Job Description: * ಪ್ರಸ್ತುತ ದೇಶದಲ್ಲಿ 2022 ರ ಜನವರಿ. 18 ರವರೆಗೆ ಪ್ರಧಾನ್ ಮಂತ್ರಿ ಗ್ರಾಮೀಣ್ ಸಡಕ್ ಯೋಜನಾ ಅಡಿ (PMGSY) ಸರಿ ಸುಮಾರು 6,84,994 ಕಿ.ಮೀ. ಅಳತೆಯ 1,66,798 ಗ್ರಾಮೀಣ ರಸ್ತೆಗಳು ನಿರ್ಮಾಣವಾಗಿವೆ, ಈ ಮಾಹಿತಿಯು 2021-22 ರ ಆರ್ಥಿಕ ಸಮೀಕ್ಷೆಯಲ್ಲಿ ಬಹಿರಂಗಪಡಿಸಲಾಗಿದೆ. * 2021-22 ರ ಆರ್ಥಿಕ ಸಮೀಕ್ಷೆಯ ಪ್ರಕಾರ PMGSY ಅಡಿಯಲ್ಲಿ ಸುಮಾರು 6,404 ದಾಟು ಸೇತುವೆಗಳು ನಿರ್ಮಾಣವಾಗಿವೆ. ಹಾಗೂ ಅದೇ ವೇಳೆಯಲ್ಲಿ 7,82,844 ಕಿಮೀ ಅಳತೆಯ 1,82,506 ರಸ್ತೆಗಳು, 9,456 ದಾಟು ಸೇತುವೆಗಳು ಮಂಜೂರಾಗಿವೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಗ್ರಾಮೀಣ ಸಾರಿಗೆ ಸಂಪರ್ಕ ಹೆಚ್ಚಿಸುವ ಉದ್ದೇಶ ಹಾಗೂ ಗ್ರಾಮೀಣ ಕೃಷಿ ಅಭಿವೃದ್ಧಿಗೆ ಬಲ ನೀಡುವದೇ ಈ PMGSY'ನ ಮೂಲ ಉದ್ದೇಶವಾಗಿದೆ. * ಪ್ರಸ್ತುತ ಪ್ರಧಾನ್ ಮಂತ್ರಿ ಆವಾಸ್ ಯೋಜನಾ- ಗ್ರಾಮೀಣ್ ಅಡಿಯಲ್ಲಿ 2021-22 ರವರೆಗೆ ಸುಮಾರು 2.63 ಕೋಟಿ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿತ್ತು, ಇದೀಗ ಅದರಲ್ಲಿ 2.17 ಕೋಟಿ ಮನೆಗಳು ಮಂಜೂರು ಮಾಡಲಾಗಿದ್ದು, ಅವುಗಳಲ್ಲಿ 1.69 ಕೋಟಿಗಳಷ್ಟು ಮನೆಗಳು ನಿರ್ಮಾಣವಾಗಿವೆ ಎಂದು 2021-22 ರ ಆರ್ಥಿಕ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಈ ಎರಡು ಯೋಜನೆಗಳಿಗೆ ವಿಶ್ವ ಬ್ಯಾಂಕ್ ಅಭಿನಂದನೆಗಳನ್ನು ತಿಳಿಸಿದೆ. * ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY)ಯು ಸಂಪರ್ಕವಿರದ ಹಳ್ಳಿಗಳಿಗೆ ಉತ್ತಮ ರಸ್ತೆ ಸಂಪರ್ಕವನ್ನು ಒದಗಿಸಲು ಇದೊಂದು ಭಾರತದಲ್ಲಿ ರಾಷ್ಟ್ರವ್ಯಾಪಿ ಯೋಜನೆಯಾಗಿದೆ. ಈ ಯೋಜನೆಯನ್ನು 1.7 ಲಕ್ಷ ವಾಸಸ್ಥಾನಗಳಲ್ಲಿ 500 ಕ್ಕಿಂತ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಬಯಲು ಪ್ರದೇಶಗಳಲ್ಲಿ ಹಾಗೂ 250 ಕ್ಕಿಂತ ಅಧಿಕ ಗುಡ್ಡಗಾಡು ಪ್ರದೇಶಗಳಲ್ಲಿ ಎಲ್ಲಾ ಹವಾಮಾನ ರಸ್ತೆಗಳ ಮೂಲಕ ಸಂಪರ್ಕವನ್ನು ಒದಗಿಸಲು ಇದನ್ನು ಯೋಜಿಸಲಾಗಿದೆ, ಪ್ರಸ್ತುತ 2017 ರ ಡಿಸೆಂಬರ್ ವೇಳೆಗೆ 82% ಸಂಪರ್ಕಗೊಂಡಿದೆ ಹಾಗೂ ಇನ್ನುಳಿದ ಕೆಲಸಗಳು ಪ್ರಗತಿಯಲ್ಲಿವೆ. * ಈ ಹಿಂದೆ 2000 ರಲ್ಲಿ ಭಾರತದ ಆಗಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ಕೇಂದ್ರ ಪ್ರಾಯೋಜಿತ ಯೋಜನೆಯನ್ನು ಪರಿಚಯಿಸಿದ್ದಾರೆ. ಪ್ರಸ್ತುತ ಈ ಯೋಜನೆ ಅಡಿಯಲ್ಲಿ ಮಣಿಪುರ ರಾಜ್ಯದಲ್ಲಿ ಹೊಸ ರಸ್ತೆಗಳು ಹಾಗೂ ಕೆಲವು ಅಂತರ-ಗ್ರಾಮಗಳ ರಸ್ತೆಯನ್ನು ಮೇಲ್ದರ್ಜೆಗೇರಿಸಿದ ಹಿನ್ನಲೆಯಿಂದಾಗಿ ಅದೆಷ್ಟೋ ಹಳ್ಳಿ ಜನರ ಜೀವನಶೈಲಿಯ ಬದಲಾಗಿದೆ ಎಂದು ಅಸ್ಸಾಂ ಟ್ರಿಬ್ಯೂನ್ ವರದಿ ಮಾಡಿದೆ. * ಪ್ರಸ್ತುತ ಈ PMGSY ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರದಲ್ಲಿದೆ. ಇದನ್ನು 2000 ಡಿಸೆಂಬರ್. 25 ರಂದು ಆರಂಭಿಸಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರವು ಸಂಪೂರ್ಣ ಹಣವನ್ನು ನೀಡುತ್ತದೆ. ಆದರೆ 2015 ರ ನವೆಂಬರ್'ನಲ್ಲಿ 14 ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಅನ್ವಯ ಕೇಂದ್ರ ಪ್ರಾಯೋಜಿತ ಯೋಜನೆಗಳ ತರ್ಕಬದ್ಧಗೊಳಿಸುವಿಕೆಯ ಬಗ್ಗೆ ಮುಖ್ಯಮಂತ್ರಿಗಳ ಉಪ-ಗುಂಪಿನ ಅಡಿ ಈ ಯೋಜನೆಗೆ ಕೇಂದ್ರ ಸರ್ಕಾರ 60% ಹಾಗೂ ರಾಜ್ಯ ಸರ್ಕಾರಗಳು 40% ಹಣವನ್ನು ನೀಡಲಾಗುವುದು ಎಂದು ಘೋಷಣೆ ಮಾಡಿವೆ. * * PMGSY ಗುರಿ : ಎಲ್ಲ ಗ್ರಾಮಗಳಿಗೂ ರಸ್ತೆ ಕಲ್ಪಿಸುವ ಗುರಿಯನ್ನು ಹೊಂದಿದೆ.