Job Description: * ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯ ನೂತನ ಮುಖ್ಯಸ್ಥ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಹಿರಿಯ ರಾಕೆಟ್ ವಿಜ್ಞಾನಿ ಎಸ್. ಸೋಮನಾಥ್ ಅವರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ಇಸ್ರೋ'ನ ಮುಖ್ಯಸ್ಥರಾಗಿರುವ ಕೆ. ಶಿವನ್ ಅಧಿಕಾರಾವಧಿಯು ಇದೇ 2022 ರ ಜನೇವರಿ. 14 ರಂದು ಕೊನೆಗೊಳ್ಳಲಿದೆ, ಇವರ ಸ್ಥಾನಕ್ಕೆ ರಾಕೆಟ್ ವಿಜ್ಞಾನಿ ಎಸ್. ಸೋಮನಾಥ್ ಅವರನ್ನು ನೇಮಕ ಮಾಡಲಾಗಿದೆ. * ರಾಕೆಟ್ ವಿಜ್ಞಾನಿ ಎಸ್. ಸೋಮನಾಥ್ ಅವರು 2018 ರ ಜನೇವರಿಯಿಂದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. * ಎಸ್. ಸೋಮನಾಥ್ ಅವರು ಕರ್ನಾಟಕದ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿದ್ದಾರೆ, ಇವರು ಈ ಹಿಂದೆ 1985 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಗೆ ಸೇರಿದ್ದಾರೆ. ಇವರು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಹಾಗೂ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLG) ಯೋಜನೆಗಳಲ್ಲಿ ಅತೀ ಹೆಚ್ಚಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು 2015 ರ ಜೂನ್ ನಲ್ಲಿ ತಿರುವನಂತಪುರಂದಲ್ಲಿನ ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC)ನ ನಿರ್ದೇಶಕರಾಗಿ ನೇಮಕಗೊಂಡರು. * ವಿಜ್ಞಾನಿ ಎಸ್. ಸೋಮನಾಥ್ ಅವರು 2010 ರಿಂದ 2014 ರವರೆಗೆ GSLV Mk-III ನ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC)ದಲ್ಲಿ 2014 ರ ನವೆಂಬರ್ ವರೆಗೆ VSSC ಯಲ್ಲಿ 'ಪ್ರೊಪಲ್ಷನ್ ಮತ್ತು ಸ್ಪೇಸ್ ಆರ್ಡಿನೆನ್ಸ್' (Propulsion and Space Ordinance) ಘಟಕದ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. * ಪ್ರಸ್ತುತ ಸೋಮನಾಥ್ ಅವರು PSLV ಯನ್ನು ಪ್ರಪಂಚದಾದ್ಯಂತದ ಮೈಕ್ರೋಸಾಟಲೈಟ್‌ಗಳಿಗೆ ಹೆಚ್ಚಿನ ಬೇಡಿಕೆಯಿರುವ ಲಾಂಚರ್ ಆಗಿ ಮಾರ್ಪಾಡು ಮಾಡಿದ್ದಾರೆ. ಹಾಗೂ ಸ್ಥಳೀಯ ಕ್ರಯೋಜೆನಿಕ್ ಹಂತಗಳೊಂದಿಗೆ GSLV ಯ '3' ಯಶಸ್ವಿ ಕಾರ್ಯಾಚರಣೆಗಳಲ್ಲಿ ಹಾಗೂ LPSC'ನ ದ್ರವ ಹಂತಗಳೊಂದಿಗೆ PSLV'ಯ '11' ಯಶಸ್ವಿ ಕಾರ್ಯಾಚರಣೆಗಳಲ್ಲಿ ವಿಜ್ಞಾನಿ ಎಸ್. ಸೋಮನಾಥ್ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. * ವಿಜ್ಞಾನಿ ಎಸ್. ಸೋಮನಾಥ್ ಅವರು ಚಂದ್ರಯಾನ-2 ರ ಲ್ಯಾಂಡರ್ ಕ್ರಾಫ್ಟ್‌ಗಾಗಿ ಥ್ರೊಟಲ್ ಮಾಡುವ ಎಂಜಿನ್‌ಗಳ ವಿನ್ಯಾಸಗೊಳಿಸಿದ್ದಾರೆ, ಹಾಗೂ GSAT-9 ನಲ್ಲಿ ವಿದ್ಯುತ್ ಪ್ರೊಪಲ್ಷನ್ ಸಿಸ್ಟಮ್‌ ನ ಮೊದಲ ಬಾರಿಗೆ ಹಾರಾಟವನ್ನು ನಡೆಸಿದ ಯಶಸ್ವಿ ಇವರಿಗೆ ಸಂದಿದೆ. ವಿಜ್ಞಾನಿ ಸೋಮನಾಥ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಕೆ. ಶಿವನ್ ಅವರಿಂದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.