Job Description: * ಇದೀಗ ನಾಸಾ(NASA) ವಿಶ್ವದ ಮೊಟ್ಟಮೊದಲ ಉಪಗ್ರಹಾಧಾರಿತ ರಕ್ಷಣಾ ವ್ಯವಸ್ಥೆಯಾಗಿರುವ 'ಡಾರ್ಟ್' (Double Asteroid Redirection Test-DART)'ನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದೆ. * ಅಮೇರಿಕದ ನಾಸಾ ಸಂಸ್ಥೆಯು 'ಡಿಮಾರ್ಫಸ್' ಎಂಬ ಕ್ಷುದ್ರಗ್ರಹವನ್ನು ನಾಶಪಡಿಸುವ ಉದ್ದೇಶದಿಂದ ಈ ಕ್ಷಿಪಣಿಯ ಪ್ರಯೋಗವನ್ನು ನಡೆಸಿದೆ ಎನ್ನಲಾಗಿದೆ. * ಈ 'ಡಾರ್ಟ್'ನ್ನು ಸ್ಪೇಸ್ ಎಕ್ಸ್ನ ಫಾಲ್ಕನ್ '9′ ರಾಕೆಟ್ನ್ನು ಬಳಸಿ ಆಕಾಶಕ್ಕೆ ರವಾನಿಸಲಾಗಿದೆ. * ಈ ಡಾರ್ಟ್' ಕ್ಷಿಪಣಿಯು 160 ಮೀ. ವ್ಯಾಸವನ್ನು ಹೊಂದಿರುವ ಕ್ಷುದ್ರಗ್ರಹವನ್ನು ನಾಶಪಡಿಸಲಿದೆ, ಈ ಮೊದಲು ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಲಿದೆ ಎಂದು ಅಂದಾಜಿಸಲಾಗಿತ್ತು, ಆದರೆ ಇದು ಭೂಮಿಗೆ ಅಪ್ಪಳಿಸುವುದಿಲ್ಲ ಎಂದು ಕ್ರಮೇಣವಾಗಿ ತಿಳಿದುಬಂದಿದೆ. * ಮುಂದಿನ ದಿನಗಳಲ್ಲಿ ಈ ಕ್ಷುದ್ರಗ್ರಹಗಳ ಅಪಾಯವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ನಾಸಾ ತಿಳಿಸಿದೆ. * ಇದೀಗ ಈ ಡಾರ್ಟ್' ಕ್ಷಿಪಣಿಯು ಬಾಹ್ಯಾಕಾಶದಲ್ಲಿ ಪ್ರತಿ ಸೆಕೆಂಡಿಗೆ 6.6 ಕಿ.ಮೀ. ಅಥವಾ ಗಂಟೆಗೆ 24,000 ಕಿ.ಮೀ. ವೇಗದಲ್ಲಿ ಸಾಗುತ್ತಿದೆ, ಹಾಗೂ ಇದು 2022 ರ ಸೆ. 26 ರಿಂದ ಅ. 1 ರ ಮಧ್ಯದಲ್ಲಿ ಢಿಕ್ಕಿ ಹೊಡಿಯುವ ಸಾಧ್ಯತೆಗಳಿವೆ ಎಂದು ನಾಸಾ ವಿಜ್ಞಾನಿಗಳು ಮಾಹಿತಿಯನ್ನು ನೀಡಿದ್ದಾರೆ.