Job Description: * ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಮಾಹಿತಿಯ ಪ್ರಕಾರ ಭಾರತವು 2021ರಲ್ಲಿ ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್(UPI) ಮೂಲಕ 70 ಲಕ್ಷ ಕೋಟಿ ರೂ. ವಹಿವಾಟು ನಡೆಸಿದೆ ಹಾಗೂ ಭಾರತವು 50,000 ಕ್ಕೂ ಅಧಿಕ ಸ್ಟಾರ್ಟ್ಅಪ್(Start up)ಗಳನ್ನು ಹೊಂದಿದೆ. * UPI ಇದೊಂದು ಅನೇಕ ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್‌ಗೆ ವಿಲೀನಗೊಳಿಸುವ ವ್ಯವಸ್ಥೆಯಾಗಿದೆ. ಈ ಮೊಬೈಲ್ ಅಪ್ಲಿಕೇಶನ್‌ ಮೂಲಕ ಬ್ಯಾಂಕಿಂಗ್ ಸೌಲಭ್ಯಗಳು, ವ್ಯಾಪಾರಿ ಪಾವತಿಗಳು ಮತ್ತು ಪೀರ್-ಟು-ಪೀರ್ ವರ್ಗಾವಣೆಯಂತಹ ಹಲವಾರು ವೈಶಿಷ್ಟ್ಯಗಳನ್ನು ಪಡೆಯಬಹುದಾಗಿದೆ. UPI ಮೂಲಕ ವರ್ಷದ 365 ದಿನಗಳು ಹಾಗೂ 24*7 ಹಣವನ್ನು ವರ್ಗಾವಣೆ ಮಾಡಲು ಅನುಮತಿಯನ್ನು ನೀಡಲಾಗಿದೆ, ಹಾಗೂ ಇದು ಭದ್ರತೆಯನ್ನು ಕಲ್ಪಿಸುತ್ತದೆ, ಹಾಗೂ ಬಳಕೆದಾರರಿಗೆ QR ಕೋಡ್‌ಗಳನ್ನು ಸ್ಕ್ಯಾನ್ ಮಾಡಲು ಪಾವತಿಗಳನ್ನು ಮಾಡಲು ಅವಕಾಶ ನೀಡಲಾಗಿದೆ. * UPI: ಇದೊಂದು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದ ತ್ವರಿತ ನೈಜ-ಸಮಯದ ಪಾವತಿ ವ್ಯವಸ್ಥೆಯಾಗಿದೆ. 2021 ರ ನವೆಂಬರ್ ವೇಳೆಗೆ UPI ನಲ್ಲಿ 274 ಬ್ಯಾಂಕ್‌ಗಳು 4.18 ಶತಕೋಟಿ ವಹಿವಾಟುಗಳ ಮಾಸಿಕ ಪರಿಮಾಣದೊಂದಿಗೆ ಲಭ್ಯವಿದೆ. ಇದು 2021 ರ ಮೇ ವೇಳೆಗೆ ಭಾರತದಲ್ಲಿ 150 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ, ಹಾಗೂ ಇದು 2025 ರ ವೇಳೆಗೆ 500 ಮಿಲಿಯನ್ ಸಾಧಿಸಲು ಯೋಜಿಸಿದೆ. * UPI'ನ್ನು 2016 ರ ಏಪ್ರಿಲ್. 11 ರಂದು ಪರಿಚಯಿಸಲಾಗಿದೆ. * ಇದೀಗ ದೇಶವು ಎಲೆಕ್ಟ್ರಿಕ್ ವಾಹನಗಳ ಮೇಲೆ ಕೆಲಸ ಮಾಡುತ್ತಿದೆ, ಹಾಗೂ 2070 ಕ್ಕೆ ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ. * ಈ ಹಿಂದೆ 2021 ರ ನವೆಂಬರ್'ನಲ್ಲಿ, ಗ್ಲಾಸ್ಗೋದಲ್ಲಿ ಜರುಗಿದ COP26 ಸಮ್ಮೇಳನದಲ್ಲಿ ಭಾರತ ಸರ್ಕಾರವು 2070 ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಭರವಸೆ ನೀಡಿದೆ. ಇನ್ನಿತರ ದೇಶಗಳು ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆಯ ಗಡುವನ್ನು 2050 ಕ್ಕೆ ನಿಗದಿಪಡಿಸಿವೆ.