Job Description: * ಪ್ರಸ್ತುತ ಒಡಿಶಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತೀಯ ಉನ್ನತಿ ಹೂಡಾ ಹಾಗೂ ಕಿರಣ್ ಜಾರ್ಜ್ ಅವರು ಕ್ರಮವಾಗಿ ಮಹಿಳಾ ಸಿಂಗಲ್ಸ್ ಹಾಗು ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಜಯಿಸಿಕೊಂಡಿದ್ದಾರೆ. * ಇತ್ತೀಚಿಗೆ ಈ ಮಹಿಳಾ ಹಾಗೂ ಪುರುಷ ಫೈನಲ್‌ ಪಂದ್ಯಗಳು ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದಿವೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಉನ್ನತಿ ಹೂಡಾ ಅವರು ಭಾರತದ ಸ್ಮಿತ್ ತೋಶ್ನಿವಾಲ್ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಉನ್ನತಿ ಹೂಡಾ ಅವರು ಈ ಟೂರ್ನಿಯ ಮೂಲಕ ಸೂಪರ್‌ 100 ಟೂರ್ನಿಯೊಂದರಲ್ಲಿ ಚಾಂಪಿಯನ್‌ ಆಗಿರುವ ದೇಶದ ಅತಿ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. * ಒಡಿಶಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಉನ್ನತಿ ಹೂಡಾ ಅವರಿಗೆ ಒಲಿದಿರುವ ಮೊದಲ ಒಡಿಶಾ ಓಪನ್ ಕಿರೀಟ ಪ್ರಶಸ್ತಿ ಇದಾಗಿದೆ. * ಮಹಿಳಾ ಡಬಲ್ಸ್ ವಿಭಾಗದ ಭಾರತದ ತ್ರೀಶಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಯು ಭಾರತೀಯ ಸಂಯೋಗಿತಾ ಘೋರ್ಪ‍ಡೆ- ಶ್ರುತಿ ಮಿಶ್ರಾ ಅವರ ಜೋಡಿಯನ್ನು ಸೋಲಿಸುವ ಮೂಲಕ ಒಡಿಶಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಶಸ್ತಿಯನ್ನು ಜಯಿಸಿಕೊಂಡಿದ್ದಾರೆ. * ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತೀಯ ಕಿರಣ್ ಜಾರ್ಜ್‌ ಅವರು ದೇಶದ ಪ್ರಿಯಾಂಶು ರಾಜಾವತ್ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಪುರುಷರ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಎಂ.ಆರ್‌. ಅರ್ಜುನ್‌ ಮತ್ತು ತ್ರೀಶಾ ಜೋಲಿ ಅವರ ಜೋಡಿಯು ಶ್ರೀಲಂಕಾದ ಸಚಿನ್ ದಿಯಾಸ್‌ ಹಾಗೂ ತಿಳಿನಿ ಹೆಂದಾದಹೆವಾ ಜೋಡಿಯ ಎದುರು ಸೋಲನ್ನು ಅನುಭವಿಸಿದ್ದಾರೆ. ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಇದೊಂದು 2022 ರ ಒಡಿಶಾ ಓಪನ್ BWF ಸೂಪರ್ 100 ಪಂದ್ಯಾವಳಿಯಾಗಿದೆ, ಇದನ್ನು ಒಡಿಶಾ ರಾಜ್ಯದ ಕಟಕ್ ನಲ್ಲಿರುವ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಾಗಿದೆ. ಈ ಒಡಿಶಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಪಂದ್ಯಗಳು 2022 ರ ಜನವರಿ. 25 ರಿಂದ 2022 ಜನವರಿ. 30 ರವರೆಗೆ ನಡೆದಿವೆ. * ಪ್ರಸ್ತುತ 2022 ಒಡಿಶಾ ಓಪನ್ BWF ವರ್ಲ್ಡ್ ಟೂರ್‌ನ 3 ನೇ ಪಂದ್ಯಾವಳಿಯಾಗಿದೆ ಹಾಗೂ ಇದು ಒಡಿಶಾ ಓಪನ್‌ ನ ಮೊದಲ ಆವೃತ್ತಿಯಾಗಿದೆ. ಪ್ರಸ್ತುತ ಈ ಪಂದ್ಯಾವಳಿಗಳನ್ನು ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟದ ಅನುಮತಿಯನ್ನು ಪಡೆದುಕೊಂಡಿರುವ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಈ ಪಂದ್ಯಾವಳಿಯನ್ನು ಆಯೋಜಿಸಿತ್ತು. * ಈ ಒಡಿಶಾ ಓಪನ್ ಟೂರ್ನಿಯು ಪಂದ್ಯಾವಳಿಯ ಒಟ್ಟು ಬಹುಮಾನದ ಮೊತ್ತ 75,000 US ಡಾಲರ್ ಆಗಿದೆ.