Job Description: * ಪ್ರಸ್ತುತ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕರು, ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಪರಿಷತ್‌ ಸ್ಥಾಪನೆಯ ಹೋರಾಟಗಾರರಾಗಿದ್ದ ಬಸ್ತಿ ವಾಮನ ಶೆಣೈ ಅವರು ತಮ್ಮ 87ನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣಗಳಿಂದಾಗಿ ವಿಧಿವಶರಾಗಿದ್ದಾರೆ. * ಇವರು ಕೊಂಕಣಿ ಅಕಾಡೆಮಿ ಸ್ಥಾಪನೆಗೆ ಆಗ್ರಹಿಸಿ ಚಳವಳಿಗಳನ್ನು ಆರಂಭಿಸಿದ್ದರು, ಹಾಗೂ ಈ ಹಿಂದೆ ಇವರು 1980ರಿಂದ ಕೊಂಕಣಿ ಭಾಷಾ ಮಂಡಲದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇವರು ಕೊಂಕಣಿ ಅಕಾಡೆಮಿ ಸ್ಥಾಪನೆಗೆ ಆಗ್ರಹಿಸಿ ಚಳವಳಿಗಳನ್ನು ನಡೆಸಿರುವ ಹಿನ್ನಲೆಯಿಂದಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 1994-95ರಲ್ಲಿ ಅಸ್ತಿತ್ವಕ್ಕೆ ಬಂದಿದೆ, ಹಾಗೂ ಇವರು 2 ಬಾರಿ ಈ ಅಕಾಡೆಮಿಯು ಅಧ್ಯಕ್ಷರಾಗಿದ್ದಾರೆ. ಮತ್ತೇ ಇವರು 1993ರಲ್ಲಿ ಕರ್ನಾಟಕ ಕೊಂಕಣಿ ಭಾಷಾ ಮಂಡಲದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. * ಬಸ್ತಿ ವಾಮನ ಶೆಣೈ ಅವರಿಗೆ ಈ ಹಿಂದೆ 1995ರಲ್ಲಿ ಮಂಗಳೂರಿನಲ್ಲಿ ಜರುಗಿದ ಮೊದಲ ವಿಶ್ವ ಕೊಂಕಣಿ ಸಮಾವೇಶದಲ್ಲಿ "ವಿಶ್ವ ಕೊಂಕಣಿ ಸರ್ದಾರ್" ಬಿರುದು ನೀಡಿ ಗೌರವವನ್ನು ನೀಡಲಾಗಿತ್ತು, ಮತ್ತೇ 2004ರಲ್ಲಿ ಇವರು ಅಖಿಲ ಭಾರತ ಕೊಂಕಣಿ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.