Job Description: * ಪ್ರಸ್ತುತ ಭಾರತೀಯ ಸೇನೆಯ ನೂತನ ವೈಸ್‌ ಚೀಫ್ ಆಗಿ ಲೆಫ್ಟಿನೆಂಟ್ ಜನರಲ್ ಮನೋಜ್‌ ಪಾಂಡೆ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೊದಲು ಇವರು ಸೇನೆಯ ಈಸ್ಟರ್ನ್ ಕಮಾಂಡ್‌ನ‌ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಇವರ ಈ ಈಸ್ಟರ್ನ್ ಕಮಾಂಡ್‌ನ‌ ಮುಖ್ಯಸ್ಥ ಸ್ಥಾನಕ್ಕೆ ಲೆಫ್ಟಿನೆಂಟ್ ಜನರಲ್ ಆರ್‌.ಪಿ. ಕಲಿತಾ ಅವರು ನೇಮಕವಾಗಿದ್ದಾರೆ. * ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು 1982 ರಲ್ಲಿ ಬಾಂಬೆ ಸ್ಯಾಪರ್ ಮೂಲಕ ತಮ್ಮ ಸೈನಿಕ ಜೀವನವನ್ನು ಆರಂಭಿಸಿದ್ದಾರೆ. ಇವರು ಜಮ್ಮು ಕಾಶ್ಮೀರದಲ್ಲಿ 'ಆಪರೇಶನ್‌ ಪರಾಕ್ರಮ್‌’ ಸಂದರ್ಭ ಎಲ್‌ಒಸಿ(LOC)ನಲ್ಲಿ ಇವರು ಎಂಜಿನಿಯರ್‌ ರೆಜಿಮೆಂಟ್‌ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಾಗೂ ವಿಶ್ವಸಂಸ್ಥೆಯ ಶಾಂತಿ ಪಾಲನ ಪಡೆಯ ಸದಸ್ಯರಾಗಿ ಇಥಿಯೋಪಿಯಾ ಹಾಗೂ ಎರೀಟ್ರಿಯಾಗಳಲ್ಲಿ ಸೇವೆ ಸಲ್ಲಿಸಿದ್ದಾರೆ. * * ಲೆಫ್ಟಿನೆಂಟ್ ಜನರಲ್ ಮನೋಜ್ ಚಂದ್ರಶೇಖರ್ ಪಾಂಡೆ PVSM, AVSM, VSM : ಇವರೊಬ್ಬ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜನರಲ್ ಅಧಿಕಾರಿಯಾಗಿದ್ದಾರೆ. ಇವರು 2022 ರ ಫೆಬ್ರವರಿ. 01 ರಿಂದ ಭಾರತೀಯ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಈ ಹಿಂದೆ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ಗೆ ಕಮಾಂಡ್ ಆಗಿದ್ದರು. * ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ಪರಮ ವಿಶಿಷ್ಟ ಸೇವಾ ಪದಕ, ಅತೀ ವಿಶಿಷ್ಟ ಸೇವಾ ಪದಕ, ವಿಶಿಷ್ಟ ಸೇವಾ ಪದಕಗಳನ್ನು ಪಡೆದುಕೊಂಡಿದ್ದಾರೆ. ಬರುವ ಎಪ್ರಿಲ್‌ ತಿಂಗಳಿನಲ್ಲಿ ಪ್ರಸ್ತುತ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು ನಿವೃತ್ತಿ ಹೊಂದಲಿದ್ದಾರೆ. ಇವರಿಂದ ತೆರುವಾದ ಸ್ಥಾನಕ್ಕೆ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ನೂತನ ಸೇನಾ ಮುಖ್ಯಸ್ಥರಾಗಳಿದ್ದಾರೆ ಎಂದು ತಿಳಿದು ಬಂದಿದೆ. * ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಭಾರತೀಯ ಸೇನೆಯ ನಾರ್ದರ್ನ್ ಕಮಾಂಡ್‌'ನ‌ ಕಮಾಂಡಿಂಗ್‌ ಇನ್‌ ಚೀಫ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೊದಲು ಇವರ ಈ ಸ್ಥಾನದಲ್ಲಿ ಕಾರ್ಗಿಲ್‌ ಯುದ್ಧವೀರ ಲೆಫ್ಟಿನೆಂಟ್ ಜನರಲ್ ಯೋಗೇಶ್‌ ಕುಮಾರ್‌ ಜೋಶಿ ಅವರಿದ್ದರು, ಇದೀಗ ಅವರು ನಿವೃತ್ತಿಯನ್ನು ಹೊಂದಿದ್ದಾರೆ ಎಂದು ಭಾರತೀಯ ಸೇನೆ ಟ್ವೀಟ್‌ ಮೂಲಕ ಮಾಹಿತಿ ನೀಡಿದೆ. * ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ AVSM ಅವರು ಭಾರತೀಯ ಸೇನೆಯ ಪ್ರಸ್ತುತ ಜನರಲ್ ಆಫೀಸರ್-ಕಮಾಂಡಿಂಗ್-ಇನ್-ಚೀಫ್ (GOC-in-C) ಉತ್ತರ ಕಮಾಂಡ್ ಆಗಿದ್ದಾರೆ. ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು 1984 ರಲ್ಲಿ ಜಮ್ಮು ಕಾಶ್ಮೀರ ರೈಫ‌ಲ್ಸ್‌ನ 18 ನೇ ಬೆಟಾಲಿಯನ್‌ ಮೂಲಕ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಆರಂಭಿಸಿದ್ದಾರೆ. ಈ ಹಿಂದೆ ಇವರು ಭಾರತೀಯ ಸೇನೆಯ IX ಕಾರ್ಪ್ಸ್‌ನ ಸೇನಾ ಸಿಬ್ಬಂದಿ ಮತ್ತು GOC ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಹಾಗೂ ಇವರು ಆಪರೇಷನ್ ರೈನೋ ಸಂಧರ್ಭದಲ್ಲಿ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್‌ನ ಸೆಕ್ಟರ್‌ನ ಆಪರೇಷನ್ ರಕ್ಷಕ್ ಸಮಯದಲ್ಲಿ ಅವರು ಚೌಕಿಬಾಲ್‌ನಲ್ಲಿ ಬೆಟಾಲಿಯನ್‌ಗೆ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೂ ಅಸ್ಸಾಂನಲ್ಲಿ ಇನ್ಸ್‌ಪೆಕ್ಟರ್ ಜನರಲ್, ಅಸ್ಸಾಂ ರೈಫಲ್ಸ್ ಆಗಿಯು ಕೂಡ ಸೇವೆ ಸಲ್ಲಿಸಿದರು.