Job Description: * ಬಿಸಿಸಿಐ ಅಧ್ಯಕ್ಷ ಸೌರವ ಗಂಗೂಲಿ ಅವರು ಐಸಿಸಿ ಪುರುಷರ ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. * ಐಸಿಸಿ ಪುರುಷರ ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿದ್ದ ಅನಿಲ ಕುಂಬ್ಳೆ ಅವರು ಕಳೆದ ಒಂಬತ್ತು ವರ್ಷಗಳಿಂದ ಸೇವಾವಧಿಯಲ್ಲಿದ್ದರು. ಪ್ರಸ್ತುತ ಅವರ ಸೇವಾವಧಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅವರ ಸ್ಥಾನದಲ್ಲಿ ಈಗ ಗಂಗೂಲಿ ಅವರು ಆಯ್ಕೆಯಾಗಿದ್ದಾರೆ. * ಕುಂಬ್ಳೆ ಅವರ ಸ್ಥಾನಕ್ಕೆ ಗಂಗೂಲಿ ಅವರ ನೇಮಕಾತಿ ಕುರಿತು ಐಸಿಸಿ ಮುಖ್ಯಸ್ಥ ಗ್ಲೆಗ್ ಬಾರ್ಕ್ಲೇ ಅವರು ತಿಳಿಸಿದ್ದಾರೆ. * ಐಸಿಸಿ ಮಹಿಳಾ ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿ ವೆಸ್ಟ್ ಇಂಡೀಸ್ ನ ಸಿಇಓ ಜಾನಿ ಗ್ರೇವ್ ಆಯ್ಕೆಯಾಗಿದ್ದಾರೆ.