Job Description: * ಪ್ರಸ್ತುತ ಅಮೇರಿಕ ರಾಷ್ಟ್ರವು ವರ್ಚುವಲ್ ಮೂಲಕ ಜರುಗುವ ಪ್ರಜಾಪ್ರಭುತ್ವದ ಬಗೆಗಿನ ಶೃಂಗಸಭೆಗೆ ಸ್ವಯಂ ಆಡಳಿತ ವ್ಯವಸ್ಥೆಯಿರುವ ತೈವಾನ್ಗೆ ಆಹ್ವಾನವನ್ನು ನೀಡಿದೆ, ಇದೀಗ ಚೀನಾ ರಾಷ್ಟ್ರವು ಆಮೇರಿಕಾದ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದೆ ಎಂದು ತಿಳಿದುಬಂದಿದೆ. * ತೈವಾನ್ ಪ್ರದೇಶವು ಚೀನಾ ರಾಷ್ಟ್ರದ ಅವಿಭಾಜ್ಯ ಅಂಗವಾಗಿದೆ. * ಅಮೇರಿಕದ ತಥಾಕಥಿತ ಪ್ರಜಾಪ್ರಭುತ್ವ ಶೃಂಗಸಭೆಯಲ್ಲಿ ತೈವಾನ್ ಅಧಿಕಾರಿಗಳು ಭಾಗಿಯಾಗುವಂತೆ ಅಮೇರಿಕ ರಾಷ್ಟ್ರವು ನೀಡಿರುವ ಆಹ್ವಾನವನ್ನು ಚೀನಾ ದೇಶವು ಇದೀಗ ವಿರೋಧಿಸುತ್ತಿದೆ ಎಂದು ಚೀನಾ ದೇಶದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಝಾವೊ ಲಿಜಿಯನ್ ಅವರು ತಿಳಿಸಿದ್ದಾರೆ.