Job Description: * ಪ್ರಸ್ತುತ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್ ನೀಡುವ ಪ್ರತಿಷ್ಟಿತ ಆರ್‌ಐಬಿಎ ಅಂತರಾಷ್ಟ್ರೀಯ ಪುರಸ್ಕಾರ 2021 ಕ್ಕೆ, ಬಾಂಗ್ಲಾದೇಶದ ವಾಸ್ತುಶಿಲ್ಪಿಯಾಗಿರುವ ಕಶೀಫ್ ಚೌಧುರಿ ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಿರುವ ನೈಋತ್ಯ ಬಾಂಗ್ಲಾದೇಶದ ದೂರದ ಗ್ರಾಮೀಣ ಪ್ರದೇಶದಲ್ಲಿರುವ ಸತ್‌ಖಿರಾ ಜಿಲ್ಲೆಯ ಫ್ರೆಂಡ್‌ಶಿಪ್ ಆಸ್ಪತ್ರೆಯು ಆಯ್ಕೆಯಾಗಿದೆ. * ಬಾಂಗ್ಲಾ ದೇಶದಲ್ಲಿನ ಈ ಆಸ್ಪತ್ರೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಲಾಗಿದೆ, ಇದೀಗ ಈ ಆಸ್ಪತ್ರೆಯ 80 ಹಾಸಿಗೆಗಳ ಸಾಮುದಾಯಿಕ ಕಟ್ಟಡವಾಗಿದೆ, ಇದರ ಸುತ್ತಮುತ್ತಲಿನ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸಮುದ್ರದ ನೀರಿನ ಪ್ರಮಾಣ ಏರಿಕೆಯಾಗುವ ಪರಿಣಾಮಗಳನ್ನು ತಡೆದು ಹಿಡಿದು ಕೊಳ್ಳುವ ರೀತಿಯಲ್ಲಿ ಈ ಆಸ್ಪತ್ರೆಯುನ್ನು ಅಭಿವೃದ್ಧಿಪಡಿಸಲಾಗಿದೆ. ಅಷ್ಟೇ ಅಲ್ಲದೇ ಈ ಆಸ್ಪತ್ರೆಯಲ್ಲಿ ಸರಣಿ ಅಂಗಳಗಳನ್ನು ನಿರ್ಮಿಸಲಾಗಿದೆ ಈ ಕಾರಣದಿಂದ ಪ್ರಾಕೃತಿಕ ಬೆಳಕು ಹಾಗೂ ವಾತಾಯನ ವ್ಯವಸ್ಥೆಗೆ ಬಹಳ ಅನುಕೂಲವಾಗಿದೆ. * ಪ್ರಸ್ತುತ ವಿನ್ಯಾಸ, ವಾಸ್ತುಶಿಲ್ಪದ ವೈಭವವನ್ನು ಪ್ರಸ್ತುತಪಡಿಸುವ ಹಾಗೂ ಅರ್ಥಪೂರ್ಣವಾದ ಸಾಮಾಜಿಕ ಪರಿಣಾಮಕ್ಕಾಗಿ ಕಟ್ಟಡಗಳಿಗೆ 2 ವರ್ಷಗಳಿಗೊಮ್ಮೆ ಈ ಪುರಸ್ಕಾರವನ್ನು ನೀಡಲಾಗುತ್ತದೆ. ಇದೀಗ ಈ ಪಟ್ಟಿಯಲ್ಲಿರುವ ಪ್ರತೀ ಕಟ್ಟಡಗಳಿಗೆ ಅಂತರಾಷ್ಟ್ರೀಯ ತಜ್ಞರ ಸಮಿತಿ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ. * ಅಂತಿಮ ಹಂತಕ್ಕೆ ಆಯ್ಕೆಯಾಗಿರುವ 3 ಕಟ್ಟಡಗಳ ಪೈಕಿ ಫ್ರೆಂಡ್ಶಿಪ್ ಆಸ್ಪತ್ರೆಯು ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಆಯ್ಕೆಗಾರರ ಸಮಿತಿ ಅಧ್ಯಕ್ಷ, ಫ್ರಾನ್ಸ್ ನ ಖ್ಯಾತ ವಾಸ್ತುಶಿಲ್ಪಿ ಒಡೈಲ್ ಡೆಕ್ ಅವರು ಈ ಮಾಹಿತಿಯನ್ನು ತಿಳಿಸಿದ್ದಾರೆ. * ಪ್ರಸ್ತುತ ಈ ಫ್ರೆಂಡ್‌ಶಿಪ್ ಆಸ್ಪತ್ರೆಯು ಮಾನವೀಯತೆ ಹಾಗೂ ಸುರಕ್ಷತೆಯ ವಾಸ್ತುಶಿಲ್ಪವನ್ನು ಹೊಂದಿದೆ. ಹಾಗೂ ಸಾಮಾಜಿಕ ಆವಿಷ್ಕಾರದ ಮೂಲಕ ಸಮುದಾಯಗಳಿಗೆ ಘನತೆ ಹಾಗೂ ಭರವಸೆಯನ್ನು ನೀಡುವ ಮಾನವೀಯ ದೃಷ್ಟಿಕೋನದ ಪ್ರತೀಕವಾಗಿದೆ ಎಂದವರು ತಿಳಿಸಿದ್ದಾರೆ. * ಈ ಆಸ್ಪತ್ರೆಯು ಪ್ರಧಾನವಾಗಿ ಬಾಂಗ್ಲಾದೇಶದ ಗ್ರಾಮೀಣ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಆಸ್ಪತ್ರೆ ಕೆಲವೇ ವರ್ಷಗಳ ಹಿಂದೆ ದೊಡ್ಡ ಚಂಡಮಾರುತದಿಂದ ಹೆಚ್ಚು ಪರಿಣಾಮವನ್ನು ಅನುಭವಿಸಿತ್ತು. * * ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್ (RIBA) : ಇದೊಂದು ಪ್ರಾಥಮಿಕವಾಗಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಾಸ್ತುಶಿಲ್ಪಿಗಳಿಗೆ ವೃತ್ತಿಪರ ಸಂಸ್ಥೆಯಾಗಿದೆ, ಈ ಹಿಂದೆ 1837 ರಲ್ಲಿ ಅಂತರರಾಷ್ಟ್ರೀಯವಾಗಿ ನೀಡಲಾಗಿರುವ ರಾಯಲ್ ಚಾರ್ಟರ್ ಅಡಿಯಲ್ಲಿ ವಾಸ್ತುಶಿಲ್ಪದ ಪ್ರಗತಿಗಾಗಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಈ ಮೊದಲು ಮೂರು ಪೂರಕ ಚಾರ್ಟರ್‌ಗಳು ಹಾಗೂ 1971 ರಲ್ಲಿ ಹೊಸ ಚಾರ್ಟರ್ ನೀಡಲಾಗಿದೆ. * ಮತ್ತೇ ಇದನ್ನು 1834 ರಲ್ಲಿ ಲಂಡನ್‌ನಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್ ಆಗಿ ಸ್ಥಾಪನೆ ಮಾಡಲಾಯಿತು, ಆದರೆ RIBA 66 ಪೋರ್ಟ್‌ಲ್ಯಾಂಡ್ ಪ್ಲೇಸ್‌ನಲ್ಲಿ ಕೇಂದ್ರ ಲಂಡನ್ ನಲ್ಲಿ ತನ್ನ ಪ್ರಧಾನ ಕಛೇರಿ ಹಾಗೂ ಪ್ರಾದೇಶಿಕ ಕಚೇರಿಗಳ ಜಾಲವನ್ನು ಉಳಿಸಿಕೊಂಡಿದೆ. * ಪ್ರಸ್ತುತ RIBA ಲೈಬ್ರರಿಯನ್ನು 1834 ರಲ್ಲಿ ಸ್ಥಾಪಿಸಲಾಗಿದೆ. ಇದು ವಿಶ್ವದ '3' ದೊಡ್ಡ ವಾಸ್ತುಶಿಲ್ಪದ ಗ್ರಂಥಾಲಯಗಳಲ್ಲಿ ಒಂದಾಗಿದೆ. ಹಾಗೂ ಈ RIBA ಲೈಬ್ರರಿಯು ಯುಕೆ ವಾಸ್ತುಶಿಲ್ಪಿಗಳ ನೋಂದಣಿ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. * ಈ RIBA ಸಂಸ್ಥೆಯು ಅಧ್ಯಕ್ಷರ ಪದಕಗಳು ಹಾಗೂ ರಾಯಲ್ ಗೋಲ್ಡ್ ಮೆಡಲ್, ಸೇರಿದಂತೆ ಸ್ಟಿರ್ಲಿಂಗ್ ಪ್ರಶಸ್ತಿ, ಮತ್ತು ವಿಶ್ವದ ಕೆಲವು ಹಳೆಯ ವಾಸ್ತುಶಿಲ್ಪ ಪ್ರಶಸ್ತಿಗಳನ್ನು ಸಂಸ್ಥೆಗಳನ್ನೂ ನಿರ್ವಹಿಸುತ್ತದೆ.