಗ್ರಹಾಲಯ ನಿರ್ವಹಣೆಯ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳವುದು. - ವಸ್ತುಸಂಗ್ರಹಾಲಯ ಅಭಿವೃದ್ಧಿಯ ಉತ್ತಮ ತಂತ್ರಗಳನ್ನು ಹಂಚಿಕೊಳ್ಳವುದು - ದೇಶದ ವಸ್ತುಸಂಗ್ರಹಾಲಯಗಳ ಅಗತ್ಯತೆಗಳನ್ನು ಗುರುತಿಸಲು ಹಾಗೂ ಅರ್ಥಮಾಡಿಕೊಳ್ಳಲು ಭಾರತೀಯ ಹಾಗೂ ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯಗಳ ನಡುವೆ ಪಾಲುದಾರಿಕೆಯನ್ನು ಬೆಳೆಸಲು ಇಚ್ಛಿಸಿದೆ. - ಭಾರತೀಯ ವಸ್ತುಸಂಗ್ರಹಾಲಯಗಳನ್ನು ನವೀಕರಿಸಲು ಯೋಜನೆಯನ್ನು ರಚಿಸಲಿದೆ. * ಸಂಸ್ಕೃತಿ ಸಚಿವಾಲಯವು ಈ ಶೃಂಗಸಭೆಯನ್ನು ಬ್ಲೂಮ್‌ಬರ್ಗ್ ಜೊತೆಗೆ ಆಯೋಜಿಸಿದೆ. ಶೃಂಗಸಭೆಯು 2022 ರ ಫೆಬ್ರವರಿ 15 ಮತ್ತು 16 ರಂದು ವರ್ಚುಲ್ ಮೂಲಕ ನಡೆಯಲಿದೆ. * ಈ ಶೃಂಗಸಭೆಯ '4' ವಿಷಯಗಳನ್ನು ಒಳಗೊಂಡಿದೆ, ಅವುಗಳು ಶಿಕ್ಷಣ ಮತ್ತು ಪ್ರೇಕ್ಷಕರ ನಿರ್ವಹಣೆ, ಸಂಗ್ರಹಣೆ ಹಾಗೂ ಸಂರಕ್ಷಣೆ, ನಿರ್ವಹಣೆ, ವಾಸ್ತುಶಿಲ್ಪ ಹಾಗೂ ಕ್ರಿಯಾತ್ಮಕ ಅಗತ್ಯಗಳು ವಿಷಯಗಳನ್ನು ಒಳಗೊಂಡಿದೆ. * ಪ್ರಸ್ತುತ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಈ ವಸ್ತು ಸಂಗ್ರಹಾಲಯಗಳು ಸಹಾಯ ಮಾಡುತ್ತವೆ. ಹಾಗೂ ಭವಿಷ್ಯದ ಯುವ ಜನತೆಗೆ ಶಿಕ್ಷಣ ನೀಡಲು ಸಹಾಯ ಮಾಡಲಿವೆ. ಹಾಗೂ ಭಾರತೀಯ ವಸ್ತುಸಂಗ್ರಹಾಲಯಗಳ ಜೊತೆಗೆ ಅಂತರರಾಷ್ಟ್ರೀಯ ಸಹಭಾಗಿತ್ವವನ್ನು ನಿರ್ಮಿಸಲಾಗುತ್ತದೆ.