Job Description: * ಇತ್ತೀಚಿಗೆ ಕೇಂದ್ರ ಸರ್ಕಾರದ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ವಾಸ್ತವಿಕವಾಗಿ ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ (Intensified Mission Indradhanush (IMI)) 4.0 'ನ್ನು ಆರಂಭಿಸಿದ್ದಾರೆ. * ಭಾರತ ದೇಶವು ಜಾಗತಿಕವಾಗಿ ಅತಿದೊಡ್ಡ ಇನಾಕ್ಯುಲೇಷನ್ ಡ್ರೈವ್'ನ್ನು ಕೈಗೊಂಡಿದೆ, ಇದೀಗ ಅದರಲ್ಲಿ ವಾರ್ಷಿಕವಾಗಿ 3 ಕೋಟಿಗೂ ಅಧಿಕ ಗರ್ಭಿಣಿಯರು ಹಾಗೂ 2.6 ಕೋಟಿ ಮಕ್ಕಳು ಸಾರ್ವತ್ರಿಕ ಪ್ರತಿರಕ್ಷಣೆಯ ಕಾರ್ಯಕ್ರಮದ ಮೂಲಕ ರಕ್ಷಣೆಯನ್ನು ಪಡೆದುಕೊಳ್ಳಿದ್ದಾರೆ. ಇದೀಗ ಈ IMI 4.0 '3' ಸುತ್ತುಗಳನ್ನು ಒಳಗೊಂಡಿರುತ್ತದೆ, ಇದೀಗ ಇದನ್ನು 33 ರಾಜ್ಯಗಳು ಮತ್ತು UTಗಳ 416 ಜಿಲ್ಲೆಗಳಲ್ಲಿ ಕೈಗೊಳ್ಳಲಾಗುತ್ತಿದೆ. * ಇದಕ್ಕಾಗಿಯೇ ಸಚಿವರು IMI 4.0 ಪೋರ್ಟಲ್ ಹಾಗೂ ಕಾರ್ಯಾಚರಣಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದರು. ಇದೊಂದು ನಗರ ಪ್ರದೇಶಗಳಲ್ಲಿ ರೋಗನಿರೋಧಕವನ್ನು ಬಲಪಡಿಸುವ ಕ್ರಿಯೆಯ ಒಂದು ಚೌಕಟ್ಟಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ರೊಟೀನ್ ಇಮ್ಯುನೈಸೇಶನ್ ಸೇವೆಗಳು ಲಸಿಕೆ ಹಾಕದ ಹಾಗೂ ಭಾಗಶಃ ಲಸಿಕೆ ಹಾಕಿದ ಮಕ್ಕಳು ಜೊತೆಗೆ ಗರ್ಭಿಣಿಯರಿಗೆ ತಲುಪಲಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಇದೇ 2022 ರ ಫೆಬ್ರವರಿ ಯಿಂದ ಏಪ್ರಿಲ್ ರವರೆಗೆ IMI 4.0 ನ ಮೊದಲ ಸುತ್ತನ್ನು ಕೈಗೊಳ್ಳಲಾಗುತ್ತದೆ. ಹಾಗೂ ಈ ಮೊದಲ ಸುತ್ತಿನಲ್ಲಿ ಅಸ್ಸಾಂ, ಗುಜರಾತ್, ಉತ್ತರಾಖಂಡ, ಮೇಘಾಲಯ, ಜಮ್ಮು ಮತ್ತು ಕಾಶ್ಮೀರ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ತ್ರಿಪುರ. ಈ 11 ರಾಜ್ಯಗಳಲ್ಲಿ IMI 4.0 ನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. * ಹಾಗೆಯೇ 2022 ರ ಏಪ್ರಿಲ್ ನಿಂದ ಮೇ ರವರೆಗೆ IMI 4.0 ರ 2 ನೇ ಸುತ್ತನ್ನು ಸುಮಾರು 22 ರಾಜ್ಯಗಳಲ್ಲಿ ಕೈಗೊಳ್ಳಲಾಗುತ್ತದೆ. ಇದರಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿರಲಿವೆ, ಪ್ರಸ್ತುತ IMI 4.0 ರ 2 ನೇ ಸುತ್ತಿನ ಪ್ರದೇಶಗಳು : ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಆಂಧ್ರ ಪ್ರದೇಶ, ಒಡಿಶಾ, ದೆಹಲಿ, ಪುದುಚೇರಿ, ಪಂಜಾಬ್, ಮಹಾರಾಷ್ಟ್ರ, ಮಣಿಪುರ, ಬಿಹಾರ, ತಮಿಳುನಾಡು, ಗೋವಾ, ತೆಲಂಗಾಣ, ಹರಿಯಾಣ, ಜಾರ್ಖಂಡ್, ಕೇರಳ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು. * ಮಿಷನ್ ಇಂದ್ರಧನುಷ್'ನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2014 ರ ಡಿಸೆಂಬರ್'ನಲ್ಲಿ ಸಂಪೂರ್ಣ ರೋಗನಿರೋಧಕ ವ್ಯಾಪ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಆರಂಭಿಸಿದ್ದಾರೆ. ಇದನ್ನು ಹೆಚ್ಚಿನ-ಅಪಾಯಕಾರಿ, ಮತ್ತು ಕಡಿಮೆ ರೋಗನಿರೋಧಕ ವ್ಯಾಪ್ತಿಯ ಪ್ರದೇಶಗಳ ಪಾಕೆಟ್‌ಗಳಲ್ಲಿ ಭಾಗಶಃ ಹಾಗೂ ಲಸಿಕೆ ಹಾಕದ ಮಕ್ಕಳು, ಗರ್ಭಿಣಿಯರನ್ನು ಒಳಗೊಳ್ಳಲು ಆರಂಭಿಸಲಾಗಿದೆ. * ಈ ಮಿಷನ್ ಇಂದ್ರಧನುಷ್ ನ್ನು ಗ್ರಾಮ ಸ್ವರಾಜ್ ಅಭಿಯಾನ ಹಾಗೂ ವಿಸ್ತೃತ ಗ್ರಾಮ ಸ್ವರಾಜ್ ಅಭಿಯಾನದ ಅಡಿಯಲ್ಲಿ ಆರಂಭಿಸಿರುವ ಪ್ರಮುಖ ಯೋಜನೆಗಳಲ್ಲಿ ಇದು ಕೂಡ ಒಂದು ಎಂದು ಗುರುತಿಸಿದ್ದಾರೆ. * ಇದೀಗ ಈ ಮಿಷನ್ ಇಂದ್ರಧನುಷ್‌ನ '10' ಹಂತಗಳು ಪೂರ್ಣಗೊಂಡಿವೆ. ಹಾಗೂ ಇದು ಭಾರತದಾದ್ಯಂತ 701 ಜಿಲ್ಲೆಗಳನ್ನು ಒಳಗೊಂಡಿದೆ. ಈ ಮಿಷನ್ ಅಡಿಯಲ್ಲಿ 2021 ರ ಏಪ್ರಿಲ್ ತಿಗಳಿನ ವೇಳೆಗೆ ಸುಮಾರು 96.8 ಲಕ್ಷ ಗರ್ಭಿಣಿಯರು ಹಾಗೂ 3.86 ಕೋಟಿ ಮಕ್ಕಳಿಗೆ ಲಸಿಕೆಯನ್ನು ನೀಡಿದೆ.