Job Description: * ಡಿಆರ್‌ಡಿಒ ಕೇಂದ್ರ ಪ್ರಧಾನ ಏಜೆನ್ಸಿಯಾಗಿದ್ದು, ರಕ್ಷಣಾ ಸಚಿವಾಲಯದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. * ಇದು ಮಿಲಿಟರಿಯ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೊಣೆಯಾಗಿ ಕೆಲಸ ನಿರ್ವಹಿಸುತ್ತಿದೆ. ಈ ಸಂಘಟನೆಯ ಕೇಂದ್ರ ಕಛೇರಿ ದೆಹಲಿಯಲ್ಲಿದೆ. *DRDO ನ ಪ್ರಸ್ತುತ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಡಾ. ಜಿ ಸತೀಶ್ ರೆಡ್ಡಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. * ಡಿಆರ್‌ಡಿಒ ಅನ್ನು ದಿನಾಂಕ : 01 ಜನವರಿ 1958 ರಂದು ಭಾರತೀಯ ಆರ್ಡಿನೆನ್ಸ್ ಫ್ಯಾಕ್ಟರಿಗಳ ತಾಂತ್ರಿಕ ಅಭಿವೃದ್ಧಿ ಮತ್ತು ಉತ್ಪಾದನೆ ಮತ್ತು ತಾಂತ್ರಿಕ ಅಭಿವೃದ್ಧಿ ಸ್ಥಾಪನೆಯ ನಿರ್ದೇಶನಾಲಯವನ್ನು ರಕ್ಷಣಾ ವಿಜ್ಞಾನ ಸಂಸ್ಥೆಯೊಂದಿಗೆ ವಿಲೀನಗೊಳಿಸಿ ಸ್ಥಾಪಿಸಲಾಯಿತು. 1979 ರಲ್ಲಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸೇವೆ (DRDS) ಅನ್ನು ಗ್ರೂಪ್ 'ಎ' ಅಧಿಕಾರಿಗಳು / ವಿಜ್ಞಾನಿಗಳ ಸೇವೆಯಾಗಿ ಸ್ಥಾಪಿಸಲಾಯಿತು. * DRDO ಭಾರತದ ಅತಿದೊಡ್ಡ ಮತ್ತು ಅತ್ಯಂತ ವೈವಿಧ್ಯಮಯ ಸಂಶೋಧನಾ ಸಂಸ್ಥೆಯಾಗಿದೆ. ಇದು DRDS ಗೆ ಸೇರಿದ ಸುಮಾರು 5,000 ವಿಜ್ಞಾನಿಗಳು ಮತ್ತು ಸುಮಾರು 25,000 ಇತರ ಅಧೀನ ವೈಜ್ಞಾನಿಕ, ತಾಂತ್ರಿಕ ಮತ್ತು ಪೋಷಕ ಸಿಬ್ಬಂದಿಯನ್ನು ಒಳಗೊಂಡಿದೆ. * ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ ವು 52 ಪ್ರಯೋಗಾಲಯಗಳ ಜಾಲವನ್ನು ಹೊಂದಿದೆ. ಈ ಪ್ರಯೋಗಾಲಯಗಳು ಏರೋನಾಟಿಕ್ಸ್, ಎಲೆಕ್ಟ್ರಾನಿಕ್ಸ್, ಶಸ್ತ್ರಾಸ್ತ್ರಗಳು, ಜೀವ ವಿಜ್ಞಾನಗಳು, ಭೂ ಯುದ್ಧ ಎಂಜಿನಿಯರಿಂಗ್, ನೌಕಾ ವ್ಯವಸ್ಥೆಗಳು, ವಸ್ತುಗಳು ಮತ್ತು ಕ್ಷಿಪಣಿಗಳಂತಹ ಕ್ಷೇತ್ರಗಳನ್ನು ಒಳಗೊಂಡ ರಕ್ಷಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿಕೊಂಡಿವೆ. * COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ DRDO ಸಹ ಮಹತ್ವದ ಪಾತ್ರವನ್ನು ವಹಿಸಿದೆ. ಇದು PM CARES ನಿಧಿಯ ಸಹಾಯದಿಂದ ಸುಮಾರು 850 ಆಮ್ಲಜನಕ ಘಟಕಗಳು ಮತ್ತು ಕೋವಿಡ್ ಆಸ್ಪತ್ರೆಗಳನ್ನು ಸ್ಥಾಪಿಸಿತು. * ಇದು ಕೋವಿಡ್-19 ವಿರುದ್ಧ ಹೋರಾಡಲು 2DG ಎಂಬ ಔಷಧವನ್ನು ಅಭಿವೃದ್ಧಿಪಡಿಸಿದೆ.