Job Description: * ಪ್ರಸ್ತುತ ವಿಶ್ವದ ಅತಿ ಉದ್ದದ ಮೆಟ್ರೋ ಮಾರ್ಗವನ್ನು ಚೀನಾದ ಶಾಂಘೈ ಪ್ರದೇಶದಲ್ಲಿ ತೆರೆಯಲಾಗಿದೆ. ಇದೀಗ ಈ ಶಾಂಘೈ ನಗರವು ವಿಶ್ವಾದ್ಯಂತ ಅತಿ ದೊಡ್ಡ ಮೆಟ್ರೋ ಜಾಲವನ್ನು ಹೊಂದಿರುವ ನಗರವಾಗಿದೆ. * ಚೀನಾದ ಈ ಶಾಂಘೈ ನಗರವು '2' ಹೊಸ ಮೆಟ್ರೋ ಮಾರ್ಗಗಳನ್ನು ಆರಂಭಿಸಿದೆ - ಲೈನ್ 14 ಮತ್ತು ಲೈನ್ 18 ರ ಎಂಬ ಎರಡು ಮೆಟ್ರೋ ಹಂತವನ್ನು ಆರಂಭಿಸಿದೆ. ಇದೀಗ ಶಾಂಘೈನಲ್ಲಿನ ಮೆಟ್ರೋ ಜಾಲದ ಒಟ್ಟು ಉದ್ದ 831 ಕಿ.ಮೀ. ಆಗಿದೆ, ಈ ಮೂಲಕ ವಿಶ್ವದಾದ್ಯಂತ ಅತಿ ಉದ್ದದ ಮೆಟ್ರೋ ಜಾಲ ಹೊಂದಿದ ನಗರವಾಗಿದೆ. ಮೆಟ್ರೋ ನ ಈ ಎರಡು ಹೊಸ ಮಾರ್ಗಗಳು ಸಂಪೂರ್ಣ ಸ್ವಯಂಚಾಲಿತ ಮೆಟ್ರೋ ಮಾರ್ಗಗಳಾಗಿವೆ. * ಪ್ರಸ್ತುತ ಚೀನಾದ ಈ ಶಾಂಘೈ ನಗರ ಪ್ರದೇಶದಲ್ಲಿ 20 ಮೆಟ್ರೋ ಮಾರ್ಗಗಳು, 508 ನಿಲ್ದಾಣಗಳಿವೆ. * ಶಾಂಘೈ: ಈ ಪ್ರದೇಶವು ಚೀನಾ ದೇಶದಲ್ಲಿನ '4' ನೇರ ಆಡಳಿತವನ್ನು ಹೊಂದಿರುವ ಪುರಸಭೆಗಳಲ್ಲಿ ಇದು ಒಂದಾಗಿದೆ. ಇದು ಯಂಗ್ಟಜ್ (Yangtze) ನದಿಯ ದಕ್ಷಿಣದಲ್ಲಿದೆ, ಈ ನಗರವು ಚೀನಾ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ, ಹಾಗೂ ಇದು ಪೂರ್ವ ಏಷ್ಯಾದ ಏಕೈಕ ನಗರವಾಗಿದೆ. * ಇದೇ ಶಾಂಘೈ ನಗರ ಪ್ರದೇಶದಲ್ಲಿ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನ ಪ್ರಧಾನ ಕಛೇರಿಯಿದೆ. ಹಾಗೂ ಈ ನಗರವು ಪ್ರತಿ ವರ್ಷವು ಹಲವಾರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕಾರ್ಯಕ್ರಮಗಳನ್ನು ನಡೆಸುತ್ತದೆ.