Job Description: * ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರವು ರಾಮನಗರ ಜಿಲ್ಲೆಯಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶವನ್ನು ಹೊರಡಿಸಿದೆ. * ಇತ್ತೀಚಿಗೆ ಜನವರಿ. 27 ರಂದು‌ ರಾಮನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಸಚಿವ ಸಂಪುಟವು ಒಪ್ಪಿಗೆಯನ್ನು ನೀಡಿತ್ತು ಈ ಹಿನ್ನಲೆಯಿಂದ ರಾಜ್ಯ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ. * ಇದೀಗ ರಾಜ್ಯ ಸರ್ಕಾರವು ಚನ್ನಪಟ್ಟಣದ ರೇಷ್ಮೆ ತರಬೇತಿ ಸಂಸ್ಥೆ ಸುಮಾರು 20 ಎಕರೆ ಜಾಗದಲ್ಲಿ ಅಂದಾಜು 75 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆಯನ್ನು ನಬಾರ್ಡ್‌ ಸಹಯೋಗದಲ್ಲಿ ನಿರ್ಮಾಣ ಮಾಡಲಿದೆ ಎಂದು ತಿಳಿಸಿದೆ. * ಈ ಹಿಂದೆ 2021-22 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ರೇಷ್ಮೆ ಉದ್ಯಮದ ಪಾಲುದಾರರ ಅನುಕೂಲಕ್ಕಾಗಿ ನಬಾರ್ಡ್'ನ ಸಹಾಯದೊಂದಿಗೆ ಮಾರುಕಟ್ಟೆಯನ್ನು ನಿರ್ಮಿಸಲಾಗುವುದು ಎಂದು ಘೋಷಣೆ ಮಾಡಿದ್ದರು. ಇದೀಗ ಈ ಯೋಜನೆಗಾಗಿ ನಬಾರ್ಡ್ 35 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಪ್ರಸ್ತುತ ಚನ್ನಪಟ್ಟಣದಲ್ಲಿ ಹೈಟೆಕ್‌ ರೇಷ್ಮೆ ಮಾರುಕಟ್ಟೆಗೆ 35 ಎಕರೆ ಪ್ರದೇಶವನ್ನು ಸ್ವೀಕರಿಸಲಾಗಿದೆ, ಅದರಲ್ಲಿ 10 ಎಕರೆಯಲ್ಲಿ ಮುಖ್ಯ ಕಟ್ಟಡ ನಿರ್ಮಾಣ, ಹಾಗೂ ಇನ್ನ ಉಳಿದ ಭೂಪ್ರದೇಶದಲ್ಲಿ ವಸತಿ ನಿಲಯ ಹಾಗೂ ಪ್ರದರ್ಶನ ಸಭಾಂಗಣ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. * * ರಾಮನಗರ ಜಿಲ್ಲೆ : ಇದೊಂದು ಭಾರತದ ಕರ್ನಾಟಕ ರಾಜ್ಯದ ಒಂದು ನಗರವಾಗಿದೆ. ಈ ನಗರವು ಪುರಸಭೆಯನ್ನು ಹೊಂದಿದೆ. ಈ ನಗರವು ರಾಜಧಾನಿ ಬೆಂಗಳೂರಿನಿಂದ ಸುಮಾರು 50 ಕಿ.ಮೀ. ದೂರದಲ್ಲಿದೆ. * ರಾಮನಗರ ಜಿಲ್ಲೆಯಲ್ಲಿನ ರೇಷ್ಮೆ ಮಾರ್ಕೆಟ್ ಅರ್ಕಾವತಿ ನದಿಯ ದಡದಲ್ಲಿದೆ, ಇಲ್ಲಿನ ಶ್ರೀ ರಾಮದೇವರ ಬೆಟ್ಟ ಶೋಲೆ ಬೆಟ್ಟ ಎಂದು ಜನಪ್ರಿಯವಾಗಿದೆ. ಈ ಹಿಂದೆ ಮೈಸೂರಿನ ಚಕ್ರವರ್ತಿ ಟಿಪ್ಪು ಸುಲ್ತಾನನ ಆಳ್ವಿಕೆಯ ಕಾಲದಲ್ಲಿ ಈ ನಗರವನ್ನು ಶಂಸರಾಬಾದ್ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಕ್ಕೂ ಮೊದಲು ಸರ್ ಬ್ಯಾರಿ ಕ್ಲೋಸ್ ನಂತರ ಈ ನಗರವನ್ನು ಕ್ಲೋಸ್‌ಪೆಟ್ ಎಂದು ಕರೆಯಲಾಗುತಿತ್ತು. ಆದರೆ ಆ ಸಮಯದಲ್ಲಿ ಕ್ಲೋಸ್‌ಪೇಟೆಯನ್ನು ರಾಮನಗರ ಎನ್ನಲಾಗುತ್ತಿತ್ತು.