Job Description: * ದಿ ರಿವರ್ ಫೆಸ್ಟಿವಲ್ 2021ರ ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ (NMCG) ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸೇರ್ಪಡೆಯಾಗಿದೆ. * ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ಸುಮಾರು ಒಂದು ಗಂಟೆಗಳ ಕಾಲ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಕೈಬರಹದ ಟಿಪ್ಪಣಿಗಳ ದಾಖಲೆಯ ಫೋಟೋಗಳನ್ನು ಹಚ್ಚಿಕೊಳ್ಳುವ ಮೂಲಕ ಗಿನ್ನೆಸ್ ಪುಸ್ತಕದಲ್ಲಿ ಸೇರ್ಪಡೆಯಾಗಿದೆ. * ಪ್ರಸ್ತುತ ಗಂಗಾ ನದಿ ಪುನರುಜ್ಜೀವನದ ಬಗ್ಗೆ ಜಾಗೃತಿ ಮೂಡಿಸಲು ಗಂಗಾ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. * 5ನೇ ಆವೃತ್ತಿಯು ಗಂಗಾ ಉತ್ಸವ ವಾಸ್ತವಿಕವಾಗಿ ವಿನೋದ ಹಾಗೂ ಹಬ್ಬಗಳೊಂದಿಗೆ ಆರಂಭವಾಗಿದೆ, ಈ ಹಬ್ಬವು ಗಂಗಾ ನದಿ ಹಾಗೂ ಭಾರತದ ಇತರ ನದಿಗಳ ವೈಭವವನ್ನು ಆಚರಿಸಲು ಸಹಾಯ ಮಾಡಲಿದೆ. * ಗಂಗಾ ಉತ್ಸವವನ್ನು, ಗಂಗಾ ಸ್ವಚ್ಛತೆಯ ರಾಷ್ಟ್ರೀಯ ಮಿಷನ್ನಿಂದ ಆಚರಣೆ ಮಾಡಲಾಗುತ್ತದೆ, ಇದನ್ನು 3 ದಿನಗಳ ಹಬ್ಬವಾಗಿ ಆಚರಿಸಲಾಗುತ್ತದೆ, ಈ 3 ದಿನಗಳ ಗಂಗಾ ಉತ್ಸವದಲ್ಲಿ ಕಥೆ, ಜಾನಪದ ಕಥೆ, ಹಾಗೂ ಸಂವಾದಗಳು, ರಸಪ್ರಶ್ನೆಗಳು, ಸಂಗೀತ ಮತ್ತು ನೃತ್ಯ ಪ್ರದರ್ಶನಗಳು ಹಾಗೂ ಫೋಟೋ ಗ್ಯಾಲರಿಗಳನ್ನು ತೋರಿಸುವ ಮೂಲಕ ಆಚರಣೆ ಮಾಡಲಾಗುತ್ತದೆ. * ಈ ಗಂಗಾ ಉತ್ಸವವನ್ನು ಪ್ರಯಾಗರಾಜ್ನಲ್ಲಿನ, ಗಂಗಾ ನದಿ ಹಾಗೂ ಯಮುನಾ ನದಿಯ ಸಂಗಮದಲ್ಲಿ ಆಚರಣೆ ಮಾಡಲಾಗುತ್ತದೆ.