Job Description: * ಪ್ರಸ್ತುತ ಭಾರತ ಮೂಲದ ಅಶೋಕ್‌ ಎಲ್ಲುಸ್ವಾಮಿ ಅವರು ಟೆಸ್ಲಾ ಕಂಪನಿಯ ಆಟೊಪೈಲಟ್‌ ತಂಡದ ಮೊದಲ ಉದ್ಯೋಗಿಯಾಗಿ ನೇಮಕಗೊಂಡಿದ್ದಾರೆ ಎಂದು ಟೆಸ್ಲಾ ಕಂಪನಿಯ ಸ್ಥಾಪಕ ಮತ್ತು CEO ಎಲಾನ್‌ ಮಸ್ಕ್‌ ಅವರು ತಿಳಿಸಿದ್ದಾರೆ. * ಈ ಮೊದಲು ಅಶೋಕ್‌ ಎಲ್ಲುಸ್ವಾಮಿ ಅವರು ಚೆನ್ನೈನಲ್ಲಿರುವ ಒಂದು ಎಂಜಿನಿಯರಿಂಗ್‌ ಕಾಲೇಜಿನಲ್ಲಿ BE ಪದವಿ ಪಡೆದು ನಂತರ ಅಮೇರಿಕದ ಕಾರ್ನಿಗಿ ಮೆಲ್ಲಾನ್‌ ವಿಶ್ವವಿದ್ಯಾಲಯದಿಂದ ರೊಬೊಟಿಕ್ಸ್‌ ಸಿಸ್ಟಮ್ ಡೆವಲೆಪ್‌ಮೆಂಟ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ, ಇಲ್ಲಿಯವರೆಗೂ ಇವರು ಫೋಕ್ಸ್‌ವ್ಯಾಗನ್(Volkswagen) ಎಲೆಕ್ಟ್ರಾನಿಕ್ಸ್‌ ರಿಸರ್ಚ್‌ ಲ್ಯಾಬ್‌, ಹಾಗೂ ವ್ಯಾಬ್‌ಕೊ ವೆಹಿಕಲ್‌ ಕಂಟ್ರೋಲ್‌ ಸಿಸ್ಟಮ್‌ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. * ಟೆಸ್ಲಾ ಕಂಪನಿಯು ಯುನೈಟೆಡ್ ಸ್ಟೇಟ್ಸ್ ಮೂಲದ ಅಮೇರಿಕನ್ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಕ್ಲೀನ್ ಎನರ್ಜಿ ಕಂಪನಿಯಾಗಿದೆ. ಟೆಸ್ಲಾ ಎಲೆಕ್ಟ್ರಿಕ್ ಕಾರುಗಳನ್ನು ವಿನ್ಯಾಸ ಹಾಗೂ ಅಭಿವೃದ್ಧಿ ಪಡಿಸುತ್ತದೆ, ಹಾಗೂ ಈ ಕಂಪನಿಯು ಗ್ರಿಡ್-ಸ್ಕೇಲ್‌ಗೆ ಬ್ಯಾಟರಿ ಶಕ್ತಿ ಸಂಗ್ರಹಣೆ, ಸೌರ ಫಲಕಗಳು ಮತ್ತು ಸೌರ ಛಾವಣಿಯ ಟೈಲ್ಸ್ ಮತ್ತು ಸಂಬಂಧಿತ ಉತ್ಪನ್ನಗಳು ಹಾಗೂ ಅದರ ಸೇವೆಗಳನ್ನು ನೀಡುತ್ತದೆ. * ಈ ಟೆಸ್ಲಾ ಕಂಪನಿಯನ್ನು 2003 ರ ಜುಲೈ. 01 ರಂದು ಯುನೈಟೆಡ್ ಸ್ಟೇಟ್ಸ್'ನ, ಕ್ಯಾಲಿಫೋರ್ನಿಯಾದ ಸ್ಯಾನ್ ಕಾರ್ಲೋಸ್ ಎಂಬಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ ಇದರ CEO ಎಲೋನ್ ಮಸ್ಕ್. * ಟೆಸ್ಲಾ ಕಂಪನಿಯ ಪ್ರಧಾನ ಕಛೇರಿಯನ್ನು ಯುನೈಟೆಡ್ ಸ್ಟೇಟ್ಸ್'ನ ಟೆಕ್ಸಾಸ್, ಆಸ್ಟಿನ್ ಎಂಬಲ್ಲಿ ಹೊಂದಿದೆ. ಪ್ರಸ್ತುತ ಈ ಕಂಪನಿಆದಾಯ 2020 ರ ಡಿಸೆಂಬರ್ ವೇಳೆಗೆ 3,154 ಕೋಟಿ USD ಯಾಗಿದೆ. ಸದ್ಯ ಈ ಕಂಪನಿ 2020 ರ ವೇಳೆಗೆ 70,757 ಉದ್ಯೋಗಿಗಳನ್ನು ಹೊಂದಿದೆ, ಹಾಗೂ ಇದು ಸೋಲಾರ್‌ಸಿಟಿ, ಮ್ಯಾಕ್ಸ್‌ವೆಲ್ ಟೆಕ್ನಾಲಜೀಸ್ ಎಂಬ ಅಂಗಸಂಸ್ಥೆಗಳುನ್ನು ಹೊಂದಿದೆ.