Job Description: * ಪ್ರತಿ ವರ್ಷವು ಜನವರಿ. 21 ರಂದು ಮಣಿಪುರ, ಮೇಘಾಲಯ ಹಾಗೂ ತ್ರಿಪುರಾ ರಾಜ್ಯಗಳು ತಮ್ಮ ರಾಜ್ಯದಲ್ಲಿ ರಾಜ್ಯೋತ್ಸವ ದಿನವನ್ನು ಆಚರಿಸುತ್ತವೆ. ಈ ರಾಜ್ಯಗಳನ್ನು ಈಶಾನ್ಯ ಪ್ರದೇಶ ಕಾಯಿದೆ, 1971 ರ ಅಡಿಯಲ್ಲಿ ರಚಿಸಲಾಗಿದೆ. * ಈ ಹಿಂದೆ 1949 ರಲ್ಲಿ ಮಣಿಪುರ ಮತ್ತು ತ್ರಿಪುರಾ ರಾಜ್ಯಗಳು ಭಾರತ ಜೊತೆಗೆ ಸೇರ್ಪಡೆಗೊಂಡಿವೆ. ನಂತರ ಆ ಪ್ರದೇಶಗಳಿಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನವನ್ನು ಒದಗಿಸಲಾಯಿತು. ಮತ್ತೇ 1972 ರಲ್ಲಿ ಮೇಘಾಲಯ ಮತ್ತು ತ್ರಿಪುರಾಕ್ಕೆ ಸಂಪೂರ್ಣ ರಾಜ್ಯತ್ವವನ್ನು ಕಲ್ಪಿಸಲಾಯಿತು. * ಭಾರತದ ಈಶಾನ್ಯ ಪ್ರದೇಶವು ಈ ಹಿಂದೆ 1947 ರಲ್ಲಿ ಅಸ್ಸಾಂ ಬಯಲು ಪ್ರದೇಶಗಳಾಗಿದ್ದವು, ಈಶಾನ್ಯ ಗಡಿನಾಡು ಪ್ರದೇಶಗಳು ಹಾಗೂ ಬೆಟ್ಟದ ಜಿಲ್ಲೆಗಳನ್ನು ಹೊಂದಿದ್ದವು. ನಂತರ ರಾಜರ ರಾಜ್ಯಗಳು 1949 ರಲ್ಲಿ ಭಾರತದೊಂದಿಗೆ ವಿಲೀನವಾದವು, ಆಗ ಅವುಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾರ್ಪಾಡು ಮಾಡಲಾಯಿತು. ನಂತರ 1963 ರಲ್ಲಿ ನಾಗಾಲ್ಯಾಂಡ್ ರಾಜ್ಯವು ರಚನೆಯಾಯಿತು. * ಅಸ್ಸಾಂ ಮರುಸಂಘಟನೆ (ಮೇಘಾಲಯ) ಕಾಯಿದೆಯನ್ನು 1969 ರಲ್ಲಿ ಜಾರಿಗೊಳಿಸಲಾಯಿತು. ಈ ಕಾಯಿದೆಯಡಿಯಲ್ಲಿ, ಮೇಘಾಲಯ ಪ್ರದೇಶವನ್ನು ಅಸ್ಸಾಂನಿಂದ ಬೇರ್ಪಡಿಸಿ ಸ್ವಾಯತ್ತ ರಾಜ್ಯವಾಗಿ ಮಾಡಲಾಯಿತು. ಈ ರಾಜ್ಯವನ್ನು ಭಾರತೀಯ ಸಂವಿಧಾನದ 6 ನೇ ಶೆಡ್ಯೂಲ್ ಅಡಿಯಲ್ಲಿ ರಚಿಸಲಾಗಿದೆ. * ಈಶಾನ್ಯ ಮರುಸಂಘಟನೆ ಕಾಯಿದೆಯನ್ನು 1972 ರಲ್ಲಿ ಜಾರಿಗೊಳಿಸಲಾಯಿತು. ಈ ಕಾಯಿದೆ ಅಡಿಯಲ್ಲಿ ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳಿಗೆ ಸಂಪೂರ್ಣ ರಾಜ್ಯತ್ವವನ್ನು ನೀಡಲಾಯಿತು. ಅಸ್ಸಾಂನ NEFA ಮತ್ತು ಮಿಜೋ ಬೆಟ್ಟಗಳನ್ನು ಈ ಕಾಯಿದೆಯ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಲಾಯಿತು. ಮಿಜೋ ಒಪ್ಪಂದವನ್ನು 1986 ರಲ್ಲಿ ಸಹಿ ಮಾಡಿ, 1987 ರಲ್ಲಿ ಮಿಜೋರಾಂ ರಾಜ್ಯವನ್ನು ರಚಿಸಲಾಯಿತು. ಹಾಗೂ 1987 ರಲ್ಲಿ, NEFA, ಅಂದರೆ, ಅರುಣಾಚಲ ರಾಜ್ಯಕ್ಕೆ ಸಂಪೂರ್ಣ ರಾಜ್ಯತ್ವವನ್ನು ಕಲ್ಪಿಸಲಾಯಿತು. * * ತ್ರಿಪುರಾ : ಹಿಂದೂ ಬೆಂಗಾಲಿ ಜನರು ತ್ರಿಪುರಾದಲ್ಲಿ ಪ್ರಮುಖ ಜನಾಂಗೀಯ ಭಾಷಿಕ ಜನರಾಗಿದ್ದಾರೆ. ತ್ರಿಪುರಾ ಜನಸಂಖ್ಯೆಯ 30% ಜನರು ಅನುಸೂಚಿಸಿರುವ ಬುಡಕಟ್ಟುಗಳಿಂದ ರಚಿಸಲಾಗಿದೆ. ಪ್ರಸ್ತುತ ಕೊಕ್ಬೊರೊಕ್ ತ್ರಿಪುರಾದ ಪ್ರಮುಖ ಜನಾಂಗೀಯ ಭಾಷೆಯಾಗಿದೆ. ಸರಿ ಸುಮಾರು 19 ಬುಡಕಟ್ಟುಗಳು ಈ ಭಾಷೆಯನ್ನು ಮಾತನಾಡುತ್ತಾರೆ. * * ಮಣಿಪುರ : ಮಣಿಪುರ ರಾಜ್ಯವು '3' ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಮಣಿಪುರಕ್ಕೆ ಇತರ ಹೆಸರುಗಳು ಸನಾಲಿಬಾಕ್ ಮತ್ತು ಕಂಗ್ಲೀಪಾಕ್ ಎಂಬ ಹೆಸರುಗಳಿವೆ. 1949 ರಲ್ಲಿ, ಮಣಿಪುರದ ಮಹಾರಾಜ ಬುಧಚಂದ್ರ ಅವರು ಮಣಿಪುರವನ್ನು ಭಾರತದ ಜೊತೆಗೆ ವಿಲೀನಗೊಳಿಸಿದರು. ಮೀಟೆಲಿಯನ್ ಎಂಬುವದು ಮಣಿಪುರದ ಮುಖ್ಯ ಭಾಷೆಯಾಗಿದೆ. ಹಾಗೂ ಈ ರಾಜ್ಯವನ್ನು ಮಣಿಪುರಿ ಎಂದೂ ಕರೆಯುತ್ತಾರೆ. * * ಮೇಘಾಲಯ : ಮೇಘಾಲಯ ಎಂದರೆ 'ಮೋಡಗಳ ವಾಸಸ್ಥಾನ' ಎಂದರ್ಥ. ಈ ಹಿಂದಿನ ಅಸ್ಸಾಂನ ಜಿಲ್ಲೆಗಳಾಗಿರುವ ಗಾರೋ, ಖಾಸಿ ಹಾಗೂ ಜೈನ್ತಿಯಾ ಬೆಟ್ಟಗಳು ಒಟ್ಟಾಗಿ ಮೇಘಾಲಯ ರಾಜ್ಯವನ್ನು ರಚಿಸಿದ್ದಾರೆ. ಈ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ತೇವಾಂಶವಿರುವ ಪ್ರದೇಶವಾಗಿದೆ. ಹಾಗೂ ಈ ರಾಜ್ಯವು 70% ಅರಣ್ಯ ಪ್ರದೇಶದಿಂದ ಆವೃತವಾಗಿದೆ.